ಕೇರಳದಲ್ಲಿ ಕೊಲೆಗೆ ಯತ್ನಿಸಿದಾತ ಕಡಬದಲ್ಲಿ ಪೊಲೀಸ್ ವಶಕ್ಕೆ

ಕಡಬ | ಕೇರಳದ ಕೊಲ್ಲಂ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ ನಡೆಸಿ ಕಡಬದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರ ಸಹಕಾರದೊಂದಿಗೆ ಕೇರಳ ಪೊಲೀಸರು ಮಾ.20ರಂದು ಕಡಬದಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕೊಲ್ಲಂ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸುಗು ಎಂದು ಗುರುತಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಆರೋಪಿಯ ವಿರುದ್ಧ ಕೇರಳದ ಕೊಲ್ಲಂ ಠಾಣಾ ವ್ಯಾಪ್ತಿಯಲ್ಲಿ 307 ಕೇಸು ದಾಖಲಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯು ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಮಡುಪು ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ.

ಮಾ.20ರಂದು ಕಡಬಕ್ಕೆ ಆಗಮಿಸಿದ ಕೊಲ್ಲಂ ಠಾಣಾ ಎಸ್ಐ ಶಾನ್ವಾಝ್ ಹಾಗೂ ಸಿಬ್ಬಂದಿಗಳು, ಕಡಬ ಠಾಣಾ ಹೆಡ್ ಕಾನ್ಸ್‌ಟೇಬಲ್ ಹರೀಶ್ ಹಾಗೂ ಕಾನ್ಸ್‌ಟೇಬಲ್ ಭವಿತ್ ಹಾಗೂ ಊರವರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.

error: Content is protected !!
Scroll to Top
%d bloggers like this: