ಸರ್ಕಾರದ ಆದೇಶ ಪಾಲಿಸದಿದ್ದರೆ ಶೂಟ್ ಎಟ್ ಸೈಟ್ | ತೆಲಂಗಾಣ ಸಿ ಎಂ ಕೆ.ಸಿ.ಆರ್ ಎಚ್ಚರಿಕೆ

ಹೈದರಾಬಾದ್ ​: ಕೊರೊನಾ ಕರಾಳ ಛಾಯೆ ದೇಶಾದ್ಯಂತ ಹರಡುತ್ತಿದ್ದು, ಇದರ ತಡೆಗೆ ಎಲ್ಲ ರಾಜ್ಯಗಳು 21 ದಿನಗಳು ನಿನ್ನೆ ರಾತ್ರಿ ಮಧ್ಯರಾತ್ರಿಯಿಂದ ಲಾಕ್​ ಡೌನ್​ ಆಗಿವೆ. ಜನರನ್ನು ಇದನ್ನು ಗಂಭೀರವಾಗಿ ಪರಿಗಣಿಸದೆ, ರಸ್ತೆಗೆ ಇಳಿದರೆ ಕಂಡಲ್ಲಿ ಗುಂಡಿಗೆ ಆದೇಶ ನೀಡಲಾಗುವುದು ಎಂದು ತೆಲಂಗಾಣದ ಸಿಎಂ ಕೆ.ಸಿ.ಆರ್ ಎಚ್ಚರಿಕೆ ನೀಡಿದ್ದಾರೆ.

ದೇಶಾದ್ಯಂತ ಲಾಕ್ ಡೌನ್ ಗೆ ಆದೇಶಿಸಿದ್ದರೂ, ಸಾರ್ವಜನಿಕರು ಲಾಕ್​ ಡೌನ್​​ಗೆ ಸಹಕರಿಸುತ್ತಿಲ್ಲ. ಜನತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಾನು ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪರಿಸ್ಥಿತಿ ಹೀಗೆಯೇ ಮುಂದುವರೆದರೆ ರಾಜ್ಯದಲ್ಲಿ ಶೂಟ್​ ಅಟ್​ ಸೈಟ್​ ಜಾರಿ ಮಾಡಲಾಗುತ್ತದೆ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ ರಾವ್​ ಎಚ್ಚರಿಕೆ ನೀಡಿದ್ದಾರೆ. ಅಪರಾಧಿಗಳ, ಕಾನೂನು ಧಿಕ್ಕರಿಸುವ ಜನರ ಪಾಲಿನ ಟೆರರ್ ಎಂದೇ ಬಿಂಬಿತವಾಗಲಿರುವ ತೆಲಂಗಾಣದ ಟೆರರ್ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಈ ಮಾತು ಸಾಂದರ್ಭಿಕವಾಗಿದೆ. ಕಳೆದ ನವೆಂಬರ್ ನಲ್ಲಿ ಹೈದರಾಬಾದಿನಲ್ಲಿ ನಾಲ್ಕು ಜನ ರೇಪಿಸ್ಟರನ್ನು ಗುಂಡಿಕ್ಕಿ ಕೊಲ್ಲಲು ಸೈಲೆಂಟಾಗಿ ಆಜ್ಞೆ ನೀಡಿದವರು ಇದೇ ಕೆ.ಸಿ.ಆರ್ !

ಈ​ ಕುರಿತಂತೆ ಮಾತನಾಡಿದ ಚಂದ್ರಶೇಖರ ರಾವ್ ಅವರು​ ಈ ರೀತಿಯ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗಲು ಜನತೆ ಆಸ್ಪದ ಮಾಡಿಕೊಡಬಾರದು ಎಂದಿದ್ದಾರೆ.

Leave A Reply

Your email address will not be published.