ಕಾಣಿಯೂರು | ಏಲಡ್ಕದಲ್ಲಿ ಅಕ್ರಮ‌ ಮದ್ಯ ಮಾರಾಟ ಪತ್ತೆ

ಅಕ್ರಮ ಮದ್ಯ ಮಾರಾಟ ಕಾರ್ಯಾಚರಣೆಯಲ್ಲಿ ಕಣ್ಣು ತಪ್ಪಿಸಿ ಕಾಣಿಯೂರಿನ ಏಲಡ್ಕದಲ್ಲಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಬೆಳ್ಳಾರೆ ಪೊಲೀಸರು ಎಸೈ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಪತ್ತೆಹಚ್ಚಿದ್ದಾರೆ.

ಕಡಬ ತಾಲೂಕು ಕಾಣಿಯೂರು ಗ್ರಾಮದ,ಏಲಡ್ಕ ಎಂಬಲ್ಲಿರುವ ದಿನಸಿ ಅಂಗಡಿಯಲ್ಲಿ ಚಂದ್ರಶೇಖರ ಗೌಡ, ಪ್ರಾಯ : 50 ವರ್ಷ , ತಂದೆ : ಮುತ್ತಪ್ಪ ಗೌಡ , ವಾಸ : ನಾವೂರು ಮನೆ,ಕಾಣಿಯೂರು ಗ್ರಾಮ, ಕಡಬ ತಾಲೂಕು, ಇವರು ಅಕ್ರಮವಾಗಿ ಯಾವುದೇ ಪರವಾನಗೆ ಇಲ್ಲದೇ ಮದ್ಯವನ್ನು ವಶದಲ್ಲಿಟ್ಟುಕೊಂಡಿರುವ ಹಾಗೂ ಮಾರಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಆದರಿಸಿ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಅಂಗಡಿಯಲ್ಲಿ ವಶದಲ್ಲಿಟ್ಟುಕೊಂಡು ಮಾರಾಟದಲ್ಲಿ ತೊಡಗಿದ್ದ ವಸ್ತುಗಳ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ. 1) 90 ಮಿ.ಲೀ. ನ Mysore Lancer wisky Tetra pack, 50,


Ad Widget

Ad Widget

Ad Widget

Ad Widget

Ad Widget

Ad Widget

Ad Widget

2) 180 ಮಿ.ಲೀ.ನ Mysore Lancer Wisky Tetra Pack – 23,

3) ಮಿ.ಲೀ. ನ Original Choice Delex Wisky Tetra Pack -23,

4) 180 ಮಿ.ಲೀ. ನ Original Choice Delex Wisky Tetra pack – 3,

5) 180 ಮಿ.ಲೀ. ನ Director Special Wisky Tetra Pack – 2,

6) 180 ಮಿ.ಲೀ.ನ Wincer Delex Wisky Tetra Pack – 3,

7) 90 ಮಿ.ಲೀ. ನ Hywords Chears Wisky Tetra Pack -6 , 8) 180 ಮಿ.ಲೀ. ನ Mysore Lancer Wisky Bottle -90, ಹಾಗೂ ಗಿರಾಕಿಗಳಿಗೆ ಮಾರಾಟ ಮಾಡಿ ಬಂದ ಹಣ ರೂ. 5350/- ನ್ನು ಮಹಜರು ತಯಾರಿಸಿ ಸ್ವಾಧೀನಪಡಿಸಿಕೊಂಡು ಆರೋಪಿಯ ವಿರುದ್ದ ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ : 32,34, ರಂತೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮಾನ್ಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ

error: Content is protected !!
Scroll to Top
%d bloggers like this: