ಕಡಬ ಕೊರಿಯರ್ | ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು

ಕಡಬ : ಕಬಕ ಪುತ್ತೂರು-ಸುಬ್ರಹ್ಮಣ್ಯ ರೈಲ್ವೆ ಹಳಿಯಲ್ಲಿ ಕಡಬ ತಾಲೂಕಿನ 102 ನೇ ನೆಕ್ಕಿಲಾಡಿ ಗ್ರಾಮದಲ್ಲಿ ವ್ಯಕ್ತಿಯೋರ್ವರು ರೈಲಿನ ಅಡಿಗೆ ಬಿದ್ದು ಮೃತಪಟ್ಟ ಕುರಿತು ಮಾ.16ರಂದು ವರದಿಯಾಗಿದೆ.

102ನೇ ನೆಕ್ಕಿಲಾಡಿ ಗ್ರಾಮದ ಕೊರಿಯರ್ ಎಂಬಲ್ಲಿನ ದಂಡುಗಿರಿ ನಿವಾಸಿ ಸುಂದರ(35ವ.) ಎಂಬವರೇ ಪ್ರಾಣ ಕಳೆದುಕೊಂಡ ವ್ಯಕ್ತಿ.


Ad Widget

Ad Widget

Ad Widget

Ad Widget

Ad Widget

Ad Widget

ಕೊರಿಯರ್ ಗೇಟ್ ಹಾಗೂ ಬಜಕೆರೆ ರೈಲ್ವೆ ಸ್ಟೇಶನ್ ನಡುವಿನ ಮದ್ಯೆ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಸುಂದರ ಅವರು ನಿನ್ನೆ ಅಲ್ಲೇ ಸಮೀಪದಲ್ಲಿ ಆದಿ ಮೊಗೇರ್ಕಳ ದೈವದ ನೇಮೋತ್ಸವ ನಡೆದಿದ್ದು,ಆ ಕಾರ್ಯಕ್ರಮ ದಿಂದ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಆಕಸ್ಮಿಕವಾಗಿ ಪ್ರಾಣಕಳೆದು ಕೊಂಡಿದ್ದಾರೋ ಎಂಬ ಕುರಿತು ತನಿಖೆಯ ಬಳಿಕ ತಿಳಿಯಲಿದೆ.

error: Content is protected !!
Scroll to Top
%d bloggers like this: