ಮುಂದಿನ ಸೂಚನೆವರೆಗೆ ಪ್ರವೇಶ ಪ್ರಕ್ರಿಯೆ ನಡೆಸುವುದು ಅಪರಾಧ | ಶಿಕ್ಷಣ ಇಲಾಖೆ ಎಚ್ಚರಿಕೆ

ಮುಂದಿನ ಸುತ್ತೋಲೆ ಹೊರಡಿಸುವವರೆಗೆ ಯಾವುದೇ ಶಾಲೆಗಳಿಗೆ ಪ್ರವೇಶ ಆರಂಭಿಸಬಾರದೆಂದು ರಾಜ್ಯದ ಶಾಲೆಗಳಿಗೆ ಶಿಕ್ಷಣ ಇಲಾಖೆ ಕಟ್ಟಾಜ್ಞೆ ಹೊರಡಿಸಿದೆ.
ಸರಕಾರಿ, ಅರೆ ಸರಕಾರಿ, ಖಾಸಗಿ ಸೇರಿದಂತೆ ಯಾವುದೇ ಶಾಲೆಗಳಿಗೂ ಸದ್ಯಕ್ಕೆ ಪ್ರವೇಶ ಪ್ರಕ್ರಿಯೆ ಆರಂಭಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಈಗ ದೇಶಕ್ಕೆ ದೇಶವೇ ಕೊರೋನಾ ವೈರಸ್ ವ್ಯಾಧಿಯ ಹಿನ್ನೆಯಲ್ಲಿ ಬಾಗಿಲು ಬಂದ್ ಮಾಡಿ ಕೂತಿದೆ. ಶಿಕ್ಷಣ ಸಿಬ್ಬಂದಿ ಇರುವ ಸಣ್ಣ ಪುಟ್ಟ ಕೆಲಸಗಳನ್ನು ಮನೆಯಿಂದಲೇ ಮಾಡುವಂತೆ ಸೂಚಿಸಲಾಗಿದೆ. ಭಾರತ ಪೂರ್ತಿ 21 ಬಂದ್ ಆಗುವುದರಿಂದ ಮಾಡಲು ಏನು ಕೂಡ ಕೆಲಸ ಇರುವುದಿಲ್ಲ. ಈಗಾಗಲೇ ಶಾಲೆಗಳು ಮಾರ್ಚ್ 31 ರೊಳಗೆ ಪ್ರವೇಶ ಪಡೆಯುವಂತೆ ಪಾಲಕರನ್ನು ಫೋನು ಮಾಡಿ ಒತ್ತಾಯಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈಗ ಪಾಲಕರನ್ನು ಶಾಲೆಗಳಿಗೆ ಕರೆಸುವುದಾಗಲಿ, ಶಾಲೆಗಳನ್ನು ತೆರೆಯುವುದಾಗಲಿ ಅಪರಾಧ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈಗಂತೂ ಮನೆ ಬಿಟ್ಟು ಹೋಗುವಂತಿಲ್ಲ. ಆದರೆ ಖಾಸಗಿ ಶಾಲೆಗಳು ಸೀಟು ಕಾಯ್ದಿರಿಸಲು ಹೇಳುವುದು, ಆನ್ ಲೈನ್ ಅಲ್ಲಿ ಹಣ ಕಟ್ಟಲು ಹೇಳುವುದು ಮುಂತಾದ ಯಾವುದನ್ನೂ ಮಾಡಬಾರದು. ಅದು ಅಪರಾಧ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಮುಂದಿನ ಶೆಕ್ಷಣಿಕ ಸಾಲಿಗೆ ಪ್ರವೇಶ ಪ್ರಕ್ರಿಯೆ ಸಂಬಂಧ ಪ್ರತ್ಯೇಕ ಸುತ್ತೋಲೆ ಹೊರಡಿಸಿದ ನಂತರವಷ್ಟೇ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು. ಈಗ ಪ್ರವೇಶ ಆರಂಭಿಸುವುದಾಗಲೀ ಅಥವಾ ಪಾಲಕರನ್ನು ಒತ್ತಾಯಿಸುವುದಾಗಲೀ ಅಪರಾಧವಾಗುತ್ತದೆ. ಹಾಗೆ ಮಾಡಿದ ಶಾಲೆಯ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಲಾಗಿದೆ.

Leave A Reply

Your email address will not be published.