Day: March 25, 2020

ಮದ್ಯ ಮಾರಾಟ ಇಲ್ಲದ ಕಾರಣ ಅಕ್ರಮ ಮಾರಾಟಗಾರರು ಫುಲ್ ಆಕ್ಟಿವ್ | ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಲೋಕಯ್ಯ ಅರೆಸ್ಟ್

ಕಡಬ, ಮಾ.25 : ಅಕ್ರಮ ಮದ್ಯ ಮಾರಾಟ ಜಾಲಗಳು ಏಕಾಏಕಿ ಚುರುಕಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವೆಡೆ ಅಕ್ರಮ ಮದ್ಯ ಮಾರಾಟವಾಗುತ್ತಿವೆ. ಸರಕಾರ 21 ದಿನಗಳ ಲಾಕ್ ಔಟ್ ಘೋಷಿಸಿದ ನಂತರ ರಾಜ್ಯದ ಎಲ್ಲಾ ಮದ್ಯ ಮಾರಾಟ ಮಳಿಗೆಗಳು ಬಂದ್ ಆಗಿವೆ. ಪೀಡ್ಕ ಅನ್ನು ದಿನದ ಅಭ್ಯಾಸವನ್ನಾಗಿ ಮಾಡಿಕೊಂಡವರು ಈಗ ಕಳವಳಕ್ಕೆ ಈಡಾಗಿದ್ದಾರೆ. ಸಂಜೆಯ ಹೊತ್ತಿಗೆ ಮಧ್ಯ ದೊರೆಯದೆ, ಈ ರೀತಿ ಅಕ್ರಮ ಮದ್ಯ ಮಾರಾಟಗಾರರ ಮಾಲ್ ಗೆ ಕಾಯುವಂತಾಗಿದೆ. ಇಂತಹ ಅಕ್ರಮ ಮದ್ಯ ಮಾರಾಟ ಮಾಡುವ ಅಡ್ಡೆ …

ಮದ್ಯ ಮಾರಾಟ ಇಲ್ಲದ ಕಾರಣ ಅಕ್ರಮ ಮಾರಾಟಗಾರರು ಫುಲ್ ಆಕ್ಟಿವ್ | ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಲೋಕಯ್ಯ ಅರೆಸ್ಟ್ Read More »

ದಿನದ 24 ಗಂಟೆ ಸೂಪರ್ ಮಾರ್ಕೆಟ್ ತೆರೆಯಲು ರಾಜ್ಯದ ನಿರ್ಧಾರ : ಗೊಂದಲಮಯ ನಡೆ ?

ಬೆಂಗಳೂರು : ರಾಜ್ಯ ಸರಕಾರ ಕೋರೋನಾ ವಿಷಯದಲ್ಲಿ ಗಲಿಬಿಲಿಯ ನಿರ್ಧಾರಕ್ಕೆ ಬರುತ್ತಿದೆ. ಒಂದು ಸಲ ಟೋಟಲ್ ಲಾಕ್ ಡೌನ್ ಅನ್ನುತ್ತದೆ. ಮತ್ತೊಂದು ಸಲ ಊರಿಗೆ ಹೋಗುವವರು ಹೋಗಬಹುದು ಅನ್ನುತ್ತದೆ. ಇನ್ನೊಂದು ಊರಿನಲ್ಲಿ ದಿನಸಿ ಸಾಮಾನುಗಳ ಕಲ್ಪಿಸುತ್ತೇವೆ ಅನ್ನುತ್ತಾರೆ. ಇವತ್ತು ಈಗ ತಾನೆ ಬಂದ ಹೊಸ ಸುದ್ದಿ: ದಿನಬಳಕೆಯ ಸಾಮಾನುಗಳನ್ನು ಕೊಳ್ಳಲು ಸೂಪರ್ಮಾರ್ಕೆಟ್ ಗಳನ್ನು ದಿನದ ಇಪ್ಪತ್ತನಾಲ್ಕು ಗಂಟೆಯೂ ತೆರೆಯುತ್ತೇವೆ ಅನ್ನುತ್ತಿದ್ದಾರೆ. ಈ ಎಲ್ಲ ನಿರ್ಧಾರಗಳು ಗೋಜಲು ಗೋಜಲಾಗಿದೆ. ಸರಕಾರ ಪರದಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು …

ದಿನದ 24 ಗಂಟೆ ಸೂಪರ್ ಮಾರ್ಕೆಟ್ ತೆರೆಯಲು ರಾಜ್ಯದ ನಿರ್ಧಾರ : ಗೊಂದಲಮಯ ನಡೆ ? Read More »

ಚೈತ್ರಮಾಸದ ಮೊದಲ ದಿನ | ಪ್ರಕೃತಿ ಹಬ್ಬಯುಗಾದಿ

ಜೀವ ಪ್ರೀತಿಗೆ ಮೂಲ…ಪ್ರೀತಿ ಆಸೆಗೆ ಮೂಲ… ಆಸೆ ದುಃಖಕ್ಕೆ ಮೂಲ… ದುಃಖ ಬಾಳಿಗೆ ಮೂಲ… ಬಾಳಿಗೆ ಭೇದವಿಲ್ಲ ಬೇವು ಬೆಲ್ಲ ತಿನ್ನದೆ ಬಾಳೆ ಇಲ್ಲ… ಯುಗಾದಿ ಹಬ್ಬವನ್ನು ಚೈತ್ರಮಾಸದ ಮೊದಲ ದಿನ ಭಾರತದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತೇವೆ. ಸಂಕ್ರಾಂತಿಯ ನಂತರ ಮೊದಲ ಅಮಾವಾಸ್ಯೆ ಮುಗಿದು ಆಗಸದಲ್ಲಿ ಚಂದ್ರ ಮೂಡಿದಾಗ ಆರಂಭವಾಗುವುದೇ ಹೊಸ ವರ್ಷ ಅದುವೇ ಚಂದ್ರಮಾನ ಯುಗಾದಿ. ಯುಗಾದಿ ಪ್ರಕೃತಿಗೆ ಒಂದು ರೀತಿ ಸಂತಸದ ಕಾಲ . ಪರಿಸರದಲ್ಲಿ ಮರ-ಗಿಡಗಳು ಚಿಗುರೊಡೆದು ಕಂಗೊಳಿಸುವ ಕಾಲ. ಪ್ರಕೃತಿಯು ಹಸಿರು …

ಚೈತ್ರಮಾಸದ ಮೊದಲ ದಿನ | ಪ್ರಕೃತಿ ಹಬ್ಬಯುಗಾದಿ Read More »

ನಳಿನ್ ಕುಮಾರ್ ಕಟೀಲ್ ಅವರ ಸಂಸದರ ನಿಧಿಯಿಂದ ಕರೋನಾ ಹೋರಾಟಕ್ಕೆ ರೂ.1 ಕೋಟಿ ನೆರವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ರೋಗದ ವಿರುದ್ಧ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮಾರಕ ರೋಗದ ಬಗ್ಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳುವ ಕಾರ್ಯಗಳಿಗೆ ವಿನಿಯೋಗಿಸಲು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್* ಇವರ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ರೂ. 1ಕೋಟಿ ಯನ್ನು ಜಿಲ್ಲಾಡಳಿತಕ್ಕೆ ತುರ್ತು ಅಗತ್ಯ ಕ್ರಮಕೈಗೊಳ್ಳಲು ನೀಡಿದ್ದಾರೆ.

ಲಾಕ್ ಡೌನ್ ನೆಪದಲ್ಲಿ ವೇತನ ಕಡಿತ ಮಾಡದಿರಿ – ಖಾಸಗಿ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ | 2 ರೂಪಾಯಿಗೆ ಗೋಧಿ, 3 ರೂಪಾಯಿಗೆ ಅಕ್ಕಿ | ವಿಶೇಷ ಪಡಿತರ ಪ್ಯಾಕೆಜ್

ನವದೆಹಲಿ : ಕಾಳ ಸಂತೆಯಲ್ಲಿ ದಿನಸಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದೇ ಆದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಕೊರೊನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ 80 ಕೋಟಿ ರೂಪಾಯಿಗಳ ವಿಶೇಷ ಪಡಿತರ ಯೋಜನೆಗೆ ಘೋಷಣೆ ಮಾಡಲಾಗಿದೆ. ಲಾಕ್ ಡೌನ್ ನೆಪ ಮಾಡಿ ಯಾವುದೇ ನೌಕರರ ಸಂಬಳವನ್ನು ಕಡಿತಗೊಳಿಸಬಾರದು ಎಂದು ಖಡಕ್ ಸೂಚನೆಯನ್ನು ದೇಶದ ಎಲ್ಲಾ ಖಾಸಗಿ ಸಂಸ್ಥೆಗಳಿಗೆ ನೀಡಿದೆ. ಈ ಕುರಿತಂತೆ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ …

ಲಾಕ್ ಡೌನ್ ನೆಪದಲ್ಲಿ ವೇತನ ಕಡಿತ ಮಾಡದಿರಿ – ಖಾಸಗಿ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ | 2 ರೂಪಾಯಿಗೆ ಗೋಧಿ, 3 ರೂಪಾಯಿಗೆ ಅಕ್ಕಿ | ವಿಶೇಷ ಪಡಿತರ ಪ್ಯಾಕೆಜ್ Read More »

ನೀವು ಯುಗಾದಿ ಆಚರಿಸಿಕೊಂಡಿದ್ದರೆ Photo please | ಹೊಸಕನ್ನಡಕ್ಕೆ ನಿಮ್ಮ ಫೋಟೋ ಪ್ರಕಟಿಸಲು ಇನ್ನಿಲ್ಲದ ಕಾತರ !

ಭಾರತೀಯರ ಹಬ್ಬದ ನಿಷ್ಠೆಯನ್ನು, ಉತ್ಸಾಹವನ್ನು ಯಾವ ರೋಗಗಳೂ ಕೂಡಾ ಕಸಿದುಕೊಳ್ಳಲಾರವು. ಮನೆಯಲ್ಲೇ ಇರಬೇಕಾದ ದಿಗ್ಬಂಧನದ ಸಮಯದಲ್ಲಿ ಕೂಡ, ಹಳೆ ಉಡುಗೆಯನ್ನೂ ಹೊಸದೆನ್ನುವಂತೆ ಹಾಕಿಕೊಂಡು ಸಂಭ್ರಮಿಸುವ, ಅಲ್ಲೇ ಯಾರಿಂದಲೋ ಒಂದಿಷ್ಟು ಬೇವು ತರಿಸಿಕೊಂಡು, ಇದ್ದ ಅಲ್ಪಸ್ವಲ್ಪ ಹೂವಿನೊಂದಿಗೆ ಪೂಜೆ ಮುಗಿಸಿಕೊಂಡು ಹಬ್ಬದೂಟ ಮಾಡುವುದು ನಮಗೆ ಗೊತ್ತಿದೆ. ಈ ಬಾರಿ ಮನೆಯಲ್ಲೇ ನೀವು ಯುಗಾದಿ ಆಚರಿಸಿಕೊಂಡಿರುತ್ತೀರಿ. ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದೊಂದನ್ನು ಬಿಟ್ಟು ಉಳಿದೆಲ್ಲವನ್ನೂ ನೆರವೇರಿಸಿ ಎಂದಿನ ತಾದಾತ್ಮ್ಯತೆಯಿಂದ ಹೊಸವರ್ಷವನ್ನು ಹರ್ಷದಿಂದ ಬರಮಾಡಿಕೊಂಡಿರುತ್ತೀರಿ. ಹಾಗೆ ನೀವು ಯುಗಾದಿ ಆಚರಿಸಿಕೊಂಡಿದ್ದರೆ, ಅದರ …

ನೀವು ಯುಗಾದಿ ಆಚರಿಸಿಕೊಂಡಿದ್ದರೆ Photo please | ಹೊಸಕನ್ನಡಕ್ಕೆ ನಿಮ್ಮ ಫೋಟೋ ಪ್ರಕಟಿಸಲು ಇನ್ನಿಲ್ಲದ ಕಾತರ ! Read More »

ಪುತ್ತೂರು | ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರುಗಳು ರಕ್ತದಾನಕ್ಕೆ ಮತ್ತು ತುರ್ತು ಆಹಾರ ಪೂರೈಕೆಗೆ ರೆಡಿ

ಜಾಗತಿಕ ವ್ಯಾಧಿ ಕೋರೋನಾ ಕಂಡ ಕಂಡ ದೇಶಗಳನ್ನು ಆಕ್ರಮಿಸಿಕೊಂಡು ಪುಂಡಾಟ ಮೆರೆಯುತ್ತಿದೆ. ಎಲ್ಲ ಸರಕಾರಗಳು, ವೈದ್ಯಲೋಕ, ಪೊಲೀಸು, ಮಿಲಿಟರಿ, ಆಡಳಿತ ಯಂತ್ರಗಳು ಕೊರೋನಾದ ವಿರುದ್ಧ ಸಮರ ಸಾರಿವೆ. ಜನಸಾಮಾನ್ಯರು ಮನೆಯಿಂದ ಹೊರಬರದಂತೆ 21 ದಿನಗಳ ನಿರ್ಬಂಧ ವಿಧಿಸಲಾಗಿದೆ. ಇಂತಹಾ ಸಂದರ್ಭದಲ್ಲಿ, ನಗರದ ಆಸ್ಪತ್ರೆಯಲ್ಲಿರುವ ಮತ್ತು ಆಸ್ಪತ್ರೆಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ರೋಗಿಗಳಿಗೆ ರಕ್ತದ ಅಗತ್ಯ ಬರಬಹುದು. ಅದಕ್ಕೆ ಮುಂದಾಲೋಚನೆಯಾಗಿ ಪುತ್ತೂರಿನ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರುಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಅಷ್ಟೇ ಅಲ್ಲದೆ, ಕಡು ಬಡವರಿಗೆ, ಭಿಕ್ಷುಕರಿಗೆ …

ಪುತ್ತೂರು | ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರುಗಳು ರಕ್ತದಾನಕ್ಕೆ ಮತ್ತು ತುರ್ತು ಆಹಾರ ಪೂರೈಕೆಗೆ ರೆಡಿ Read More »

ಆ ಇಪ್ಪತ್ತೊಂದು ದಿನಗಳ ಯಜ್ಞ ಪೂರೈಸದೆ ಹೋದರೆ 35 ಕೋಟಿ ಮರಣ !!

ಮೊನ್ನೆ ಪ್ರಧಾನಿ 21 ದಿನಗಳ ಕಾಲ ದೇಶಕ್ಕೆ ದೇಶವನ್ನೇ ಹಾಲ್ಟ್ ಮಾಡಿ ಆದೇಶ ಹೊರಡಿಸಿದ್ದಾರೆ. ದೇಶದ 138.7 ಕೋಟಿ ಜನ ಸಂಖ್ಯೆ ಇನ್ನು ಕಡ್ಡಾಯವಾಗಿ ಮೂರು ವಾರಗಳ ಕಾಲ ಮನೆಯಲ್ಲೇ ಕೂರಬೇಕಾಗಿದೆ. ಅಂದರೆ ಇನ್ನು 21 ದಿನ ನಮಗೆ ಒಂದು ಅರ್ಥದಲ್ಲಿ ಶಿಕ್ಷೆ. ಗೃಹಬಂಧನ. ಇದು ಅನಿವಾರ್ಯವಾಗಿರುವ ಶಿಕ್ಷೆ. ಇಲ್ಲದೆ ಹೋದರೆ ದೇಶ 21 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆಯೆಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. 21 ವರ್ಷ ಹಿಂದೆ ಅಂದರೆ ಏನದರ ಅರ್ಥ? ಅದರಲ್ಲೊಂದು ಗೂಡಾರ್ಥವಿದೆಯಾ ? ನೀವು …

ಆ ಇಪ್ಪತ್ತೊಂದು ದಿನಗಳ ಯಜ್ಞ ಪೂರೈಸದೆ ಹೋದರೆ 35 ಕೋಟಿ ಮರಣ !! Read More »

ಅಮೆಜಾನ್, ಫ್ಲಿಪ್​ಕಾರ್ಟ್ ಮುಂತಾದ ಭಾರತದ ಆನ್ ಲೈನ್ ಡೆಲಿವರಿ ಸೇವೆಗಳು ಬಂದ್

ಭಾರತದ ಶಾಪಿಂಗ್​ ಸೈಟ್​ಗಳು ಕೂಡ ತಮ್ಮ ಡೆಲಿವರಿ ಸೇವೆಯನ್ನ ಒಂದೊಂದಾಗಿ ಬಂದ್ ಮಾಡುತ್ತಿವೆ. ಭಾರತದ ಅತೀ ದೊಡ್ಡ ಇ-ಕಾಮರ್ಸ್​​ ತಾಣಗಳಾದ ಅಮೆಜಾನ್ ಹಾಗೂ ಫ್ಲಿಪ್​ಕಾರ್ಟ್​ ಈಗಾಗಲೇ ಹೊಸ ಆರ್ಡರ್​​ ಸ್ವೀಕರಿಸೋದನ್ನ ನಿಲ್ಲಿಸಿವೆ. ಈಗಾಗಲೇ ಬಂದ ಆರ್ಡರ್ ಗಳನ್ನ ಸಪ್ಲೈ ಮಾಡಿ ಕೈತೊಳೆದುಕೊಂಡರೆ ಮುಗಿಯಿತು ಎಂದು ಫ್ಲಿಪ್​ಕಾರ್ಟ್ ಹೇಳಿಕೊಂಡಿದೆ. ಆದರೆ ಅಮೇಜಾನ್ ಮಾತ್ರ, ನಾವು ಯಾವುದೇ ಹೊಸ ಆರ್ಡರ್​​ಗಳನ್ನ ಸ್ವೀಕರಿಸೋದಿಲ್ಲ. ಬಂದಿರುವ ಆರ್ಡರ್ ಗಳಲ್ಲಿ ದಿನಸಿ ಪದಾರ್ಥಗಳು, ಹೆಲ್ತ್​​​ಕೇರ್​ ಸಂಬಂಧಿತ ಉತ್ಪನ್ನಗಳು ಹಾಗೂ ದಿನನಿತ್ಯದ ಬಳಕೆಗೆ ಬೇಕಾಗುವ ಅಗತ್ಯ …

ಅಮೆಜಾನ್, ಫ್ಲಿಪ್​ಕಾರ್ಟ್ ಮುಂತಾದ ಭಾರತದ ಆನ್ ಲೈನ್ ಡೆಲಿವರಿ ಸೇವೆಗಳು ಬಂದ್ Read More »

ನಾಳೆ ಬೆಳ್ಳಾರೆ ಸಂಪೂರ್ಣ ಬಂದ್, ಸಾರ್ವಜನಿಕರು ಸಹಕರಿಸಲು ಗ್ರಾ.ಪಂ ಮನವಿ

ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಸರಕಾರ ಲಾಕ್ ಡೌನ್ ಗೆ ಕರೆಕೊಟ್ಟ ಹಿನ್ನಲೆಯಲ್ಲಿ ಬೆಳ್ಳಾರೆಯಲ್ಲಿ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾ.25 ರಂದು ಸಮಯ ನಿಗದಿ ಮಾಡಲಾಗಿತ್ತು. ಆದರೆ ಮಾ.26 ರಂದು ಬೆಳಿಗ್ಗೆಯಿಂದಲೇ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಂಜಯ ಕೆ.ಆರ್ ತಿಳಿಸಿದ್ದಾರೆ. ಪೆಟ್ರೋಲ್ ಪಂಪು, ಗ್ಯಾಸ್,ಮೆಡಿಕಲ್ ,ಹಾಲು ಅಂಗಡಿಗಳು ಮಾತ್ರ ತೆರೆದಿರುತ್ತದೆ.

error: Content is protected !!
Scroll to Top