ಮಾರ್ಚ್ 31 ಕನ್ನಡರವರೆಗೆ ಕರ್ನಾಟಕ ಬಂದ್ ವಿಸ್ತರಣೆ | ಕರೋನಾ ವೈರಸ್ ಸೋಂಕಿನ ಹಿನ್ನೆಲೆ

ಕರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ 14 ರಿಂದ ಒಂದು ವಾರ ಹೇರಲಾಗಿದ್ದ ಶಾಲಾ-ಕಾಲೇಜು, ಮದುವೆ, ಸಮಾರಂಭ, ಪಬ್ಬು, ಕ್ಲಬ್ಬು, ಸ್ವಿಮ್ಮಿಂಗ್ ಪೂಲ್, ಬಂದ್ ನ್ನು ಈ ತಿಂಗಳ ಕೊನೆಯವರೆಗೆ (ಮಾ.31) ವಿಸ್ತರಿಸಲಾಗಿದೆ. ಅಲ್ಲದೆ ಪಂಚಾಯತಿ ಸ್ಥಳೀಯ ಸಂಸ್ಥೆಗಳು ಮತ್ತು ನಗರಪಾಲಿಕೆಯ ಚುನಾವಣೆಗಳನ್ನು ಮುಂದೂಡಲಾಗಿದೆ.

ಇವತ್ತು ಬೆಳಿಗ್ಗೆ ಸಭೆ ಸೇರಿದ್ದ ಸಚಿವ ಸಂಪುಟ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಒಟ್ಟು ಬೆಂಗಳೂರನ್ನು ಶಟ್ ಡೌನ್ ಮಾಡಲು ಸಚಿವ ಸಂಪುಟದ ಕೆಲವರು ವ್ಯಕ್ತಪಡಿಸಿದ್ದರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಅದಕ್ಕೆ ಒಪ್ಪಿಲ್ಲ.

ಬೆಳಿಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನವನ್ನು ಮುಂದೂಡುವ ಬಗ್ಗೆಯೂ ಮಾತುಕತೆ ನಡೆದಿತ್ತು. ಒಂದು ಮೂಲಗಳ ಪ್ರಕಾರ ಅಧಿವೇಶನವು ಶುಕ್ರವಾರದವರೆಗೆ ನಡೆಯಲಿದ್ದು ಆನಂತರ ಉಳಿದ ಭಾಗವನ್ನು ಏಪ್ರಿಲ್ ತಿಂಗಳಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಶುಕ್ರವಾರದೊಳಗೆ ಅಧಿವೇಶನದಲ್ಲಿ ಅಗತ್ಯ ಹಣಕಾಸು ಸಂಬಂಧಿ ವಿಧೇಯಕಗಳಿಗೆ ಮತ್ತು ಪ್ರಮುಖ ತಿದ್ದುಪಡಿಗಳಿಗೆ ಸಹಿ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ನಾಲ್ವರು ಸಚಿವರುಗಳ ಟಾಸ್ಕ್ ಫೋರ್ಸ್ ರಚಿಸಿದ್ದು ಒಟ್ಟು 200 ಕೋಟಿಗಳ ಧನ ಸಹಾಯವನ್ನು ಬಿಡುಗಡೆ ಮಾಡಿದ್ದಾರೆ.

Leave A Reply

Your email address will not be published.