ನಾವು ಚೀನಾ ಆ್ಯಪ್ ಡಿಲೀಟ್ ಮಾಡ್ತಿದ್ರೆ ಗೂಗಲ್ ಪ್ಲೇ ಸ್ಟೋರ್ Remove China App‌ನ್ನೇ ಡಿಲೀಟ್ ಮಾಡಿತು!

ಚೀನಾದ ಟಿಕ್ ಟಾಕ್ ಅನ್ನು ಭಾರತದ ಬಹುತೇಕ ಜನತೆ Uninstall ಮಾಡಿ, ಅದಕ್ಕೆ ಅತೀ ಕಡಿಮೆ ರೇಟಿಂಗ್ ನೀಡುವ ಮೂಲಕ ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಕೋರಿತ್ತು.

ಆದರೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಟಿಕ್ ಟಾಕ್ ನ ಪ್ರತಿ ಸ್ಪರ್ಧಿ ಎನ್ನುವ Mitron ಆ್ಯಪ್ ಅನ್ನು ಡಿಲೀಟ್ ಮಾಡಿದ್ದು, ಇದೀಗ Remove China App ಅನ್ನು ಕೂಡ ತೆಗೆದು ಹಾಗಿದೆ.ಇದು ಭಾರತೀಯ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ಆ್ಯಪ್ ಡೆವೆಲಪರ್ ಈ ಕುರಿತು ಟ್ವಿಟ್ ಮಾಡಿ ಮಾಹಿತಿ ನೀಡಿದ್ದು, Play Store Remove China App ಅನ್ನು ತೆಗೆದು ಹಾಕಿದೆ. 2 ವಾರಗಳಿಂದ ನೀವು ತೋರಿದ ಪ್ರೀತಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

ಟ್ವಿಟರ್ ಟ್ರೆಂಡ್


ಈ ಬಗ್ಗೆ ಟ್ವಿಟರ್ ಟ್ರೆಂಡ್ ಆಗುತ್ತಿದ್ದು, ಗೂಗಲ್ ಪ್ಲೇ ಸ್ಟೋರ್ ಕುರಿತು ಜನರು ಕಿಡಿಕಾರುತ್ತಿದ್ದಾರೆ. ಟಿಕ್ ಟಾಕ್ ವಿರುದ್ಧ ನೀಡಿದ್ದ 80 ಲಕ್ಷ ನೆಗಟಿವ್ ಕಮೆಂಟ್ ಗಳನ್ನು ಡಿಲೀಟ್ ಮಾಡಿದ್ದು, 5 ಮಿಲಿಯನ್ ಡೌನ್ ಲೋಡ್ ಹೊಂದಿರುವ Remove China App ಡಿಲೀಟ್ ಮಾಡಿದೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.