ಉಪ್ಪಿನಂಗಡಿ, ಪಂಜಳ | 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಕಾರು

ಉಪ್ಪಿನಂಗಡಿ, ಮಾ.20 : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಉಪ್ಪಿನಂಗಡಿ ಸಮೀಪ 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿ ಇರುವವರು ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ.


Ad Widget

Ad Widget

ಶುಕ್ರವಾರ ಬೆಳಿಗ್ಗೆ ಉಪ್ಪಿನಂಗಡಿಯ ಪಂಜಾಳ ಸಮೀಪದಲ್ಲಿ ಈ ಅವಘಡ ನಡೆದಿದೆ.


Ad Widget

ಬೆಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಕಾರಿನಲ್ಲಿ ಇಬ್ಬರು ಮಹಿಳೆಯರು ಇಬ್ಬರು ಮಕ್ಕಳು ಮತ್ತು ಮತ್ತೊಬ್ಬರಿದ್ದರು.
ಕಾರು ಉಪ್ಪಿನಂಗಡಿಯ ಪಂಜಾಳ ಸಮೀಪ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳದ ಗುಂಡಿಗೆ ಹೊರಳಿಕೊಂಡಿದೆ. ವೇಗವಾಗಿ ಬರುತ್ತಿದ್ದ ಕಾರು ಬಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಉಡುಪಿಯ ಶಿರ್ವ ಮೂಲದ ನವೀನ್ ಮತ್ತವರ ಕುಟುಂಬ ಬೆಂಗಳೂರಿನಿಂದ ಊರಿಗೆ ರಜೆಯಲ್ಲಿ ಬರುತ್ತಿದ್ದರು. ನವೀನ್, ಇಬ್ಬರು ಮಹಿಳೆಯರು ಮತ್ತಿಬ್ಬರು ಮಕ್ಕಳು ಕಾರಿನಲ್ಲಿದ್ದು ಅವರೆಲ್ಲ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಇವರೆಲ್ಲರನ್ನೂ ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: