ದ.ಕ | ಕೊರೊನಾ ಸೋಂಕಿತರ ಸಂಖ್ಯೆ 5 ಕ್ಕೆ ಏರಿಕೆ | ಸೋಂಕಿತರು ಕೇರಳದವರು

ಮಂಗಳೂರು : ಮಂಗಳೂರಿನಲ್ಲಿ ಕರೋನಾ ಸೊಂಕು ಪೀಡಿತರ ಸಂಖ್ಯೆ ಏರಿಕೆಯಾಗಿದೆ. ಇಂದು ಮತ್ತೆ 4 ಜನರಿಗೆ ಕರೋನಾ ಸೊಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ ಮಂಗಳೂರಿನಲ್ಲಿ 5 ಜನರಿಗೆ ಕರೋನಾ ಸೊಂಕು ದೃಢಪಟ್ಟಿದ್ದು, ಮಂಗಳೂರಿನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Ad Widget

Ad Widget

ಮಾ. 19 ರಂದು ದುಬೈನಿಂದ ಬಂದಿದ್ದ ವಿಮಾನದಲ್ಲಿದ್ದ ಭಟ್ಕಳ ಮೂಲದ ವ್ಯಕ್ತಿಯ ಜೊತೆ ಈ ನಾಲ್ವರು ಪ್ರಯಾಣಿಸಿದ್ದರು. ಈ ವಿಮಾನದಲ್ಲಿದ್ದ ಇನ್ನುಳಿದವರ ಮೇಲೆ ತೀವ್ರ ನಿಗಾ ಇಡಲಾಗಿದೆ.


Ad Widget

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಲಾಗಿರುವ ಕಂಟ್ರೋಲ್ ರೂಂ ಮೂಲಕ ಆ ವಿಮಾನದಲ್ಲಿ ಬಂದಿದ್ದ ಇತರ ಪ್ರಯಾಣಿಕರ ಕುರಿತು ಟ್ರ್ಯಾಕಿಂಗ್ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಉಳಿದ ಪ್ರಯಾಣಿಕರ ಮೇಲೂ ನಿಗಾ ಇರಿಸಲಾಗಿದೆ. ಸೊಂಕಿತರೆಲ್ಲರೂ ಕೇರಳ ರಾಜ್ಯದವರಾಗಿದ್ದಾರೆ.

error: Content is protected !!
Scroll to Top
%d bloggers like this: