ರೆಡ್ ಝೋನ್ ನಲ್ಲೂ ಸಿಗಲಿದೆ ಗ್ರೀನ್ ಲೇಬಲ್ | ಮದ್ಯ ಪ್ರಿಯರು ಖುಷ್ ! ಷರತ್ತು ಅನ್ವಯ

ಬೆಂಗಳೂರು, ಮೇ 2 : ಹಸಿರುವಲಯದಲ್ಲಿ ಮಾತ್ರ ಮದ್ಯ ಮಾರಾಟ ಅವಕಾಶ ನೀಡಿದ್ದ ಕೇಂದ್ರ ಸರ್ಕಾರ ರೆಡ್‌ಝೋನ್ ನಲ್ಲೂ ಮದ್ಯ ಮಾರಾಟಕ್ಕೆ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದುದರಿಂದ ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಮದ್ಯ ಮೇ 4 ರಿಂದ ದೊರೆಯಲಿದೆ.

ಕೇಂದ್ರ ಸರ್ಕಾರವೂ ಶುಕ್ರವಾರವಷ್ಟೇ ಹಸಿರು ವಲಯದಲ್ಲಿ ಮಾತ್ರ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಿತ್ತು. ಆದರೀಗ, ಮತ್ತೆ ಸ್ಪಷ್ಟೀಕರಣ ನೀಡಿರುವ ಕೇಂದ್ರ ಗೃಹ ಇಲಾಖೆ ಆರೇಂಜ್​​ ಜೋನ್​​ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಸರಕಾರದ ಬೊಕ್ಕಸದ ಸುಮಾರು ಶೇಕಡ 15 ಪರ್ಸೆಂಟ್ ಅಷ್ಟು ಸಂಪನ್ಮೂಲವನ್ನು ಅಬಕಾರಿ ಇಲಾಖೆಯ ತಂದುಕೊಡುವಾಗ ಮದ್ಯವನ್ನು ತುಂಬಾ ಸಮಯ ಬಂದ್ ಮಾಡಿದರೆ ಸರಕಾರಕ್ಕೆ ನಷ್ಟ ಅಷ್ಟೇ ಎಂಬುದನ್ನು ಕೊನೆಗೂ ಸರಕಾರ ಅರ್ಥಮಾಡಿಕೊಂಡಿದೆ.

ಆರೆಂಜ್ ಝೋನ್ ಅಲ್ಲದೇ ರೆಡ್ ಝೋನ್ ಗಳಲ್ಲಿ ಕೂಡಾ ಕೆಲವು ಷರತ್ತುಗಳೊಂದಿಗೆ ಮದ್ಯ ಮಾರಾಟ ಮಾಡಬಹುದು ಎಂದಿದೆ. ಬೆಳಿಗ್ಗೆ 9 ರಿಂದ ಸಂಜೆ 7ರವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ.

ರೆಡ್ ಝೋನ್ ನಲ್ಲಿ ಆರು ಅಡಿ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯವಾಗಿದೆ.

Leave A Reply

Your email address will not be published.