ಏ.14 ರ ನಂತರ ಲಾಕ್‌ ಡೌನ್ ವಿಸ್ತರಣೆಯ ಉದ್ದೇಶ ಇಲ್ಲ – ರಾಜೀವ್ ಗೌಬ

ಏಪ್ರಿಲ್ 14 ರ ದೇಶಾದ್ಯಂತದ ಲಾಕ್ ಡೌನ್ ಅನ್ನು ಆನಂತ್ರವೂ ಮತ್ತೆ ಮುಂದುವರೆಯಲಿದೆ ಎಂದು ಅನೇಕ ಸುದ್ದಿಗಳು ಹರಿದಾಡುತ್ತಿವೆ. ಆದ್ರೇ ಏಪ್ರಿಲ್ 14ರ ನಂತ್ರದ ಲಾಕ್ ಡೌನ್ ಮುಕ್ತಾಯವಾಗಲಿದೆ. ಲಾಕ್ ಡೌನ್ ವಿಸ್ತರಣೆಯ ಯಾವುದೇ ಉದ್ದೇಶ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂಬುದಾಗಿ ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಎ.14 ರ ನಂತರ ಲಾಕ್‌ಡೌನ್ ವಿಸ್ತರಣೆ ಮಾಡುವುದಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಕೇಂದ್ರ ಸರಕಾರದ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬ, ನನಗೆ ದೇಶಾದ್ಯಂತ ಏಪ್ರಿಲ್ 14ರ ನಂತವೂ ಲಾಕ್ ಡೌನ್ ವಿಸ್ತರಣೆಯಾಗಲಿದೆ ಎಂಬ ಕೆಲ ವರದಿ ಕೇಳಿ ಅಚ್ಚರಿಯಾಗಿದೆ. ಇದು ಕೇವಲ ಊಹಾಪೋಹವಾಗಿದ್ದು ಸತ್ಯಕ್ಕೆ ದೂರವಾಗಿದೆ. ಇಂತಹ ಯಾವುದೇ ನಿರ್ಧಾರ ಸರ್ಕಾರದ ಮುಂದೆ ಇಲ್ಲ. ಏಪ್ರಿಲ್ 14 ಕ್ಕೆ ದೇಶಾದ್ಯಂತ ಲಾಕ್ ಡೌನ್ ಕೊನೆಗೊಳ್ಳಲಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಆದುದರಿನ ಪತ್ರಿಕೆಗಳಲ್ಲಿ, ಟಿವಿ ಗಳಲ್ಲಿ ಬರುತ್ತಿರುವ ಊಹೆಗಳಿಗೆ ಭಯ ಬೇಡ. ಈಗಲೇ ಇರುವ 21 ಲಾಕ್ ಡೌನ್ ಅನ್ನು ಪಾಲಿಸಿದರೆ ಆಯಿತು. ಅನವಶ್ಯಕ ಗಾಬರಿ ಆಗುವುದು ಬೇಡ.

ಹೋಂ ಕ್ವಾರಂಟೈನ್ ನ 100% ನಿಗಾಕ್ಕೆ ಹೊಸ ಆಪ್ | ಇದು ದೇಶದಲ್ಲೇ ಮೊದಲು | ಸ್ಪೀಡ್ ಅಂದರೆ ಹರೀಶ್ ಪೂಂಜಾ !

Leave A Reply

Your email address will not be published.