ನಮ್ಮಪ್ಪೆ ತುಳು ಭಾಷೆಗ್ ಏಪ ತಿಕ್ಕು ಮಾನ್ಯತೆ ? | ವೇದವ್ಯಾಸ ಕಾಮತ್ ಪ್ರಶ್ನೆಗೆ ಉತ್ತರಿಸಿದ್ದಾರೆ ಸಿಟಿ ರವಿ

ಬೆಂಗಳೂರು, ಮಾ 17 : ತುಳು ಭಾಷೆಯನ್ನು ಸಂವಿಧಾನದ ಅನುಚ್ಛೇದ 8 ರಲ್ಲಿ ಸೇರಿಸಲು ಇಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸಿದ್ದು, ಇದಕ್ಕೆ ಕನ್ನಡ‌ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಉತ್ತರ ನೀಡಿದ್ದಾರೆ.

ಎಂಟನೇ ಪರಿಚ್ಛೇದದಲ್ಲಿ ಒಟ್ಟು 22 ಭಾಷೆಗಳಿದ್ದು, ಇನ್ನೂ 38 ಭಾಷೆಗಳನ್ನು ಎಂಟನೇ ಪರಿಚ್ಛೇದದಲ್ಲಿ ಸೇರಲು ಸರದಿಯಲ್ಲಿವೆ. ಈ ಎಲ್ಲಾ ಭಾಷೆಗಳು ಅರ್ಜಿಹಾಕಿ ಕೂತಿವೆ. ಆ ಪೈಕಿ 38 ನೇ ಭಾಷೆ ತುಳುವಾಗಿದೆ. ಕರ್ನಾಟಕದ ಭಾಷೆಗಳ ಪೈಕಿ ಕೊಡವ, ಬಂಜಾರ, ತುಳು ಭಾಷೆ 8 ನೇ ಷೆಡ್ಯೂಲ್ ನಲ್ಲಿ ಸೇರಿಸುವ ಪಟ್ಟಿಯಲ್ಲಿದೆ. ಇದಕ್ಕಾಗಿ ಮನವಿ, ಕಾರ್ಯಗಳು ಪ್ರಗತಿಯಲ್ಲಿವೆ.

ಈ ಸಂಬಂಧ ಸೀತಾಕಾಂತ ಮಹಾಪಾತ್ರಾ ಸಮಿತಿಯ ವರದಿ ಪರಿಶೀಲನೆ ಬಳಿಕ ಅಂತರ್ ಇಲಾಖಾ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಸಮಿತಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತದೆ. ಈಗಾಗಲೇ ನಾನು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ.

ದೆಹಲಿಗೆ ಹೋದಾಗ ಈ ಬಗ್ಗೆ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ. ಎಂಟ‌ನೇ ಪರಿಚ್ಛೇದದಲ್ಲಿ ತುಳು ಭಾಷೆ ಸೇರ್ಪಡೆಯಾದ ಬಳಿಕ ಅದು ರಾಜ್ಯ ಭಾಷೆಯಾಗಲಿದೆ ಎಂದು ಕನ್ನಡ ಸಂಸ್ಕೃತಿ ಸಚಿವ ಸಿ ಟಿ ರವಿ ಯವರು ಶಾಸಕ ವೇದವ್ಯಾಸ ಕಾಮತ್ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

Leave A Reply

Your email address will not be published.