ದ.ಕ – ಕೇರಳ ಸಂಪರ್ಕ ಅಸಾಧ್ಯ |ವಿ.ಪೊನ್ನುರಾಜ್

ಮಂಗಳೂರು-ಕೇರಳ ಹೆದ್ದಾರಿ ಓಪನ್ ಆಗಿಲ್ಲ. ಕೇಂದ್ರ ಸರ್ಕಾರ ಹೆದ್ದಾರಿ ತೆರವುಗೊಳಿಸುವ ಬಗ್ಗೆ ಮಾಹಿತಿ ಕೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೇರಳ ರಾಜ್ಯಕ್ಕೆ ಸಂಪರ್ಕ ಅಸಾಧ್ಯ ಎಂದು ಕೊರೊನಾ ತಡೆ ದ.ಕ.ಜಿಲ್ಲಾ ವಿಶೇಷ ನೋಡೆಲ್ ಆಫೀಸರ್ ವಿ. ಪೊನ್ನುರಾಜ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾಹಿತಿ ನೀಡಿದ ಪೊನ್ನುರಾಜ್ ಅವರು, ಕೇರಳದಿಂದ ಅಂಬ್ಯುಲೆನ್ಸ್‌ಗೂ ದ.ಕ. ಜಿಲ್ಲೆಗೆ ಪ್ರವೇಶವಿಲ್ಲ.ಇದರಿಂದ ಯಾರಿಗಾದರೂ ಕೊರೊನಾ ಇದ್ದರೂ ಅಪಾಯವಾಗುತ್ತದೆ. ದ.ಕ. ಜಿಲ್ಲೆ ಮತ್ತು ಕೇರಳದ ನಡುವೆ 21 ಗಡಿಭಾಗಗಳಿವೆ. ಎಲ್ಲಾ ಗಡಿಭಾಗಗಳು ಬಂದ್ ಆಗಿವೆ ಎಂದು ತಿಳಿಸಿದ್ದಾರೆ.

ದ.ಕ.ದ ನೆರೆಯ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಳವಾಗಿದೆ. ವಾಹನ ಸಂಚಾರ ಆರಂಭವಾದರೆ ಸಮಸ್ಯೆಯಾದೀತು ಎಂಬ ಆತಂಕ ದ.ಕದ ಜನತೆಗೆ ಇದೆ.

ಈ ನಡುವೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಕೇರಳ ರಾಜ್ಯಕ್ಕೆ ನೆರವಾಗುವ ಪ್ರಮುಖ ರಾಜ್ಯ ಹೆದ್ದಾರಿಯನ್ನು ತೆರವು ಮಾಡಲು ರಾಜ್ಯ ಸರಕಾರ ಒಪ್ಪಿಕೊಂಡಿದೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.ಇದು ಜಿಲ್ಲೆಯ ಜನತೆಯ ಅಸಮಾಧಾನಕ್ಕೂ ಕಾರಣವಾಗಿತ್ತು.

ಇದಕ್ಕೆ ಡಿ.ವಿ.ಸದಾನಂದ ಗೌಡ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಊಹಾಪೋಹದ ಸುದ್ದಿ ಬಿತ್ತರಿಸಿದಕ್ಕೆ ಹರಿಹಾಯ್ದಿದ್ದಾರೆ.

Leave A Reply

Your email address will not be published.