ಕೊಂಬಾರು ಮುಗೇರಡ್ಕ | ಸರಕಾರಿ ಪ್ರಾಥಮಿಕ ಶಾಲಾ ವಠಾರದಲ್ಲಿ ಆನೆ ಹಾಜರಿ

ಕಾಡಾನೆಗಳು ಕೊಂಬಾರು ಮುಗೇರಡ್ಕ ಪ್ರಾಥಮಿಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದ ಗೋಡೆಯನ್ನು ಹಾನಿಗೊಳಿಸಿವೆ.


Ad Widget

ರಾತ್ರಿ ಶಾಲಾ ಆವರಣದ ತಡೆಗೋಡೆಯನ್ನು ಹಾನಿಗೊಳಿಸಿದ ಆನೆಗಳು ಮನಸೋ ಇಚ್ಛೆ ಶಾಲಾ ವಠಾರದಲ್ಲಿ ಬೆಳೆಸಿದ್ದ ತೆಂಗಿನ ಗಿಡಗಳನ್ನು ಮನಬಂದಂತೆ ತುಳಿದು ಹಾಕಿವೆ.

ಕೊಂಬಾರು ಮುಗೇರಡ್ಕ ಪ್ರಾಥಮಿಕ ಹಿರಿಯ ಪ್ರೌಢಶಾಲಾ ವಠಾರದಲ್ಲಿ ನಡೆದಿದ್ದು ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಅರಣ್ಯಾಧಿಕಾರಿ ಗಳಿಂದ ಯಾವುದೇ ಸ್ಪಂದನೆ ಇಲ್ಲಿ ಅಂತ ಶಾಲಾ ಆಡಳಿತ ದೂರಿದೆ.


Ad Widget

ಆದರೆ ಅರಣ್ಯ ಇಲಾಖೆ ತಾವು ಆನೆಯ ಚಲನವನಗಳನ್ನು ಮಾನಿಟರ್ ಮಾಡುತ್ತಿರುವುದಾಗಿ ಹೇಳಿಕೊಂಡಿದೆ.


Ad Widget

ಆನೆಗಳು ಕಡಬ, ಸುಬ್ರಮಣ್ಯ ಗುಂಡ್ಯ, ಉದನೆ ಮುಂತಾದ ಪರಿಸರಗಳಲ್ಲಿ ಕಳೆದ ಕೆಲದಿನಗಳಿಂದ ವಿಪರೀತ ತೊಂದ್ರೆ ಕೊಡುತ್ತಿವೆ. ವರ್ಷಗಳಲ್ಲಿ ಬೆಳೆದ ಬೆಳೆ ನಿಮಿಷಗಳಲ್ಲಿ ಹಾಳಾಗುವುದನ್ನು ತಡೆಯಲು ಅರಣ್ಯ ಇಲಾಖೆ ಶಾಶ್ವತ ಕಾರ್ಯಸೂಚಿ ತೆಗೆದುಕೊಳ್ಳಬೇಕೆಂದು ಜನರ ಒತ್ತಾಯವಾಗಿದೆ.

error: Content is protected !!
Scroll to Top
%d bloggers like this: