Month: June 2020

ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ ಬಗ್ಗೆ ವಿಶೇಷ ಲೇಖನ : ಹರೀಶ್ ಪುತ್ತೂರು

ಸುತ್ತಮುತ್ತಲು ನೋಡಿದರೆ ಹಚ್ಚ ಹಸುರಿನಿಂದ ಕೂಡಿದ ಪ್ರಕೃತಿಯ ಸೊಬಗು, ಜೋರಾಗಿ ಸುರಿಯುತ್ತಿರುವ ಮಳೆ, ಇದ್ದಕ್ಕಿದ್ದಂತೆ ಮನೆಯ ಸುತ್ತಲಿನ ಪ್ರದೇಶವೆಲ್ಲ ನೀರು ತುಂಬಿ ನದಿಯಂತೆ ಪರಿವರ್ತನೆಯಾದ ರೀತಿ, ಹಿಮಾಲಯ ಪರ್ವತದಂತೆ ಕಣ್ಣಿಗೆ ಕಾಣುತ್ತಿದ್ದ ಬೆಟ್ಟಗಳು ಕುಸಿಯುತ್ತಿರುವುದು ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಜೀವಿತವಧಿಯ ಅಂತಿಮ ಘಟ್ಟವನ್ನು ತಲುಪಿದ ಅನುಭವಿಸಿದ ಹಾಗಾಯ್ತು. ಇದು ಯಾವುದೇ ಸಿನಿಮಾದ ಕಥೆಯಲ್ಲಿ 2018 ರಲ್ಲಿ ಕೊಡಗು ಮತ್ತು ಸೋಮವಾರ ಪೇಟೆಯ ಆಸುಪಾಸಿನಲ್ಲಿ ನಡೆದಂತ ಘಟನೆ. ಜೋರಾಗಿ ಆರ್ಭಟಿಸಿದ ಮಳೆರಾಯ, ನದಿಯೇ ಇಲ್ಲದ ಪ್ರದೇಶ ಏಕಾಏಕಿ ನದಿಯಾಗಿ …

ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ ಬಗ್ಗೆ ವಿಶೇಷ ಲೇಖನ : ಹರೀಶ್ ಪುತ್ತೂರು Read More »

ಈ ಸೈಕಲ್ ನ ಬೆಲೆ ಕೇವಲ 12 ಲಕ್ಷ ರೂಪಾಯಿಗಳು !

ಮಂಗಳೂರು: ದುಬಾರಿ ಬೆಲೆಯ ಬೈಕ್‌, ಕಾರುಗಳ ಖರೀದಿ ಸಾಮಾನ್ಯ. ಆದರೆ ಮಂಗಳೂರು ನಗರದಲ್ಲೊಬ್ಬರು 12 ಲ.ರೂ. ಮೌಲ್ಯದ ಸೈಕಲ್‌ ಖರೀದಿಸಿ ಗಮನ ಸೆಳೆದಿದ್ದಾರೆ. ಮೈಸೂರಿನ “ಟ್ರಯತ್ಲಾನ್‌’ ಕ್ರೀಡಾ ಪಟುವೊಬ್ಬರು ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ತಾಜ್‌ ಸೈಕಲ್‌ ಕಂಪೆನಿಯಲ್ಲಿ ಅದನ್ನು ಖರೀದಿಸಿದ್ದಾರೆ. ಈಗಾಗಲೇ ಮಳಿಗೆ ಯಲ್ಲಿ ಈ ಸೈಕಲ್‌ ಪ್ರದರ್ಶನಗೊಳ್ಳುತ್ತಿದ್ದು, ಜೂ. 4ರಂದು ಖರೀದಿದಾರರಿಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆಯ ಪ್ರಮುಖರಾದ ಮುಬಿನ್‌ ತಿಳಿಸಿದ್ದಾರೆ. ಒಂದು ಕ್ಷಣ ಯೋಚಿಸಿ ನೋಡಿದರೆ 4 -5 ಜನ ಕುಟುಂಬ ಸಮೇತರಾಗಿ ಆರಾಮವಾಗಿ ಕುಳಿತುಕೊಂಡು ಹೋಗುವ …

ಈ ಸೈಕಲ್ ನ ಬೆಲೆ ಕೇವಲ 12 ಲಕ್ಷ ರೂಪಾಯಿಗಳು ! Read More »

ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷಾ ಅಭ್ಯರ್ಥಿಗಳಿಗೆ ಆನ್ ಲೈನ್ ತರಗತಿ

ಬೆಂಗಳೂರು: ಜೂನ್ 4, ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆಯನ್ನು ಜೂನ್ 18ರಂದು ನಡೆಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಪೂರಕ ಸಿದ್ಧತೆಗಳನ್ನು ಶಿಕ್ಷಣ ಇಲಾಖೆ ಕೈಗೊಳ್ಳಲಾಗುತ್ತಿದೆ. ಈ ಮಧ್ಯೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮಹತ್ವದ ಸೂಚನೆಯನ್ನು ಹೊರಡಿಸಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್ ಲೈನ್ ತರಗತಿ ನಡೆಸಲು ನಿರ್ದೇಶಿಸಿದ್ದಾರೆ. ಕಳೆದ ಮೂರು ತಿಂಗಳ ಅಂತರದಿಂದಾಗಿ ವಿದ್ಯಾರ್ಥಿಗಳು ಓದಿದ್ದನ್ನು ಮರೆಯುವ ಸಾಧ್ಯತೆ ಇರುವ ಕಾರಣ ಆನ್ಲೈನ್ ಮೂಲಕ ಪುನರ್ಮನನ ತರಗತಿ ನಡೆಸಬೇಕೆಂದು ಸೂಚಿಸಲಾಗಿದ್ದು, ಈ ಕುರಿತಂತೆ ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು …

ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷಾ ಅಭ್ಯರ್ಥಿಗಳಿಗೆ ಆನ್ ಲೈನ್ ತರಗತಿ Read More »

ಕಡಬದ ವ್ಯಕ್ತಿ ಆಳದಪದವಿನಲ್ಲಿ ನೇಣಿಗೆ ಶರಣು

ಕಡಬ: ಕುಟ್ರುಪಾಡಿ ಗ್ರಾಮದ ಮುಳಿಯ ನಿವಾಸಿ ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ಆಳದಪದವು ಎಂಬಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕುಟ್ರುಪಾಡಿ ಗ್ರಾಮದ ಮುಳಿಯ ಬಾಲಕೃಷ್ಣ ಶೆಟ್ಟಿ ಎಂಬವರ ಪುತ್ರ ನವೀನ್ ಶೆಟ್ಟಿಯವರು ಕಳೆದ ಹಲವು ವರ್ಷಗಳಿಂದ ಆಳದಪದವಿನಲ್ಲಿ ವಾಸವಿದ್ದರು. ಇವರ ಪತ್ನಿ ಮಕ್ಕಳು ಕಳೆದ ಶನಿವಾರ ಅವರ ತಾಯಿ ಮನೆಗೆ ತೆರಳಿದ ಸಂದರ್ಭ ಮನೆಯಲ್ಲಿ ಓರ್ವರೇ ಇದ್ದ ಇವರು ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಅವರ …

ಕಡಬದ ವ್ಯಕ್ತಿ ಆಳದಪದವಿನಲ್ಲಿ ನೇಣಿಗೆ ಶರಣು Read More »

2018 ಮಡಿಕೇರಿಯಲ್ಲಿ ಜಲಪ್ರಳಯದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಮನೆ ಕೀ ಹಸ್ತಾಂತರ

ಮಡಿಕೇರಿ : 2018 ಜಲಪ್ರಳಯದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಕಟ್ಟಿದ ಹೊಸ ಮನೆ ಕೀಯನ್ನು ವಸತಿ ಸಚಿವ ವಿ.ಸೋಮಣ್ಣ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ಹಸ್ತಾಂತರ ಮಾಡಿದರು. ಮಾದಾಪುರ ಬಳಿಯ ಜಂಬೂರಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಬಡಾವಣೆಯಲ್ಲಿ 383 ಸಂತ್ರಸ್ತರಿಗೆ ಸರ್ಕಾರ ಮನೆ ನೀಡಿದೆ. ಸಂತ್ರಸ್ತರಾದ 800ಕ್ಕೂ ಅಧಿಕ ಕುಟುಂಬಗಳ ಪೈಕಿ 436 ಕುಟುಂಬಗಳಿಗೆ ಗುರುವಾರ ಮನೆಗಳು ಹಸ್ತಾಂತರವಾಗಿದೆ. ಮನೆ ಚಾಲನೆಗೆ ಬಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಎರಡು ವರ್ಷಗಳಿಂದ ಸಂತ್ರಸ್ತ ಕುಟುಂಬಗಳು ಸೂರಿಗಾಗಿ ಚಾತಕ ಪಕ್ಷಿಗಳಂತೆ …

2018 ಮಡಿಕೇರಿಯಲ್ಲಿ ಜಲಪ್ರಳಯದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಮನೆ ಕೀ ಹಸ್ತಾಂತರ Read More »

ಶಾಲಾ ಆರಂಭದ ಬಗ್ಗೆ ಗೋಪಾಲಕೃಷ್ಣ ಪಿ. ಎಸ್ ರವರ ಅಭಿಪ್ರಾಯ

ಸಮಸ್ತ ಓದುಗ ಮಿತ್ರರಿಗೆ ನಮಸ್ತೆ.ಕೊರೋನ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾ ಉಂಟು ಹೀಗಿರುವಾಗ‌ ಶಾಲೆ ಆರಂಬಿಸೋದು ಸಮಂಜಸವಲ್ಲ. ಕೊರೊನ ಒಬ್ಬ‌ ವಿಧ್ಯಾರ್ಥಿಗೆ ಬಂದರೆ ಆ ಶಾಲೆಯ ಎಲ್ಲಾ ವಿಧ್ಯಾರ್ಥಿಗಳು ಅವರ ಪೋಷಕರು,ಶಿಕ್ಷಣ ಸಂಸ್ಥೆಯಲ್ಲಿನ ಅಧ್ಯಾಪಕರು,ಅಧ್ಯಾಪಕೇತರರು, ಆಡಳಿತ ಮಂಡಳಿಯವರು ಅವರ ಮನೆಯವರು ಎಲ್ಲರಿಗೂ ಬರುವ ಸಾಧ್ಯತೆ ಅಧಿಕ.ಹೀಗಿರುವಾಗ ಇಡೀ ಸಮಾಜವೇ ವಿಷವರ್ತುಲದಲ್ಲಿ ಸಿಲುಕುತ್ತದೆ ಆದುದರಿಂದ ಈ ಮಹಾಮಾರಿಯು ಕಂಟ್ರೋಲ್ಗೆ ಬಂದ ನಂತರ ಶಾಲೆ ಆರಂಭಿಸಿದರೆ ಭವಿಷ್ಯ ಉಜ್ವಲವಾದೀತು.ಒಂದು ವೇಳೆ ಸರಕಾರ ಆತುರದ ತೀರ್ಮಾನ ತೆಗೆದುಕೊಂಡರೆ ನಮ್ಮ ರಾಜ್ಯದಲ್ಲಿ ಕೊರೊನದಿಂದ …

ಶಾಲಾ ಆರಂಭದ ಬಗ್ಗೆ ಗೋಪಾಲಕೃಷ್ಣ ಪಿ. ಎಸ್ ರವರ ಅಭಿಪ್ರಾಯ Read More »

ವಿ.ಹಿಂ.ಪ. ಮುಖಂಡ ಆನಂದ ಕಲ್ಲಕಟ್ಟ ನಿಧನ

ವಿಟ್ಲ : ವಿಶ್ವ ಹಿಂದೂ ಪರಿಷದ್ ನ ಜಿಲ್ಲಾ ಉಪಾಧ್ಯಕ್ಷ ಆನಂದ ಕಲ್ಲಕಟ್ಟ ಅವರು ಜೂ.4 ರಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಹಲವು ವರ್ಷಗಳಿಂದ ಹಿಂದೂ ಸಂಘಟನೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಸಂತಾಪ ವ್ಯಕ್ತಪಡಿಸಿದೆ.

ವಿಕಲಚೇತನರಿಗೆ ಸಿಗುವ ಸೌಲಭ್ಯ ಕಸಿದುಕೊಳ್ಳಲು ರಾಜಕೀಯ ಪ್ರಯತ್ನ

ಪುತ್ತೂರು : ಕಳೆದ ನಾಲ್ಕು ವರ್ಷಗಳ ಹಿಂದೆ ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ನಾನು ಮರದಿಂದ ಬಿದ್ದ ಪರಿಣಾಮ ಪೈನಲ್‍ಕಾರ್ಡಿಗೆ ಪೆಟ್ಟುಬಿದ್ದು ಸೊಂಟದಿಂದ ಕೆಳಭಾಗಕ್ಕೆ ಸ್ಪರ್ಶ ಜ್ಞಾನ ಇಲ್ಲದಂತಾಗಿದೆ. ಸದಾ ಹಾಸಿಗೆಯಲ್ಲಿಯೇ ಬದುಕು ಸವೆಸುತ್ತಿರುವ ನನಗೆ ನಾಲ್ಕೂವರೆ ವರ್ಷದ ಪುಟ್ಟ ಮಗು ಇದೆ. ನನಗೆ ಅಂಗವಿಕಲ ಸೌಲಭ್ಯಕ್ಕೆ ಸಿಗದಂತೆ ಮಾಡಲು`ರಾಜಕೀಯ’ ನಡೆಸಲಾಯಿತು. ಕೊನೆಗೆ ಲೋಕಾಯುಕ್ತ ಇಲಾಖೆಯ ಮೂಲಕ ನಾನು ನಡೆಸಿದ ಕಾನೂನು ಹೋರಾಟದಿಂದ ಸೌಲಭ್ಯ ಪಡೆದುಕೊಂಡಿದ್ದೇನೆ. ನನ್ನಂತಹ ಶಾಶ್ವತ ಅಂಗವಿಕಲ ವ್ಯಕ್ತಿ ಜತೆ ರಾಜಕೀಯ ಜಿದ್ದು ತೋರ್ಪಡಿಸುವ ವ್ಯಕ್ತಿಗಳಿಗೆ …

ವಿಕಲಚೇತನರಿಗೆ ಸಿಗುವ ಸೌಲಭ್ಯ ಕಸಿದುಕೊಳ್ಳಲು ರಾಜಕೀಯ ಪ್ರಯತ್ನ Read More »

ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ಸಿಬ್ಬಂದಿಗಳನ್ನು ತೆಗೆಯಲ್ಲ – ಬೊಮ್ಮಾಯಿ | ಯು ಟರ್ನ್ ತೆಗೆದುಕೊಂಡ ಗೃಹ ಇಲಾಖೆ

ಬೆಂಗಳೂರು: ಜೂನ್ 4, ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ಸಿಬ್ಬಂದಿಗಳನ್ನು ಪುನರ್ ಹಂಚಿಕೆ ಮಾಡಿ ಸುತ್ತೊಲೆ ಹೊರಡಿಸಿತ್ತು. ಇದರಿಂದಾಗಿ 9000 ಗೃಹರಕ್ಷಕ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವಂತಾಗಿತ್ತು. ಇದೀಗ ಯಾವುದೇ ಗೃಹರಕ್ಷಕ ಸಿಬ್ಬಂದಿಗಳನ್ನು ತೆಗೆಯಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಗೃಹರಕ್ಷಕ ಸಿಬ್ಬಂದಿ ವೇತನದಲ್ಲಿ ಯಾವುದೆ ಕಡಿತ ಇಲ್ಲ. ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಪ್ರಸ್ತಾಪ ಇಲ್ಲ ಎಂದು …

ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ಸಿಬ್ಬಂದಿಗಳನ್ನು ತೆಗೆಯಲ್ಲ – ಬೊಮ್ಮಾಯಿ | ಯು ಟರ್ನ್ ತೆಗೆದುಕೊಂಡ ಗೃಹ ಇಲಾಖೆ Read More »

ಪಂಪ್ ವೆಲ್ ಫ್ಲೈಓವರ್ ಗೆ ‘ವೀರ ಸಾವರ್ಕರ್ ಮೇಲ್ಸೇತುವೆ ಪಂಪ್ ವೆಲ್’ ಎಂಬ ಬ್ಯಾನರ್ ಮತ್ತೆ ಅಳವಡಿಕೆ ಮೂಲಕ ವಿವಾದ ಸೃಷ್ಠಿ

ಮಂಗಳೂರು : ನಗರದಲ್ಲಿ ಮತ್ತೆ ನಿನ್ನೆ ಪಂಪ್ ವೆಲ್ ಮೇಲ್ಸೇತುವೆಗೆ ಮತ್ತೆ ವೀರಸಾವರ್ಕರ್ ಫೋಟೋ ಇರುವ ಬ್ಯಾನರ್ ಅಳವಡಿಸಿ ವಿವಾದ ಸೃಷ್ಟಿಸಲಾಗಿದೆ. ಅಲ್ಲದೆ ಮಂಗಳೂರಿನ ನೆಹರೂ ಮೈದಾನಕ್ಕೆ ಕೋಟಿ ಚೆನ್ನಯ್ಯ ಬ್ಯಾನರ್ ಹಾಗೂ ತೊಕ್ಕೊಟ್ಟು ಫ್ಲೈ ಓವರ್ ಗೆ ವೀರ ರಾಣಿ ಅಬ್ಬಕ್ಕನ ಹೆಸರಿನ ಬ್ಯಾನರ್ ಅಳವಡಿಸಲಾಗಿದೆ. ಇದೇ ರೀತಿ ಪಂಪ್ ವೆಲ್ ಫ್ಲೈಓವರ್ ಗೆ ವೀರ ಸಾವರ್ಕರ್ ಮೇಲ್ಸೇತುವೆ ಪಂಪ್ ವೆಲ್ ಎಂಬ ಬ್ಯಾನರ್ ಅನ್ನು ಎರಡು ದಿನಗಳ ಹಿಂದೆ ಅಂಟಿಸಲಾಗಿತ್ತು. ರಾತ್ರಿ ಎಂಟು ಗಂಟೆಗೆ ಈ …

ಪಂಪ್ ವೆಲ್ ಫ್ಲೈಓವರ್ ಗೆ ‘ವೀರ ಸಾವರ್ಕರ್ ಮೇಲ್ಸೇತುವೆ ಪಂಪ್ ವೆಲ್’ ಎಂಬ ಬ್ಯಾನರ್ ಮತ್ತೆ ಅಳವಡಿಕೆ ಮೂಲಕ ವಿವಾದ ಸೃಷ್ಠಿ Read More »

error: Content is protected !!
Scroll to Top