ಸೂಪರ್ ಮಾರ್ಕೆಟ್ ಗಳನ್ನು 24 x 7 ತೆರೆಯುವ ಹಿಂದೆ ಕಮಿಷನರ್ ಕೈವಾಡ | ಡಿಸಿಎಂ ಅಶ್ವಥ್ ನಾರಾಯಣ್ ನೇರ ಆರೋಪ

ಬೆಂಗಳೂರು, ಮಾ. 26 : ದಿನ ಬಳಕೆಯ ಅಗತ್ಯ ವಸ್ತುಗಳಿಗೆ ಜನರು ಮುಗಿ ಬೀಳುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ದಿನದ 24 ಗಂಟೆ ದಿನಸಿ, ಸೂಪರ್ ಮಾರ್ಕೆಟ್ ಅಂಗಡಿಗಳನ್ನು ಓಪನ್ ಮಾಡುವುದಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅನುಮತಿ ನೀಡಿದ್ದರು.

ದಿನದ 24 ಗಂಟೆ ಸೂಪರ್ ಮಾರ್ಕೆಟ್ ಗಳನ್ನು ತೆರೆದಿಟ್ಟರೆ ಪ್ರತಿಯೊಬ್ಬರು ನಾಳೆ ಬೀದಿಯಲ್ಲಿ ಇರುತ್ತಾರೆ. ಜನರು ಕೈಯಲ್ಲೊಂದು ಬ್ಯಾಗ್ ಹಿಡಿದುಕೊಂಡರೆ ಅವರನ್ನು ಪೊಲೀಸರು ಕೂಡ ಕೇಳುವಂತಿಲ್ಲ. ಸರಕಾರ ಸುಯಿಸೈಡಲ್ ನಡೆ ಇಟ್ಟಿದೆ. ಈ ಪ್ಲಾನು ವರ್ಕ್ ಔಟ್ ಆಗುವುದಿಲ್ಲ. ಸರಕಾರ ಈ ಕೂಡಲೇ ಎಚ್ಚೆತ್ತುಕೊಂಡು ಜನರು ವಾಸಿಸುವ ಮನೆಯ ಬಳಿಯೇ ಜನರಿಗೆ ಅಗತ್ಯವಾದ ಸಾಮಾನುಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದರೆ ಒಳಿತು- ಎಂಬುದಾಗಿ ಸರಕಾರದ ನಡೆಯನ್ನು ನಾವು ಟೀಕಿಸಿ ಬರೆದಿದ್ದೆವು.

ಎಲ್ಲಾ ಲಾಕ್ ಡೌನ್ ಇರುವಾಗ ಸೂಪರ್ ಮಾರ್ಕೆಟ್ ಗಳನ್ನು ದಿನದ 24 X 7 ತೆರೆದಿಡುವ ನಿರ್ಧಾರದ ಹಿಂದೆ ಹಲವು ಅನುಮಾನಗಳು ಉಂಟಾಗಿದ್ದವು. ನಮ್ಮ ಈ ಅನುಮಾನಗಳು ಇವತ್ತು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮಾತಿನಿಂದ ಜಗಜ್ಜಾಹೀರಾಗಿವೆ.

ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರೇ, ಕಮಿಷನರ್ ಭಾಸ್ಕರ್ ರಾವ್ ಅವರು ಇದರಲ್ಲಿ ಶಾಮೀಲಾಗಿದ್ದಾರೆ ಎಂದಿದ್ದಾರೆ. ಕೋಟಿ ಕೋಟಿ ಡೀಲ್ ನಡೆದಿದೆ ಎಂದಿದ್ದಾರೆ. ಅಶ್ವಥ್ ನಾರಾಯಣ್ ಅವರು ” ನನ್ನ ಬಳಿ ಸಾಕ್ಷಿ ಇದೆ ಅಂದಿದ್ದಾರೆ “. ನೇರ ಆರೋಪಕ್ಕೆ ಬೆಚ್ಚಿ ಬಿದ್ದ ಕಮಿಷನರ್ ಸಭೆಯಿಂದ ಹೊರನಡೆದಿದ್ದಾರೆ. ಕೊರೋನಾ ಕುರುಕ್ಷೇತ್ರದ ಸಂದರ್ಭದಲ್ಲಿ ಕರ್ನಾಟಕದ ಮಾನ ಹೋಗುತ್ತಿದೆ. ಪೊಲೀಸ್ ಇಲಾಖೆ ಇಂಥದ್ದರಲ್ಲಿ ಶಾಮೀಲಾಗಿರುವ ಸಂಭವ ಹೆಚ್ಚು. ಮೊನ್ನೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಲ್ಲಿ ಬೇರೆಲ್ಲ ಅಂಗಡಿಗಳು ಯಡಿಯೂರಪ್ಪನವರ ಆಜ್ಞೆಯ ಮೇರೆಗೆ ನಿಯತ್ತಾಗಿ ಬಂದ್ ಮಾಡಿದ್ದಾಗ, ಡಿ-ಮಾರ್ಟ್ ಸೂಪರ್ ಮಾರ್ಕೆಟ್ ಮಾತ್ರ ಓಪನ್ ಆಗಿತ್ತು. ಪೊಲೀಸರೇ ಪಕ್ಕದಲ್ಲಿ ಜೀಪಿನಲ್ಲಿ ಕಾಯುತ್ತಿದ್ದರು. ಅದನ್ನು ನಾವು ಫೋಟೋ ಸಮೇತ ವರದಿ ಮಾಡಿದ್ದೆವು. ಕೆಳಗಿನ ಮಾ. 23 ರ ನಮ್ಮ ಬ್ರೇಕಿಂಗ್ ಸುದ್ದಿ ಓದಿ.

ನಮ್ಮ ನಿನ್ನೆಯ ಈ ಸಂಬಂಧಿತ ಅಂಕಣ ಓದಿ : ದಿನದ 24 ಗಂಟೆ ಸೂಪರ್ ಮಾರ್ಕೆಟ್ ತೆರೆಯಲು ರಾಜ್ಯದ ನಿರ್ಧಾರ : ಗೊಂದಲಮಯ ನಡೆ ?

Leave A Reply

Your email address will not be published.