ಪುತ್ತೂರು | ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರುಗಳು ರಕ್ತದಾನಕ್ಕೆ ಮತ್ತು ತುರ್ತು ಆಹಾರ ಪೂರೈಕೆಗೆ ರೆಡಿ

ಜಾಗತಿಕ ವ್ಯಾಧಿ ಕೋರೋನಾ ಕಂಡ ಕಂಡ ದೇಶಗಳನ್ನು ಆಕ್ರಮಿಸಿಕೊಂಡು ಪುಂಡಾಟ ಮೆರೆಯುತ್ತಿದೆ. ಎಲ್ಲ ಸರಕಾರಗಳು, ವೈದ್ಯಲೋಕ, ಪೊಲೀಸು, ಮಿಲಿಟರಿ, ಆಡಳಿತ ಯಂತ್ರಗಳು ಕೊರೋನಾದ ವಿರುದ್ಧ ಸಮರ ಸಾರಿವೆ.

ಜನಸಾಮಾನ್ಯರು ಮನೆಯಿಂದ ಹೊರಬರದಂತೆ 21 ದಿನಗಳ ನಿರ್ಬಂಧ ವಿಧಿಸಲಾಗಿದೆ. ಇಂತಹಾ ಸಂದರ್ಭದಲ್ಲಿ, ನಗರದ ಆಸ್ಪತ್ರೆಯಲ್ಲಿರುವ ಮತ್ತು ಆಸ್ಪತ್ರೆಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ರೋಗಿಗಳಿಗೆ ರಕ್ತದ ಅಗತ್ಯ ಬರಬಹುದು. ಅದಕ್ಕೆ ಮುಂದಾಲೋಚನೆಯಾಗಿ ಪುತ್ತೂರಿನ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರುಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಅಷ್ಟೇ ಅಲ್ಲದೆ, ಕಡು ಬಡವರಿಗೆ, ಭಿಕ್ಷುಕರಿಗೆ ಮತ್ತು ಮಕ್ಕಳಿಗೆ -ಯಾರಿಗಾದರೂ ತುರ್ತು ಆಹಾರದ ಅಗತ್ಯ ಕಂಡುಬಂದಲ್ಲಿ ಸಹಾಯ ಪಡೆದುಕೊಳ್ಳಲು ಕೋರಲಾಗಿದೆ. ನಗರದ ರೋಗಿಗಳಿಗೆ ರಕ್ತದ ಅವಶ್ಯಕತೆ ಉಂಟಾದರೆ, ತಕ್ಷಣ ಕಾರ್ಯಕರ್ತರುಗಳು ರಕ್ತದಾನಕ್ಕೆ ತಯಾರಾಗಬೇಕೆಂದು ತನ್ನ ಕಾರ್ಯಕರ್ತರಿಗೆ ಈ ವಿಎಚ್ ಪಿ-ಭಜರಂಗದಳ ಕರೆ ಕೊಟ್ಟಿವೆ. ರಕ್ತದ ಅವಶ್ಯಕತೆ ಇರುವವರು ಈ ಕೆಳಗಿನ ದೂರವಾಣಿಗಳಿಗೆ ಕರೆ ಮಾಡಲು ಸೂಚಿಸಲಾಗಿದೆ.

ರಕ್ತದ ಅವಶ್ಯಕತೆ ಇರುವವರು ಸಂಪರ್ಕಿಸಿ

ಶ್ರೀಧರ್ ತೆಂಕಿಲ : 97404 62429
ಜಯಂತ ಕುಂಜೂರು ಪಂಜ : 97414 80664
ಗುರುರಾಜ್ ಬಲ್ನಾಡ್ : 73377 54956

ತುರ್ತು ಆಹಾರದ ಅವಶ್ಯಕತೆ ಇರುವವರು ಸಂಪರ್ಕಿಸಿ

ಜನಾರ್ಧನ್ ಬೆಟ್ಟ : 94483 28289 / 97416 78289
ಪ್ರವೀಣ್ ಕಲ್ಲೇಗ : 96638 85236
ಮಿಥುನ್ ತೆಂಕಿಲ : 90084 03992

error: Content is protected !!
Scroll to Top
%d bloggers like this: