ಆದರ್ಶ ವಿವಿಧೋದ್ದೆಶ ಸಹಕಾರಿ ಸಂಘದ 12 ನೆ ಶಾಖೆಯ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಕಾರ್ಯಚರಿಸುತ್ತಿರುವ ಆದರ್ಶ ವಿವಿಧೋದ್ದೆಶ ಸಹಕಾರ ಸಂಘವು ಸಹಕಾರಿ ಧುರೀಣರಾಧ ಶ್ರೀ ಕೆ. ಸಿತಾರಾಮ ರೈ ಸವಣೂರು ರವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡು ಅನುಭವಿ ನಿರ್ದೆಶಕರ ಆಡಳಿತ ಮಂಡಳಿ ಮತ್ತು ಸದಸ್ಯರ ಸಲಹೆ, ಸೂಚನೆ, ಸಹಕಾರಗಳಿಂದ ಭದ್ರ ತಳಪಾಯದಿಂದ ಸಂಘವು ಸೇವೆ ಸಲ್ಲಿಸುತ್ತಾ ಬಂದಿದ್ದು, ಗ್ರಾಮೀಣ ಭಾಗದ ಜನರಿಗೆ ಸೇವೆ ಸಲ್ಲಿಸುವ ದೃಷ್ಠಿಯಿಂದ ಹನ್ನೊಂದು ಶಾಖೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಾದ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ,ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು,ಕುಂಬ್ರ, ಬೆಳ್ಳಾರೆ,ಮತ್ತು ಪಂಜಗಳಲ್ಲಿ ಹೊಂದಿದ್ದು, ಪ್ರಸ್ತುತ ಪುತ್ತೂರಿನ ಬೊಳುವಾರಿನಲ್ಲಿ ತನ್ನ ಹನ್ನೆರಡನೆಯ ಶಾಖೆಯನ್ನು ದಿನಾಂಕ 25-03-2020 ರಂದು ಉದ್ಘಾಟನೆಯನ್ನು ನೆರವೇರಿಸಿ ತನ್ನ ಸೇವೆಯನ್ನು ವಿಸ್ತರಿಸಲು ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಆದರ್ಶ ವಿವಿಧೋದ್ದೆಶ ಸಹಕಾರಿ ಸಂಘ ಅಧ್ಯಕ್ಷರಾದ ಕೆ.ಸೀತಾರಾಮ ರೈ ಸವಣೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉದ್ಘಾಟನೆಯನ್ನು ಪುತ್ತೂರು ವಿಧಾನ ಸಭಾ ಕ್ಷೆತ್ರದ ಮಾನ್ಯ ಶಾಸಕರಾದ ಸಂಜೀವ ಮಠಂದೂರು ಮಾಡಲಿದ್ದು, ಉದ್ಯಮಿಗಳು ಮತ್ತು ಕೃಷಿಕರಾದ ಅರಿಯಡ್ಕ ಚಿಕ್ಕಪ್ಪ ನಾೈಕ್ ಅದ್ಯಕ್ಷತೆ ವಹಿಸಲಿದ್ದಾರೆ. ಭದ್ರತಾ ಕೋಶ ಉದ್ಘಾಟನೆ ದ,ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಾರಾದ ಪ್ರವೀಣ್ ನಾಯಕ್, ಕೆಸಿಎಸ್,ಮಾಡಲಿದ್ದು, ಡಾ| ಅಶೋಕ್ ಪಡಿವಾಲ್ ಪ್ರಥಮ ಠೆವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ ರಾವ್ ಕೆ.ಹಾಗೂ ನಗರಸಭಾ ಸದಸ್ಯರಾದ ಜಗನ್ನಿವಾಸ ರಾವ್ ಪಿ.ಜೆ. ಅವರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಶ್ವಿನ್ ಎಲ್ ಶೆಟ್ಟಿ, ವಸಂತ್ ಜಾಲಾಡಿ, ದಯಾಕಾಂತಿ ಕೆ, ಜಯಾರಾಜ್ ಭಂಡಾರಿ,ರಾಮಯ್ಯ ರೈ ತಿಂಗಳಾಡಿ ಮತ್ತಿತರರು ಭಾಗವಹಿಸಿದ್ದರು.

Leave A Reply

Your email address will not be published.