ಬಂಟ್ವಾಳದ ಮೃತ ಹಿಂದೂ ಮಹಿಳೆಗೆ ತಬ್ಲಿಘಿ ನಂಟು ಆರೋಪ | ಕೇಸು ದಾಖಲು

ಬಂಟ್ವಾಳ : ಕೊರೊನಾಕ್ಕೆ ದಕ್ಷಿಣ ಕನ್ನಡದ ಪ್ರಥಮ ಸಾವು ಬಂಟ್ವಾಳ ದಲ್ಲಿ ಸಂಬಂಧಿಸಿತ್ತು. ಆ ಮೃತ ಪಟ್ಟ ಮಹಿಳೆಗೆ ತಬ್ಲಿಘಿ ಸಂಘಟನೆಯ ನಂಟು ಇತ್ತೆಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ನಡೆದಿತ್ತು. ಅಂತಹವರ ಮೇಲೆ ಇದೀಗ ಕೇಸ್ ದಾಖಲಾಗಿದೆ.

ಫೇಸ್ಬುಕ್ ಖಾತೆಯಲ್ಲಿ ಮೊನ್ನೆ ಮೃತ ಮಹಿಳೆ ಪೋಟೋ ಹಾಕಿ ಈಕೆಗೆ ತಬ್ಲಿಘಿ ನಂಟು ಇತ್ತು, ಆ ಕಾರಣದಿಂದ ಕೊರೋನಾ ಬಂತು ಅಂತ ಕೆಲವರು ಪ್ರಚಾರ ಮಾಡಿದ್ದರು. ಈ ನಿಟ್ಟಿನಲ್ಲಿ ಎ.20 ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಟ್ಲ ಪ್ರಖಂಡ ವಿಹಿಂಪ ಪ್ರಮುಖ್ ಆಗಿರುವ ಲೋಹಿತ್ ಪಣೋಲಿಬೈಲ್ ಎಂಬವರು ಎ.21 ಕ್ಕೆ ಬಂಟ್ವಾಳ ಪೋಲೀಸರಿಗೆ ಇನ್ನೊಂದು ದೂರು ನೀಡಿದ್ದರು.

ಮೃತ ಮಹಿಳೆ ಹಿಂದೂ ಆಗಿದ್ದು ಅವರಿಗೆ ತಬ್ಲಿಘಿ ನಂಟು ಕಲ್ಪಿಸಿದ್ದು ಹಿಂದೂಗಳನ್ನು ಕೆರಳಿಸಿತ್ತು. ಕೋರೋನಾ ವಿಷಯದಲ್ಲಿ ಕೋಮು ಸೌಹಾರ್ದತೆಗೆ ದಕ್ಕೆ ಆಗಬಾರದು ಹಾಗೂ ಮೃತಪಟ್ಟವರ ಪೋಟೋ ಶೇರ್ ಮಾಡಿದ್ದು ತಪ್ಪು ಎಂದು ದೂರಲಾಗಿದೆ.

Leave A Reply

Your email address will not be published.