” ಕೊರೋನಾ ಎಂಬ ರೋಗವೇ ಇಲ್ಲ, CAA ಹೋರಾಟ ಹತ್ತಿಕ್ಕಲು ಇದು ಮೋದಿ ಪ್ಲಾನು !! ”| ಕಲಬುರ್ಗಿಯಲ್ಲಿ ಹೀಗೊಂದು ಸುದ್ದಿ

ಕರಾವಳಿಯ ಹಲವು ಪಟ್ಟಣಗಳಲ್ಲಿ ಬೆಳಗಿನ ಜಾವ ಸಣ್ಣ ಪ್ರಮಾಣದ ಜನಸಂಖ್ಯೆ ಕಂಡುಬರುತ್ತಿದ್ದರೂ, ನಿಧಾನವಾಗಿ ಜನ ಕರಗುತ್ತಿದ್ದಾರೆ. ಮಂಗಳೂರಿನಲ್ಲಿ ನಿನ್ನೆ ಡಿಸಿ ಕೊಟ್ಟ ರಿಲಾಕ್ಸ್ ಆದೇಶ ( ಮಧ್ಯಾಹ್ನ 12 ರ ವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ಕಲ್ಪಿಸಿರುವುದು ) ದ ಲಾಭ ಪಡೆದುಕೊಳ್ಳುತ್ತಿರುವ ಮಂಗಳೂರಿನ ಜನತೆ ಎಂದಿನಂತೆ ರಸ್ತೆ ಬದಿಯಲ್ಲಿ ಬೇಕರಿಗೆ ಎಡತಾಕುತ್ತಿದ್ದಾರೆ. ಟೀ ಕಾಫಿ ಕುಡಿಯುತ್ತಿದ್ದಾರೆ. ಇದು ನಮ್ಮ ಜನರ ಸ್ಟಾರ್ಟಿಂಗ್ ಟ್ರಬಲ್. ಯಾವುದೇ ಆದೇಶ, ಕಾನೂನು, ನಿರ್ದೇಶನ ಮುಂತಾದವುಗಳನ್ನು ಅಮೆರಿಕಾದಂತಹ ದೇಶಗಳಲ್ಲಿ ಪಾಲಿಸುವಂತೆ ನಾವು ಆ ಕೂಡಲೇ ಪಾಲಿಸುವುದಿಲ್ಲ. ಕಟ್ಟಪ್ಪಣೆ ಹೊರಡಿಸಿ, ಸ್ವಲ್ಪ ಬಿಸಿ ಮುಟ್ಟಿಸಿದರೆ, ಬೆಣ್ಣೆ ಕರಗಿದಂತೆ ಜನ ಕರಗಿ ಮನೆ ಸೇರಿಕೊಳ್ಳುತ್ತಾರೆ.

ಕಲಬುರ್ಗಿಯಲ್ಲಿ ದೊಡ್ಡ ಪ್ರಮಾಣದ ಜನರು ಮಾರ್ಗದ ಬದಿಯಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲಿಗೆ ಬಂದ ಒಂದೆರಡು ಪೊಲೀಸರ ಮಾತುಗಳನ್ನು ಕೂಡ ಕೇಳುತ್ತಿಲ್ಲ. ಇದು ಜನರ ಆರೋಗ್ಯದ ಬಗೆಗಿನ ನಿರ್ಲಕ್ಷ್ಯ ಮತ್ತು ಸರ್ಕಾರದ ಕಾನೂನನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ ಪರಿಣಾಮ ಎಂದಷ್ಟೇ ನಾವು ವಿಶ್ಲೇಷಿಸಲು ಆಗುವುದಿಲ್ಲ.

ಹೇಳಿ ಕೇಳಿ ಕಲಬುರ್ಗಿ ಸೂಕ್ಷ್ಮ ಪ್ರದೇಶ. ಈ ಪ್ರದೇಶದಲ್ಲಿ ಜನರು ಬೆಳಂಬೆಳಗ್ಗೆ ರಸ್ತೆಬದಿಯಲ್ಲಿ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವ ಭರಾಟೆ ನಡೆದಿದೆ. ಈ ಸನ್ನಿವೇಶ ಕಲಬುರ್ಗಿಯಲ್ಲಿ ಮಾತ್ರವಲ್ಲ ರಾಜ್ಯದ ಇತರ ಜಿಲ್ಲೆಗಳಲ್ಲಿ ಕಂಡು ಬರುತ್ತಿದೆ. ಬೆಳಿಗ್ಗೆ ಅಗತ್ಯ ಸಾಮಾನು ಕೊಳ್ಳಲು ಎಂದಿನಂತೆ ಜನರು ಬೀದಿಗಿಳಿಯುವುದು ಸಾಮಾನ್ಯ. ಇದು ಕಲಬುರ್ಗಿಯಲ್ಲಿ ಮಾತ್ರವಲ್ಲ, ಎಲ್ಲಾ ಪಟ್ಟಣಗಳಲ್ಲೂ ಸಾಮಾನ್ಯ ನಡವಳಿಕೆ. ಆದರೆ ಕಲಬುರ್ಗಿಯಲ್ಲಿ ಇದರ ಮಧ್ಯೆ ಒಂದು ಅಪಪ್ರಚಾರವೂ ನಡೆದಿದ್ದು ಇದರಿಂದಾಗಿ ಜನರು ಕರ್ನಾಟಕ ಲಾಕ್ ಡೌನ್ ಗೆ ಡೋಂಟ್ ಕೇರ್ !

ಈಗ ದೇಶದಲ್ಲಿ ಕೋರೋನಾ ವ್ಯಾಧಿ ಹಬ್ಬುವುದು ಮತ್ತು ಅದರಿಂದಾಗಿ ಜನ ಸೇರದಂತೆ ನಿರ್ಬಂಧಿಸುವುದು ಎಲ್ಲ ಸುಳ್ಳು ಕಾರಣ.

ಮುಸ್ಲಿಮರ ವಿರುದ್ಧ ಜಾರಿಗೆ ತಂದ ಸಿಏಏ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದೆವು. ನಮ್ಮ ಹೋರಾಟವನ್ನು ಹತ್ತಿಕ್ಕಲು, ನಾವು ಗುಂಪು ಸೇರಿ ಪ್ರತಿಭಟನೆ ಮಾಡದೆ ಇರಲು ಈಗ ಮೋದಿಯವರು ತಂದ ಒಂದು ಪ್ಲಾನು ಈ ಕೋರೋನಾ – ಎಂಬ ಅರ್ಥದ ಅಭಿಪ್ರಾಯ ಕಲಬುರ್ಗಿಯ ಒಂದು ವರ್ಗದ ಕೆಲವು ಜನರಲ್ಲಿ ಬೇರೂರಿದೆ. ಅಮಾಯಕ ಜನರನ್ನು ಅವರ ನಾಯಕರು ಎಷ್ಟರಮಟ್ಟಿಗೆ ದಾರಿತಪ್ಪಿಸಿರಬಹುದು ಹೇಳಿ.

ಇದಕ್ಕೆ ನಾವು ಏನನ್ನೋಣ ? ಜನರ ಅಮಾಯಕತೆಯಾ, ಆರೋಗ್ಯದ ಬಗೆಗಿನ ನಿರ್ಲಕ್ಷ್ಯವಾ, ಕಾನೂನಿನ ಬಗ್ಗೆ ಅಸಡ್ಡೆಯಾ ಅಥವಾ ಅವರ ನಾಯಕರುಗಳು ಅವರನ್ನು ಮೌಲ್ಡ್ ಮಾಡಿದ ಪರಿಯಾ ? ಇಂತಹಾ ಜನರೇ, ತಾವು ಮನೆಯಿಂದ ಹೊರಬಂದು ಮಾರಕ ಸಾಂಕ್ರಾಮಿಕ ರೋಗದ ಬರಿಸಿಕೊಳ್ಳುವುದು ಮಾತ್ರವಲ್ಲ, ಇಡೀ ಸಮಾಜಕ್ಕೆ ರೋಗದ ಸ್ಯಾಂಪಲ್ ಹಂಚಬಲ್ಲರು ಎಂಬುದೇ ಇವತ್ತಿನ ಆತಂಕ.

Leave A Reply

Your email address will not be published.