ಕಾಣಿಯೂರು ಹಾ.ಉ.ಸ.ಸಂಘದ ವಿಶೇಷ ಸಭೆ |ಜನತಾ ಕರ್ಫ್ಯೂ ಹಿನ್ನಲೆ | ಮಾ 22ರಂದು ಹಾಲು ಸಂಗ್ರಹಣೆ ಸ್ಥಗಿತ

ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವಿಶೇಷ ಸಭೆಯು ಮಾ 20ರಂದು ಸಂಘದ ಪ್ರಧಾನ ಕಛೇರಿ ಕಾಣಿಯೂರಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು ವಹಿಸಿದ್ದರು.


Ad Widget

Ad Widget

ಕೊರೋನಾ ವೈರಸ್ ರೋಗದ ಭೀತಿ ಹೆಚ್ಚಾಗುವ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ ಜಗತ್ತಿನಾಧ್ಯಂತ ಜನತಾ ಕರ್ಫ್ಯೂ ಕುರಿತು ಮಾ 22 ರಂದು ಕಾಣಿಯೂರು ಹಾ.ಉ.ಸ.ಸಂಘದಲ್ಲಿ ಒಂದು ದಿನದ ಹಾಲು ಸಂಗ್ರಹಣೆಯನ್ನು ಸ್ಥಗಿತಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.


Ad Widget

ಈ ನಿಟ್ಟಿನಲ್ಲಿ ಸಂಘದ ಎಲ್ಲಾ ಸದಸ್ಯರು ಕೈಜೋಡಿಸುವಂತೆ ಸಂಘದ ಅಧ್ಯಕ್ಷರು ಮನವಿ ಮಾಡಿದ್ದಾರೆ. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಾಜೇಶ್ ಮುಂಡಾಳ, ನಿರ್ದೇಶಕರಾದ ರಾಮಣ್ಣ ಗೌಡ ಮುಗರಂಜ, ಚಂದ್ರಯ್ಯ ಆಚಾರ್ಯ ಅಬೀರ, ರಾಜೇಶ್ ಮೀಜೆ, ಪದ್ಮಯ್ಯ ಗೌಡ ಹೊಸೊಕ್ಲು, ಹೇಮಾವತಿ ಎಂ.ಎಲ್ ಮುಗರಂಜ ಅವರು ಉಪಸ್ಥಿತರಿದ್ದರು.

ಸಂಘದ ಕಾರ್ಯನಿರ್ವಹಣಾಕಾರಿ ಜಗದೀಶ್ ಗೌಡ ಸ್ವಾಗತಿಸಿ, ಸಭೆ ನಿರ್ವಹಿಸಿದರು.

Ad Widget

Ad Widget

Ad Widget
error: Content is protected !!
Scroll to Top
%d bloggers like this: