Day: March 21, 2020

ಮಾ.22 ಜನತಾ ಕರ್ಫ್ಯೂ ಹಿನ್ನೆಲೆ | ಚಿಕನ್ ಸೆಂಟರ್, ವೈನ್ ಶಾಪ್ ಫುಲ್ ರಶ್ !

ನಾಳೆಯಿಂದ ಬಾರ್, ಹೋಟೆಲ್ ಬಂದ್ ಆಗಲಿದೆ. ಆದರೆ ಟೇಕ್ ಆವೇ( ಪಾರ್ಸೆಲ್) ಇರಲಿದೆ. ವೈನ್ ಶಾಪ್ ಕೂಡ ಓಪನ್ ಇರಲಿದೆ. ಆದರೆ ನಮ್ಮ ಜನಕ್ಕೆ ನಂಬಿಕೆ ಇಲ್ಲ. ಎಲ್ಲಿ ಬಾರ್ ಬಂದ್ ಆದಂತೆ, ವೈನ್ ಶಾಪ್ ಸಡನ್ ಆಗಿ ಬಂದ್ ಆಗಿಬಿಟ್ಟರೆ? ನಾಳೆ ಭಾನುವಾರ ಬೇರೆ : ಹೇಗಪ್ಪಾ ದಿನ ಕಳೆಯೋದು ? ಎಂಬ ಚಿಂತನೆ. ಕೋಳಿ ಕುಯ್ದು, ನಾಟಿ ಮಸಾಲಾ ಕುದಿ ಬರುವಾಗ ಸಣ್ಣಗೆ ಗಂಟಲಿಗೆ ಬಿಟ್ಟುಕೊಳ್ಳಲು ಏನಾದರೂ ಮನೇಲಿ ಇಲ್ಲದೆ ಹೋದರೆ ಹೇಗೆ ? …

ಮಾ.22 ಜನತಾ ಕರ್ಫ್ಯೂ ಹಿನ್ನೆಲೆ | ಚಿಕನ್ ಸೆಂಟರ್, ವೈನ್ ಶಾಪ್ ಫುಲ್ ರಶ್ ! Read More »

ಕೊರೊನಾ ವೈರಸ್ ಮುಂಜಾಗೃತೆ | ಮಾ.24 ರ ಪಾಲ್ತಾಡು ಒತ್ತೆಕೋಲ ಮುಂದೂಡಿಕೆ

ಪುತ್ತೂರು : ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.24ರಂದು ನಡೆಯಲಿದ್ದ 252ನೇ ವರ್ಷದ ಐತಿಹಾಸಿಕ ಒತ್ತೆಕೋಲವನ್ನು ಕೊರೊನಾ ವೈರಸ್ ನ‌ ಮುಂಜಾಗ್ರತಾ ಕ್ರಮಕ್ಕಾಗಿ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಮುಂದೂಡಲಾಗಿದೆ. ಈ ಹಿಂದೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ಸಂತೆ ವ್ಯಾಪಾರ ನಡೆಸದೇ ಒತ್ತೆಕೋಲ ನಡೆಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಮಾ.21ರಂದು ನಡೆದ ಸಮಿತಿ ಸಭೆಯಲ್ಲಿ ಒತ್ತೆಕೋಲವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಆಡಳಿತ ಮೊಕ್ತೇಸರ ನವೀನ್ ರೈ ನಡುಮನೆ ತಿಳಿಸಿದ್ದಾರೆ. ಅನೈತಿಕ ಅನಿತಾಳ ವಿಚಿತ್ರ ಕಥೆ …

ಕೊರೊನಾ ವೈರಸ್ ಮುಂಜಾಗೃತೆ | ಮಾ.24 ರ ಪಾಲ್ತಾಡು ಒತ್ತೆಕೋಲ ಮುಂದೂಡಿಕೆ Read More »

ಪ್ರತೀಕ್ ಕೋಟ್ಯಾನ್ ಮತ್ತವನ ಸಹಚರ ಅರೆಸ್ಟ್ | ನಾವೂರು ಕಪ್ಪು ಕಲ್ಲು ಅಕ್ರಮ ಗಣಿಗಾರಿಕೆ

ಬೆಳ್ತಂಗಡಿ, ನಾವೂರು : ಝೇವಿಯರ್ ಪಾಲೇಲಿ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಪ್ಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಪ್ರತೀಕ್ ಕೋಟ್ಯಾನ್ ಮತ್ತವನ ಓರ್ವ ಸಹಚರನನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಶ್ವಿಯಾಗಿದ್ದಾರೆ. ಮೊನ್ನೆ ಮಾರ್ಚ್ 19 ರಂದು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾಗ ಅಲ್ಲಿಗೆ ಬೆಳ್ತಂಗಡಿ ತಹಶೀಲ್ದಾರರ ನೇತೃತ್ವದಲ್ಲಿ ದಾಳಿ ನಡೆದಿತ್ತು. ಆದರೆ ಜಗತ್ ಚಾಲಾಕಿ ಪ್ರತೀಕ್ ಕೋಟ್ಯಾನ್ ತನ್ನ ತಂಡದ ಜತೆ ಓಡಿ ತಪ್ಪಿಸಿಕೊಂಡಿದ್ದ. ಆದರೆ ಆರೋಪಿಗಳ ಹೆಜ್ಜೆ ಜಾಡು ಹಿಡಿದು ಹೋದ ಬೆಳ್ತಂಗಡಿ ಪೊಲೀಸರು ಈಗ ಇಬ್ಬರನ್ನೂ ಎತ್ತಾಕಿಕೊಂಡು …

ಪ್ರತೀಕ್ ಕೋಟ್ಯಾನ್ ಮತ್ತವನ ಸಹಚರ ಅರೆಸ್ಟ್ | ನಾವೂರು ಕಪ್ಪು ಕಲ್ಲು ಅಕ್ರಮ ಗಣಿಗಾರಿಕೆ Read More »

ಕೊರೋನಾ ಭೀತಿ ಹಿನ್ನೆಲೆ ಗಡಿಪ್ರದೇಶದಲ್ಲಿ ತೀವ್ರ ತಪಾಸಣೆ ; ಕಲ್ಲುಗುಂಡಿ ಮತ್ತು ಜಾಲ್ಸೂರು ವಾಹನಗಳ ತಪಾಸಣೆ

ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸುಳ್ಯದ ಗಡಿ ಪ್ರದೇಶವಾದ ಕಲ್ಲುಗುಂಡಿ ಮತ್ತು ಜಾಲ್ಸೂರಿನಲ್ಲಿ ವಾಹನಗಳ ತಪಾಸಣೆ ಮತ್ತು ಜಾಗೃತಿ ಕಾರ್ಯ ತೀವ್ರಗೊಂಡಿದೆ. ಮಡಿಕೇರಿಯ ಕೊಂಡಂಗೇರಿ ಪ್ರದೇಶದ ವ್ಯಕ್ತಿಯೊಬ್ಬನಿಗೆ ಕೊರೋನಾ ವೈರಸ್ ದೃಢಪಟ್ಟ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಡಿಕೇರಿ ಸುಳ್ಯ ಪ್ರದೇಶಕ್ಕೆ ಹತ್ತಿರವಿರುವ ಕಾರಣ ಸುಳ್ಯವನ್ನು ಸಂಪರ್ಕಿಸುವ ಸಂಪಾಜೆ ಮತ್ತು ಕಲ್ಲುಗುಂಡಿ ಭಾಗದಲ್ಲಿ ಮಡಿಕೇರಿ ಕಡೆಯಿಂದ ಬರುವ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಪೋಲೀಸ್ ಇಲಾಖೆಗಳ ಸಿಬ್ಬಂಧಿಗಳು ಕೈಜೋಡಿಸಿದ್ದಾರೆ. …

ಕೊರೋನಾ ಭೀತಿ ಹಿನ್ನೆಲೆ ಗಡಿಪ್ರದೇಶದಲ್ಲಿ ತೀವ್ರ ತಪಾಸಣೆ ; ಕಲ್ಲುಗುಂಡಿ ಮತ್ತು ಜಾಲ್ಸೂರು ವಾಹನಗಳ ತಪಾಸಣೆ Read More »

ಡಂಪಿಂಗ್ ಯಾರ್ಡ್ ಆಗಿ ಮಾರ್ಪಡಾಗಿರುವ ಸುಳ್ಯ ನ.ಪಂ. ಕಚೇರಿ ಆವರಣ ;ಗಬ್ಬೆದ್ದು ನಾರುತ್ತಿರುವ ನಗರಾಡಳಿತ, ಕಚೇರಿ ಆವರಣದಲ್ಲೇ ಪ್ರತಿದಿನ ತ್ಯಾಜ್ಯಕ್ಕೆ ಬೆಂಕಿ

–ಪದ್ಮನಾಭ ಸುಳ್ಯ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾದ ಹಸಿಕಸ ಮತ್ತು ಒಣ ಕಸವನ್ನು ವಿಲೇವಾರಿ ಮಾಡಲು ಪ್ರತ್ಯೇಕ ಜಾಗ ಇಲ್ಲದೆ ಸುಮಾರು ೨ ವರ್ಷದಿಂದ ನಗರ ಪಂಚಾಯತ್ ಆವರಣದಲ್ಲೇ ಹಾಕಿ ಕಸ ವಿಂಗಡಣೆ ಕಾಮಗಾರಿ ನಡೆಸುತ್ತಿರುವುದರಿಂದ ಮತ್ತು ವಿಂಗಡಿತ ಕಸವನ್ನು ಬೇರೆಲ್ಲಿಗೂ ಕೊಂಡೊಯ್ಯಲಾರದೆ ಅಲ್ಲೇ ಇರಿಸಬೇಕಾಗಿ ಬಂದಿರುವುದರಿಂದ ನ.ಪಂ. ಕಚೇರಿಯ ಸುತ್ತ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿದ್ದು ಕಚೇರಿ ತುಂಬೆಲ್ಲಾ ಗಬ್ಬೆದ್ದು ನಾರುತ್ತಿದೆ. ಅಲ್ಲದೇ ಕಚೇರಿಯ ಹಿಂದುಗಡೆಯೇ ಪ್ರತಿದಿನ ಸಂಗ್ರಹವಾಗುವ ಕಸಕ್ಕೆ ಬೆಂಕಿ ಹಾಕಿ ಪರಿಸರ …

ಡಂಪಿಂಗ್ ಯಾರ್ಡ್ ಆಗಿ ಮಾರ್ಪಡಾಗಿರುವ ಸುಳ್ಯ ನ.ಪಂ. ಕಚೇರಿ ಆವರಣ ;ಗಬ್ಬೆದ್ದು ನಾರುತ್ತಿರುವ ನಗರಾಡಳಿತ, ಕಚೇರಿ ಆವರಣದಲ್ಲೇ ಪ್ರತಿದಿನ ತ್ಯಾಜ್ಯಕ್ಕೆ ಬೆಂಕಿ Read More »

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ‘ ಯಶಸ್ ‘ ವಿದ್ಯಾರ್ಥಿಗಳಿಂದ ಕೃಷಿ ತೋಟಕ್ಕೆ ಭೇಟಿ

ಪುಣಚ : ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ವಿವೇಕಾನಂದ ಅಧ್ಯಯನ ಕೇಂದ್ರ ‘ ಯಶಸ್‍ ‘ ಇದರ ವಿದ್ಯಾರ್ಥಿಗಳಿಗೆ ಬಾಳೆ ಕೃಷಿ ಮತ್ತು ತೋಟಗಾರಿಕೆಯಲ್ಲಿರುವ ಲಾಭ-ನಷ್ಟ, ಸೌಲಭ್ಯ- ಸಮಸ್ಯೆಗಳ ಕುರಿತಾದ ಪ್ರಾತ್ಯಕ್ಷಿಕೆ ಅಧ್ಯಯನಕ್ಕಾಗಿ ಪುಣಚದ ರಾಜೇಶ್‍ ಅವರ ತೋಟಕ್ಕೆ ಭೇಟಿ ನೀಡಲಾಯಿತು. ನಾಗರಿಕ ಸೇವೆಯ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳಲ್ಲಿ ಕೃಷಿಯ ಕುರಿತು ಮಾಹಿತಿಯನ್ನು ನೀಡುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿ ಸಮೂಹಕ್ಕೆ ಕೃಷಿ ಕಡೆಗಿನ ಒಲವು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ …

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ‘ ಯಶಸ್ ‘ ವಿದ್ಯಾರ್ಥಿಗಳಿಂದ ಕೃಷಿ ತೋಟಕ್ಕೆ ಭೇಟಿ Read More »

ಕರ್ನಾಟಕದಲ್ಲಿ ಕೊರೊನಾ ಪಾಸಿಟಿವ್ ಮತ್ತೊಂದು ದೃಢ | ಚಿಕ್ಕಬಳ್ಳಾಪುರದ ಗೌರಿಬಿದನೂರಿನ ವ್ಯಕ್ತಿ

ಕರ್ನಾಟಕದಲ್ಲಿ ಮಾ.21ರಂದು‌ಕೊರೊನಾ ಪಾಸಿಟವ್ ಪತ್ತೆಯಾಗಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರಿನ ವ್ಯಕ್ತಿಯೋರ್ವರು ಮುಸ್ಲಿಂ ರ ಪ್ರಸಿದ್ಧ ಯಾತ್ರಾ ಸ್ಥಳ ಮೆಕ್ಕಾ ಗೆ ಹೋಗಿದ್ದು,ಅವರು ಊರಿಗೆ ವಾಪಾಸಾಗಿದ್ದರು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅವರ ವೈದ್ಯಕೀಯ ವರದಿಗಾಗಿ ಕಾಯಲಾಗಿತ್ತು. ಇಂದು ಆ ವ್ಯಕ್ತಿಗೆ ಕೊರೊನಾ Covid 19 ಪಾಸಿಟಿವ್ ಆಗಿದೆ ಎಂದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಕೊರೊನಾ ವೈರಸ್ ಬಾಧಿತ ವ್ಯಕ್ತಿಯನ್ನು ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಕುರಿತು ಕರ್ನಾಟಕದ ಆರೋಗ್ಯ ಸಚಿವ ಬಿ.ಶ್ರೀ ರಾಮುಲು ತಮ್ಮ ಟ್ವಿಟ್ಟರ್ ಖಾತೆಯಲ್ಲಿ …

ಕರ್ನಾಟಕದಲ್ಲಿ ಕೊರೊನಾ ಪಾಸಿಟಿವ್ ಮತ್ತೊಂದು ದೃಢ | ಚಿಕ್ಕಬಳ್ಳಾಪುರದ ಗೌರಿಬಿದನೂರಿನ ವ್ಯಕ್ತಿ Read More »

ಕೊರೊನಾ ವೈರಸ್ ಹರಡುವಿಕೆ ತಡೆಗೆ ಮುನ್ನೆಚ್ಚರಿಕೆ | ಪುತ್ತೂರಿನಲ್ಲಿ ಶಾಸಕರಿಂದ ಅಧಿಕಾರಿಗಳ ಸಭೆ

ಪುತ್ತೂರು: ಕೊರೋನಾ (ಕೋವಿಡ್ 19) ವೈರಸ್ ಹರಡುವಿಕೆ ತಡೆಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ರವರ ನೇತೃತ್ವದಲ್ಲಿ ಪುತ್ತೂರು ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಸೇರಿದಂತೆ ಇಲಾಖಾಧಿಕಾರಿಗಳು ಹಾಜರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಕೊರೊನಾ ವೈರಸ್ ತಡೆಗೆ ಏನೆಲ್ಲಾ ಮಾಡ ಬಹುದು. ಜನರಲ್ಲಿ ಜಾಗೃತಿ ಮೂಡಿಸೋ ಕಾರ್ಯಗಳ ಕುರಿತು ಸಂವಹನ ನಡೆಸಲಾಯಿತು.

ಬೆಳ್ತಂಗಡಿ, ನಾವೂರು | ಪ್ರತೀಕ್ ಕೋಟ್ಯಾನ್ ತಂಡದ ಮೇಲೆ ದಾಳಿ, ಭಾರೀ ಪ್ರಮಾಣದ ಸ್ಪೋಟಕ ಸಹಿತ 25 ಲಕ್ಷ ರೂ. ಸೊತ್ತು ವಶ| ಪ್ರತೀಕ್, ಅಣ್ಣಪ್ಪ ಬಂಧನ

ಬೆಳ್ತಂಗಡಿ : ಅಕ್ರಮವಾಗಿ ಕಪ್ಪುಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಲಾಯಿಲ ನಿವಾಸಿ, ಮಾಜಿ ಪತ್ರಕರ್ತ ಪ್ರತೀಕ್ ಕೋಟ್ಯಾನ್ ಮತ್ತವರ ತಂದೆ ಮತ್ತು ತಂಡದ ಮೇಲೆ ಬೆಳ್ತಂಗಡಿ ತಹಶೀಲ್ದಾರ್ ರ ಸೂಚನೆಯಂತೆ ಬೆಳ್ತಂಗಾಡಿ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಜಗತ್ ಚಾಲಾಕಿ ಪ್ರತೀಕ್ ಕೋಟ್ಯಾನ್ ಓಡಿ ತಪ್ಪಿಸಿಕೊಂಡಿದ್ದಾನೆ. ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ ಹಲವಾರು ಸಮಯಗಳಿಂದ ಈತ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ. ದಾಳಿ ಸಮಯ ಕಲ್ಲಿನ ಕೋರೆ ಸ್ಥಳದಲ್ಲಿ ಭಾರೀ ಪ್ರಮಾಣದ ಜಿಲೆಟಿನ್ ಕಡ್ಡಿಗಳು, ವಯರ್‌ಗಳು, 11 …

ಬೆಳ್ತಂಗಡಿ, ನಾವೂರು | ಪ್ರತೀಕ್ ಕೋಟ್ಯಾನ್ ತಂಡದ ಮೇಲೆ ದಾಳಿ, ಭಾರೀ ಪ್ರಮಾಣದ ಸ್ಪೋಟಕ ಸಹಿತ 25 ಲಕ್ಷ ರೂ. ಸೊತ್ತು ವಶ| ಪ್ರತೀಕ್, ಅಣ್ಣಪ್ಪ ಬಂಧನ Read More »

ಕೇರಳ ಪೊಲೀಸ್ ಇಲಾಖೆಯಿಂದ ಕೊರೊನಾ ಜಾಗೃತಿ| ವಿಡಿಯೋ ವೈರಲ್

ವಿಶ್ವಾದ್ಯಂತ ಜನತೆಯನ್ನು ಭೀತಿಗೆ ತಳ್ಳಿರುವ ಕೊರೊನಾ ವೈರಸ್ ಕುರಿತಂತೆ ಕೇರಳ ಪೋಲಿಸ್ ಇಲಾಖೆಯ ಜಾಗೃತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹೆಚ್ಚು ಸ್ವಚ್ಚತೆಯ ಬಗ್ಗೆ ಗಮನ ಇರಲಿ ಎಲ್ಲರಲ್ಲೂ…ಚೈನ್ ಲಿಂಕ್ ಗೆ ಬ್ರೇಕ್ ಹಾಕುವ.. ಕೊರೊನಾ ವೈರಸ್ ನಮ್ಮಿಂದ ಓಡಿಸುವ…ಎಂಬ ಸಂದೇಶ ಇರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.ಈ ವಿಡಿಯೋ ಕುರಿತಂತೆ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!
Scroll to Top