ಹೆತ್ತಮ್ಮನಿಂದಲೇ ಹಿಂಸೆಯ ಪರಾಕಾಷ್ಠೆ । ಧಗ ಧಗ ಬೆಂಕಿಗೆ ಮಗು ಕರಟಿ ಹೋಗಿದೆ !

ಇಂತದ್ದೊಂದು ಹಿಂಸೆಯ ಪರಾಕಾಷ್ಠೆಯನ್ನು ನೀವೆಂದೂ ಕೇಳಿರಲಿಕ್ಕಿಲ್ಲ. ಆ ಮಟ್ಟಿಗಿನ ಹಿಂಸೆಯನ್ನು ಬೇರೆ ಯಾರಾದರೂ ಮಾಡಿದರೆ ಅದನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ಹೆತ್ತ ತಾಯಿಯೇ ಇಂತಹಾ ನಿಕೃಷ್ಟ ಮಟ್ಟಕ್ಕೆ ಇಳಿದಿದ್ದಾಳೆ. ತಾನು 9 ತಿಂಗಳು ಹೊತ್ತು ಹೆತ್ತ ತನ್ನ ಸ್ವಂತ ಮಗುವನ್ನೇ ಉರಿಯುವ ಬೆಂಕಿಗೆ ಹಾಕುವ ಹೃದಯ ವಿದ್ರಾವಕ ಘಟನೆಯ ಮೂಲಕ ಮನುಷ್ಯತ್ವದ ಮೇಲೆಯೇ ಪ್ರಹಾರ ನಡೆದಿದೆ.


Ad Widget

ತನ್ನ 23 ದಿನಗಳ ಮುಗ್ಧ ಹಸುಳೆಯನ್ನು ಉರಿಯುತ್ತಿರುವ ಬೆಂಕಿಗೆ ಹಾಕಿ ಆ ಮಗುವಿನ ತಾಯಿ ಕ್ರೌರ್ಯದ ಪರಮಾವಧಿಯನ್ನು ಜಗತ್ತಿಗೆ ತೋರಿಸಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ನಾಯಕನ ಹಟ್ಟಿಯ ಸಂಗೀತಾಗೆ ಹೆಣ್ಣು ಮಗುವಾಗಿತ್ತು. ಆಕೆಗೆ ಮತ್ತು ಮನೆಯವರಿಗೆ ಯಾರಿಗೂ ಹೆಣ್ಣು ಮಗುವಾದದ್ದು ಇಷ್ಟ ಇರಲಿಲ್ಲ. ಅದೇ ಕಾರಣಕ್ಕೆ ಆಕೆ ತನ್ನ ಸ್ವಂತ ಮಗುವನ್ನು ಧಗಧಗನೆ ಉರಿಯುವ ಬೆಂಕಿಗೆ ಹಾಕಿದ್ದಾಳೆ. ಎಳೆಯ ಮಗು ಬೆಂಕಿಗೆ ಕರಟಿ ಹೋಗಿದೆ.


Ad Widget


Ad Widget

ಈ ಸಂಬಂಧ ಗಂಡ ರಮೇಶ್, ಚಂದ್ರಮ್ಮ, ಬಾಬು ಮತ್ತು ಆರೋಪಿ ಸಂಗೀತಾಳನ್ನು ಬಂಧಿಸಿದ್ದಾರೆ.

error: Content is protected !!
Scroll to Top
%d bloggers like this: