ಉಡುಪಿ ಜಿಲ್ಲೆಯಲ್ಲಿ ಮೊದಲ ಕೊರೋನಾ ಪತ್ತೆ | ರಾಜ್ಯದಲ್ಲಿ ಒಟ್ಟು 42

ಉಡುಪಿ : ಉಡುಪಿಯ 34 ವರ್ಷದ ಯುವಕನಲ್ಲಿ ಈಗ ಕೊರೋನಾ ಸೋಂಕು ಇರುವುದು ದೃಢವಾಗಿದೆ.

ಮಾರ್ಚ್ 18 ರಂದು ದುಬಾಯಿಯಿಂದ ವಾಪಸ್ಸಾದ ವ್ಯಕ್ತಿಯೊಬ್ಬನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ವಿಮಾನ ನಿಲ್ದಾಣದಿಂದಲೇ ಲಿಫ್ಟ್ ಮಾಡಲಾಗಿತ್ತು. ಆತನಲ್ಲಿ ಕೊರೋನಾದ ಸಣ್ಣ ಪ್ರಮಾಣದ ಲಕ್ಷಣಗಳಿದ್ದವು. ಆದ್ದರಿಂದ ಆತನ ಗಂಟಲಿನ ಸ್ವಾಬ್ ಅನ್ನು ಲ್ಯಾಬ್ ಗೆ ಕಲಿಸಿಕೊಡಲಾಗಿತ್ತು.. ಇದೀಗ ಆತನ ಲ್ಯಾಬ್ ರಿಪೋರ್ಟ್ ಬಂದಿದ್ದು ಆತನಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ.

ಈ ವಿಷಯವನ್ನು ಇಂದು ಮಧ್ಯಾಹ್ನ, ಉಡುಪಿಯ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಚಂದ್ರ ಚೂಡ್ ಅವರು ತಿಳಿಸಿದ್ದಾರೆ. ಆ ಮೂಲಕ ಉಡುಪಿಯಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರಕ್ಕೆ ಸೂಚಿಸಿದೆ.

ಈ ಯುವಕನನ್ನು ಆಸ್ಪತ್ರೆಯಲ್ಲಿ ಶುಶ್ರೂಷೆ ಮಾಡಿದ ಮತ್ತು ಆತನೊಂದಿಗೆ ವ್ಯವಹರಿಸಿದ್ದ ಎಲ್ಲ ವ್ಯಕ್ತಿಗಳ ಅರೋಗ್ಯ ಟ್ರೇಸಿಂಗ್ ಕಾರ್ಯ ಪ್ರಾರಂಭವಾಗಿದೆ. ಆತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವ ಎಲ್ಲರನ್ನೂ ಗೃಹಬಂಧನದಲ್ಲಿ ಇಡುವ ನಿಟ್ಟಿನಲ್ಲಿ ಕಾರ್ಯಾಚರಣೆ ಸಾಗಿದೆ.

Leave A Reply

Your email address will not be published.