ದ.ಕ. | ಕೊರೊನಾಗೆ ಮೊದಲ ಬಲಿ
ಮಂಗಳೂರಿನಲ್ಲಿ ಮಹಾಮಾರಿ ಕೊರೊನಾಗೆ ಮಹಿಳೆ ಬಲಿಯಾಗಿದ್ದಾರೆ.
ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಈ ಕೊರೊನಾದಿಂದ ಸಾವಿಗೀಡಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯೋರ್ವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಅವರ ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೊನಾ ಕೋವಿಡ್-19 ಇರುವುದು ದೃಢಪಟ್ಟಿದೆ.
ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಕೆಲ ದಿನಗಳ ಹಿಂದೆ ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು ಅವರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಆ ನಂತರ ಅವರನ್ನು ಈಗಿನ ಕೊರೋನಾ ಚಿಕಿತ್ಸೆಗೆಂದು ಮೀಸಲಾಗಿ ಇರಿಸಿದ ವೆನ್ ಲಾಕ್ ಗೆ ಸೇರಿಸಲಾಗಿತ್ತು. ನಿನ್ನೆ ಅವರ ಗಂಟಲ ಮತ್ತು ರಕ್ತದ ಮಾದರಿಯನ್ನು ಕೋರೋಣಾ ಪತ್ತೆಗಾಗಿ ಕಳಿಸಲಾಗಿತ್ತು. ಇವತ್ತು, ಒಂದು ಕಡೆ ಅವರ ರಿಪೋರ್ಟ್ ಪಾಸಿಟಿವ್ ಬರುತ್ತದೆ, ಅತ್ತ ಉಸಿರಾಟದ ತೊಂದರೆಯಿಂದ ತೀರಿಹೋಗುತ್ತಾರೆ.
ಮೃತ ಮಹಿಳೆಯ ಮಗ ಮಾ.16ರಂದು ದುಬೈನಿಂದ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ತೀವ್ರ ನಿಗಾ ಸಲಾಗಿದೆ. ಮೃತ ಮಹಿಳೆ ವಾಸವಿದ್ದ ಮನೆಯ ಸುತ್ತಮುತ್ತ 300 ಮನೆಗಳು ಇವೆ. ಬಂಟ್ವಾಳದ ಕೆಳಗಿನ ಪೇಟೆ ಸೀಲ್ ಡೌನ್ ಆಗಿದೆ. ಯಾರು ಮನೆಯಿಂದ ಹೊರಬರಬೇಡಿ ಅಂತಾ ಅನೌನ್ಸ್ಮೆಂಟ್ ಮೊಳಗುತ್ತಿದೆ.
ಈಗ ಚಿಕಿತ್ಸೆಯಲ್ಲಿ ಇರುವವರು ಮೊನ್ನೆ ಸೋಂಕು ದೃಢವಾದ ಉಪ್ಪಿನಂಗಡಿಯ ವ್ಯಕ್ತಿ ಮಾತ್ರ.
ದಕ್ಷಿಣ ಕನ್ನಡದಲ್ಲಿ ದಾಖಲಾದ ಒಟ್ಟು 14 ರೋಗಿಗಳಲ್ಲಿ ಈಗಾಗಲೇ 12 ಜನ ಗುಣಮುಖರಾಗಿದ್ದು, ಯಾವುದೇ ಸಾವು ಸಂಭವಿಸದೆ ಎಲ್ಲರನ್ನೂ ಗುಣ ಮಾಡಿ ಕಳಿಸುವ ಇರಾದೆ ಹೊಂದಿದ್ದ ದಕ್ಷಿಣ ಕನ್ನಡಕ್ಕೆ ಇದು ಬೇಸರದ ಸಂಗತಿ.