ಕೊರೋನಾ ಕಟ್ಟೆಚ್ಚರ | ಕರಾವಳಿಯಲ್ಲಿ ಮುನ್ನೆಚ್ಚರಿಕೆ ಘೋಷಣೆ, 80 ಸ್ಥಳಗಳಲ್ಲಿ ತಪಾಸಣಾ ಕೇಂದ್ರ ಸ್ಥಾಪನೆ

ಜಿಲ್ಲೆಯ 6 ಸಮುದಾಯ ಆರೋಗ್ಯ ಕೇಂದ್ರ, 66 ಪ್ರಾಥಮಿಕ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆಗಳಲ್ಲಿ ಕೊರೊನಾ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ವೆನ್ ಲಾಕ್ ಮತ್ತು ಲೇಡಿಗೋಶನ್‌ ಜಿಲ್ಲಾಸ್ಪತ್ರೆಗಳಲ್ಲಿ ಮಾತ್ರವಲ್ಲದೆ, ಅಲ್ಲದೆ ಅಗತ್ಯ ಬಿದ್ದಲ್ಲಿ ಸಮೀಪದ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬಹುದು.

ರಾಜ್ಯದಲ್ಲಿ ಕೊರೊನಾ ಭೀತಿ ಆವರಿಸಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಎನ್‌ಎಂಪಿಟಿ ಸೇರಿದಂತೆ 80 ಸ್ಥಳಗಳಲ್ಲಿಗಳಲ್ಲಿ ಕೊರೊನಾ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ.

ಎಲ್ಲ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳ ವೈದ್ಯರು ಹಾಗೂ ಸಿಬಂದಿಗೆ ಕೊರೊನಾ ಪ್ರಕರಣಗಳು ಕಂಡುಬಂದಲ್ಲಿ ಅದನ್ನು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ.

ಎಲ್ಲ ಕಡೆಗಳಲ್ಲೂ ಶುಕ್ರವಾರ ದಿಂದಲೇ ತಪಾಸಣಾ ಕೇಂದ್ರಗಳು ಕಾರ್ಯಾ ರಂಭಿಸಿವೆ. ವೆನಾ ಲಾಕ್‌, ಲೇಡಿಗೋಶನ್‌ ಆಸ್ಪತ್ರೆ, ವಿಮಾನ ನಿಲ್ದಾಣ ಮತ್ತು ಎನ್‌ಎಂಪಿಟಿಯಲ್ಲಿ ಈ ಸೇವೆ 24×7 ಲಭ್ಯವಿದ್ದರೆ, ತಾಲೂಕು ಆಸ್ಪತ್ರೆ, ಪ್ರಾ. ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗಿನಿಂದ ಸಂಜೆ ತನಕ ಲಭ್ಯವಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜೇಶ್‌ ತಿಳಿಸಿದ್ದಾರೆ. ಅಗತ್ಯ ಬಿದ್ದಲ್ಲಿ ರೋಗಿಗಳ ಗಂಟಲ ಸ್ರಾವದ ಮಾದರಿ ತೆಗೆದು ಪರೀಕ್ಷೆಗೆ ಕಳುಹಿಸಿಕೊಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಲ್ಲಿ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಗಂಟಲು ನೋವು ಕಂಡುಬಂದಲ್ಲಿ ಅಥವಾ ಯಾವುದೇ ಮಾಹಿತಿ ಬೇಕಾದಲ್ಲಿ ತತ್‌ಕ್ಷಣ ಸಹಾಯವಾಣಿ ಸಂಖ್ಯೆ 104/ 1077 ಅಥವಾ ದೂ.ಸಂ.: 0824- 2442590 ಅನ್ನು ಸಂಪರ್ಕಿಸಬಹುದು. ಕೊರೊನಾದ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಹತ್ತಿರದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬಹುದು.

ಸಮುದಾಯ ಆರೋಗ್ಯ ಕೇಂದ್ರಗಳು: ಮೂಲ್ಕಿ, ಮೂಡುಬಿದಿರೆ, ಬಂಟ್ವಾಳ ತಾಲೂಕಿನ ಅಂಗಡಿ, ವಿಟ್ಲ; ಪುತ್ತೂರು ತಾಲೂಕಿನ ಕಡಬ, ಉಪ್ಪಿನಂಗಡಿ, ಜಿ.ಎಚ್‌. ಪುತ್ತೂರು ಕೇಂದ್ರಗಳಲ್ಲಿ ಕೊರೊನಾ ತಪಾಸಣೆ ಮಾಡಲಾಗುತ್ತದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು: ಮಂಗಳೂರು ತಾಲೂಕಿನ ಕೋಟೆಕಾರು, ಉಳ್ಳಾಲ, ನಾಟೆಕಲ್‌, ಬೋಳಿಯಾರು, ಅಂಬ್ಲಿಮೊಗರು, ಅಡ್ಯಾರ್‌, ಗಂಜಿಮಠ, ಕುಡುಪು, ಕೊಂಪದವು, ಕುಪ್ಪೆಪದವು, ಬಜಪೆ, ಕಟೀಲು, ಆತೂರ್‌ ಕೆಮ್ರಾಲ್‌, ಕಾಟಿಪಳ್ಳ, ಬೋಂದೆಲ್‌, ಸುರತ್ಕಲ್‌, ಶಿರ್ತಾಡಿ, ಪಾಲಡ್ಕ, ಕಲ್ಲಮುಂಡ್ಕೂರು, ಬೆಳುವಾಯಿ, ನೆಲ್ಲಿಕಾರು, ಬಂಟ್ವಾಳ ತಾಲೂಕಿನ ಮಾಣಿ, ಪುಣಚ, ಪಂಜಿಕಲ್ಲು, ಮಂಚಿ, ಸಜಿಪನಡು, ಪುದು, ಕಲ್ಲಡ್ಕ ಬಾಳ್ತಿಲ, ಕುರ್ನಾಡು, ಪುಂಜಾಲಕಟ್ಟೆ, ದೈವಸ್ಥಳ, ಅಡ್ಯನಡ್ಕ, ಬೆಂಜನಪದವು, ರಾಯಿ, ಕನ್ಯಾನ, ನಾವೂರು, ಪೆರುವಾಯಿ, ಅಳಿಕೆ; ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಣಿಯೂರು, ವೇಣೂರು, ಇಂದಬೆಟ್ಟು, ಅಳದಂಗಡಿ, ಉಜಿರೆ, ನೆರಿಯ, ಹತ್ಯಡ್ಕ, ನಾರಾವಿ, ಪಡಂಗಡಿ, ಕೊಕ್ಕಡ, ಧರ್ಮಸ್ಥಳ; ಪುತ್ತೂರು ತಾಲೂಕಿನ ಕಾಣಿಯೂರು, ಸರ್ವೆ, ಪಾಣಾಜೆ, ನೆಲ್ಯಾಡಿ, ಕೊಯಿಲ, ಕೊಳ್ತಿಗೆ, ಈಶ್ವರಮಂಗಲ, ಶಿರಾಡಿ, ತಿಂಗಳಾಡಿ, ಪಾಲ್ತಾಡಿ; ಅರಂತೋಡು, ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು, ಕೊಲ್ಲಮೊಗ್ರು ಕೇಂದ್ರಗಳಲ್ಲಿ ತಪಾಸಣೆ ಕೇಂದ್ರ ತೆರೆಯಲಾಗಿದೆ.

ತಾಲೂಕು ಆಸ್ಪತ್ರೆಗಳು : ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಆಸ್ಪತ್ರೆಗಳಲ್ಲಿಯೂ ಕೊರೊನಾ ತಪಾಸಣೆಗಾಗಿ ಕೇಂದ್ರ ತೆರೆಯಲಾಗಿದೆ.

ಕೊರೊನಾ ವೈರಸ್‌ ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಜಾಗ್ರತೆ ಇರಲಿ.

ಸಚಿವ ಕೋಟ ಶ್ರೀನಿವಾಸ ಪೂಜಾರಿ
Leave A Reply

Your email address will not be published.