ಸುಳ್ಯ|ಗಾಂಧಿನಗರ ಜುಮಾ ಮಸೀದಿಯಿಂದ ಆರುನೂರಕ್ಕೂ ಹೆಚ್ಚು ಅರ್ಹ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಕೊರೋಣ ಮಹಾಮಾರಿ ವೈರಸ್ಸಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ಡೌನ್
ಜಾರಿ ಯಲ್ಲಿದ್ದು ಜನಸಾಮಾನ್ಯನು ಉದ್ಯೋಗವಿಲ್ಲದೆ, ವ್ಯಾಪಾರ-ವಹಿವಾಟು ಗಳಿಲ್ಲದೆ, ಜೀವನೋಪಾಯಕ್ಕೆ ದಾರಿಕಾಣದೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನೊಂದ ಜೀವಗಳಿಗೆ ಆಸರೆಯಾಗಿ ಬಡಕುಟುಂಬಗಳ ಕಣ್ಣೀರೊರೆಸುವ ಕಾರ್ಯಕ್ಕೆ ಮುಂದಾದ ಸುಳ್ಯ ಗಾಂಧಿನಗರ ತರ್ಬಿಯತುಲ್ ಇಸ್ಲಾಂ ಜಮಾಅತ್ ಸಮಿತಿ ಹಾಗೂ ಮುನವ್ವರುಲ್ ಇಸ್ಲಾಂ ಮದ್ರಸ ಕಮಿಟಿ ದಾನಿಗಳ ಸಹಕಾರ ಪಡೆದು ಸುಮಾರು 600ಕ್ಕೂ ಹೆಚ್ಚು ಮನೆಗಳಿಗೆ ಆಹಾರ ಸಾಮಗ್ರಿಗಳ ವಿತರಣೆ ಮಾಡುವ ಮೂಲಕ ಇಡೀ ತಾಲೂಕಿಗೆ ಮಾದರಿಯಾಗಿದೆ. ಈ ಒಂದು ಕಾರ್ಯಕ್ರಮವು ಪವಿತ್ರ ರಂಜಾನ್ ತಿಂಗಳ ಪ್ರಾರಂಭವು ಕೂಡ ಆದ ಹಿನ್ನೆಲೆಯಲ್ಲಿ ಕಾರ್ಯಕ್ರಮವು ಹೆಚ್ಚಿನ ಮಹತ್ವವನ್ನು ಪಡೆಯಿತು. ದೇಶಕ್ಕೆ ದೇಶವೇ ಕೋರೋಣ ವೈರಸ್ ನಿಂದ ತಲ್ಲಣಗೊಂಡು ಜನತೆಯು ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ರಂಜಾನ್ ತಿಂಗಳ ಉಪವಾಸ ಆಚರಣೆಯು ಕೂಡ ಬಂದಿರುವುದರಿಂದ ಈ ಒಂದು ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮವು ಅರ್ಹರಿಗೆ ತುಂಬಾ ಪ್ರಯೋಜನವಾಗಲಿದೆ ,ಈ ಒಂದು ವಿತರಣಾ ಕಾರ್ಯಕ್ರಮವು ಕೇವಲ ಮುಸಲ್ಮಾನರಿಗೆ ಮಾತ್ರ ಸೀಮಿತಗೊಳಿಸದೆ ಸಹೋದರ ಧರ್ಮಗಳಾದ ಇತರ ಬಡ ಕುಟುಂಬಗಳಿಗೂ ಕೂಡ ವಿತರಣೆಯನ್ನು ನಡೆಸಲಾಗಿದೆ ಎಂದು ಸಂಘಟಕರು ತಿಳಿಸಿರುತ್ತಾರೆ. ಗಾಂಧಿನಗರ ಮಸೀದಿ ಹಾಗೂ ಮದ್ರಸದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಮೊಅಲ್ಲಿಂ ವೃಂದದವರಿಗೆ ಈ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.


ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಗೆ ಚಾಲನೆಯನ್ನು ನೀಡಿದ ಗಾಂಧಿನಗರ ಜಮಾಮಸ್ಜಿದ್ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ ವಿಶ್ವಕ್ಕೆ ಬಂದಂತಹ ಈ ಮಹಾಮಾರಿ ವೈರಸ್ ಇಂತಹ ದಾನ ಧರ್ಮಗಳ ಫಲದಿಂದ ಸಂಪೂರ್ಣವಾಗಿ ತೊಲಗಲಿ ಮತ್ತು ವಿಶ್ವ ಶಾಂತಿ ಮೊಳಗಲಿ ಎಂದು ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆಯನ್ನು ಮಾಡಿದರು. ಜಮಾಅತಿನ ಆಡಳಿತ ಕಮಿಟಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.