Breaking News | ಕೋರೋನಾ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಮೃತಪಟ್ಟರೆ ಕುಟುಂಬಕ್ಕೆ ಒಂದು ಕೋಟಿ | ಸ್ಥೈರ್ಯ ತುಂಬಿದ ಅರವಿಂದ್ ಕೇಜ್ರಿವಾಲ್ !

ಕೋರೋನಾ ವಿರುದ್ಧದ ಹೋರಾಟ ಮಾಡುವವರು ಸೈನಿಕರಿಗಿಂತ ಕಮ್ಮಿ ಇಲ್ಲ .

– ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ಒಂದು ವೇಳೆ ಕೋರೋನಾ ವೈರಸ್ ವ್ಯಾಧಿಯನ್ನು ಶುಶ್ರೂಷೆ ಮಾಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಯಾರಾದರೂ ಸೋಂಕು ತಗುಲಿ ಅವರು ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಯನ್ನು ನೀಡಲಾಗುವುದು ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘೋಷಿಸಿದ್ದಾರೆ.

ಇದು ಡಾಕ್ಟರರು, ನರ್ಸುಗಳು ಮತ್ತು ಕ್ಲೀನಿಂಗ್ ಮಾಡುವ ಕೆಲಸಗಾರರಿಗೂ ಅನ್ವಯಿಸಲಿದೆ.

ಆ ಮೂಲಕ ಹಗಲಿರುಳು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆಯ ಉದ್ಯೋಗಿಗಳಲ್ಲಿ ಮತ್ತು ಅವರ ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ತಂದುಕೊಡಲು ಪ್ರಯತ್ನಿಸಿದ್ದಾರೆ.

ಅಷ್ಟೇ ಅಲ್ಲದೆ, ಕೊರೋನಾ ವಿರುದ್ಧ ಹೋರಾಡುವ ಅರೋಗ್ಯ ಇಲಾಖೆಗಳ ನೌಕರರನ್ನು ಅವರು ಸೈನಿಕರಿಗೆ ಹೋಲಿಸಿದ್ದಾರೆ. ಕೋರೋನಾ ವಿರುದ್ಧದ ಹೋರಾಟ ಮಾಡುವವರು ಸೈನಿಕರಿಗಿಂತ ಕಮ್ಮಿ ಇಲ್ಲ ಎಂದು ಅವರು ಹೊಗಳಿದ್ದಾರೆ.

Leave A Reply

Your email address will not be published.