ಕಡಬ | ಮದ್ಯ ದೊರೆಯದೆ ಮದ್ಯವ್ಯಸನಿ ಕೇರಳದ ಟೋನಿ ಥೋಮಸ್ ಆತ್ಮಹತ್ಯೆ

” ಮದ್ಯ ಕೊಲ್ಲುತ್ತದೆ ; ಮದ್ಯ ಇಲ್ಲದೆ ಹೋದರೂ ಕೊಲ್ಲುತ್ತದೆ !!! ”

ಕಡಬ, ಮಾ.28 : ಕುಡಿಯಲು ಮದ್ಯ ಇಲ್ಲದ ಕಾರಣ ಮದ್ಯವ್ಯಸನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬದ ಬಂಟ್ರ ಗ್ರಾಮದ ನಂದುಗುರಿ ಎಂಬಲ್ಲಿ ನಡೆದಿದೆ.

ಕೇರಳದ ಕೊಟ್ಟಾಯಂ ಜಿಲ್ಲೆಯ ಎಳಿಕುಳಂನ ಚೆರಿಯಮಕ್ಕಲ್ ನಿವಾಸಿ 51 ವರ್ಷ ವಯಸ್ಸಿನ ಟೋನಿ ಥೋಮಸ್ ದಿನ ನಿತ್ಯ ಕುಡಿಯುತ್ತಿದ್ದರು. ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಅವರಿಗೆ ಮದ್ಯ ಸೇವಿಸದೇ ಇರುವುದು ಸಾಧ್ಯವಿರಲಿಲ್ಲ.

ಕೋರೋನಾ ವೈರಸ್ ನ ಹಾವಳಿಯಿಂದ ದೇಶಾದ್ಯಂತ ಮೋದಿಯವರು ಲಾಕ್ ಡೌನ್ ಘೋಷಿಸಿದ ಕಾರಣದಿಂದ ಎಲ್ಲ ಅಂಗಡಿಗಳ ಜತೆಗೆ ಮದ್ಯದ ಅಂಗಡಿಗಳು ಕೂಡಾ ಬಂದ್ ಆಗಿವೆ. ಆದರೂ ಟೋನಿ ಥೋಮಸ್ ಅವರಿಗೆ ತಕ್ಷಣಕ್ಕೆ ಮದ್ಯಕ್ಕೆ ಸಮಸ್ಯೆ ಉಂಟಾಗಿಲ್ಲ. ಅಲ್ಲೇ ಹಳ್ಳಿಯಲ್ಲಿ ಈಗ ಸಣ್ಣ ಪುಟ್ಟ ಅಂಗಡಿಗಳಲ್ಲಿ ಕೂಡ ಮಾರುವ ಮದ್ಯದ ಸ್ಯಾಚೆಟ್ ಕೊಂಡು ದಿನ ತಳ್ಳಿದ್ದಾರೆ. ಆದರೆ ದಿನ ಕಳೆದಂತೆ ಅಂಗಡಿಗಳಲ್ಲಿ ಇದ್ದ ಮಾಲು ಖಾಲಿಯಾಗಿದೆ.

ಗುರುವಾರ ಅವರಿಗೆ ಮದ್ಯ ಸಿಕ್ಕಿಲ್ಲ. ಅದಕ್ಕಾಗಿ ಅಂಗಡಿಗಳನ್ನು ಅಲೆದಿದ್ದಾರೆ. ನಿನ್ನೆ ಕೂಡಾ ಡ್ರಿಂಕ್ಸ್ ಸಿಗದೆ ಇದ್ದಾಗ ಗಲಿಬಿಲಿಗೊಂಡು ಕೇರಳಕ್ಕೆ ಹೊರಟುಹೋಗುತ್ತೇನೆ ಎಂದು ಹೊರಟಿದ್ದಾರೆ. ಆದರೆ ಹೋಗಲು ವಾಹನ ವ್ಯವಸ್ಥೆ ಇಲ್ಲದ ಕಾರಣ ಹೋಗಲಾಗಿರಲಿಲ್ಲ.

ಆದರೆ, ಇಂದು ನಸುಕಿನಲ್ಲಿ ತಾನು ವಾಸಿಸುತ್ತಿದ್ದ  ಮನೆಯ ಮೇಲ್ಛಾವಣಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ” ಮದ್ಯ ಕೊಲ್ಲುತ್ತದೆ. ಮದ್ಯ ಇಲ್ಲದೆ ಹೋದರೂ ಕೊಲ್ಲುತ್ತದೆ !!! “

ಮೃತದೇಹವನ್ನು ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಡಬ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅನೈತಿಕ ಅನಿತಾಳ ಅನಿಷ್ಟದ ಕಥೆ ಕೇಳಿ, ಹೇಳ್ತೇನೆ !

Leave A Reply

Your email address will not be published.