Day: March 15, 2020

ಕೊರೋನಾ ಕಟ್ಟೆಚ್ಚರ | ಕರಾವಳಿಯಲ್ಲಿ ಮುನ್ನೆಚ್ಚರಿಕೆ ಘೋಷಣೆ, 80 ಸ್ಥಳಗಳಲ್ಲಿ ತಪಾಸಣಾ ಕೇಂದ್ರ ಸ್ಥಾಪನೆ

ಜಿಲ್ಲೆಯ 6 ಸಮುದಾಯ ಆರೋಗ್ಯ ಕೇಂದ್ರ, 66 ಪ್ರಾಥಮಿಕ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆಗಳಲ್ಲಿ ಕೊರೊನಾ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ವೆನ್ ಲಾಕ್ ಮತ್ತು ಲೇಡಿಗೋಶನ್‌ ಜಿಲ್ಲಾಸ್ಪತ್ರೆಗಳಲ್ಲಿ ಮಾತ್ರವಲ್ಲದೆ, ಅಲ್ಲದೆ ಅಗತ್ಯ ಬಿದ್ದಲ್ಲಿ ಸಮೀಪದ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ರಾಜ್ಯದಲ್ಲಿ ಕೊರೊನಾ ಭೀತಿ ಆವರಿಸಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಎನ್‌ಎಂಪಿಟಿ ಸೇರಿದಂತೆ 80 ಸ್ಥಳಗಳಲ್ಲಿಗಳಲ್ಲಿ ಕೊರೊನಾ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು …

ಕೊರೋನಾ ಕಟ್ಟೆಚ್ಚರ | ಕರಾವಳಿಯಲ್ಲಿ ಮುನ್ನೆಚ್ಚರಿಕೆ ಘೋಷಣೆ, 80 ಸ್ಥಳಗಳಲ್ಲಿ ತಪಾಸಣಾ ಕೇಂದ್ರ ಸ್ಥಾಪನೆ Read More »

ಕೊಂಬಾರು ಮುಗೇರಡ್ಕ | ಸರಕಾರಿ ಪ್ರಾಥಮಿಕ ಶಾಲಾ ವಠಾರದಲ್ಲಿ ಆನೆ ಹಾಜರಿ

ಕಾಡಾನೆಗಳು ಕೊಂಬಾರು ಮುಗೇರಡ್ಕ ಪ್ರಾಥಮಿಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದ ಗೋಡೆಯನ್ನು ಹಾನಿಗೊಳಿಸಿವೆ. ರಾತ್ರಿ ಶಾಲಾ ಆವರಣದ ತಡೆಗೋಡೆಯನ್ನು ಹಾನಿಗೊಳಿಸಿದ ಆನೆಗಳು ಮನಸೋ ಇಚ್ಛೆ ಶಾಲಾ ವಠಾರದಲ್ಲಿ ಬೆಳೆಸಿದ್ದ ತೆಂಗಿನ ಗಿಡಗಳನ್ನು ಮನಬಂದಂತೆ ತುಳಿದು ಹಾಕಿವೆ. ಕೊಂಬಾರು ಮುಗೇರಡ್ಕ ಪ್ರಾಥಮಿಕ ಹಿರಿಯ ಪ್ರೌಢಶಾಲಾ ವಠಾರದಲ್ಲಿ ನಡೆದಿದ್ದು ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಅರಣ್ಯಾಧಿಕಾರಿ ಗಳಿಂದ ಯಾವುದೇ ಸ್ಪಂದನೆ ಇಲ್ಲಿ ಅಂತ ಶಾಲಾ ಆಡಳಿತ ದೂರಿದೆ. ಆದರೆ ಅರಣ್ಯ ಇಲಾಖೆ ತಾವು ಆನೆಯ ಚಲನವನಗಳನ್ನು …

ಕೊಂಬಾರು ಮುಗೇರಡ್ಕ | ಸರಕಾರಿ ಪ್ರಾಥಮಿಕ ಶಾಲಾ ವಠಾರದಲ್ಲಿ ಆನೆ ಹಾಜರಿ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ | ತಲಾ ಇಬ್ಬರಿಗೆ ಸೇವೆ ಮಾಡಿಸಲು ಮಾತ್ರ ಅವಕಾಶ, ಸರ್ಕಾರದ ಆದೇಶ

ಸುಬ್ರಹ್ಮಣ್ಯ, ಮಾ.15: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೊರೊನಾ ಭೀತಿಯಿಂದ ರಾಜ್ಯ ಸರಕಾರ ಮುನ್ನಚ್ಚರಿಕೆಯಾಗಿ ಕೆಲವೊಂದು ನಿರ್ಧಾರಕ್ಕೆ ಬಂದಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತಾಧಿಗಳ ಹಿತದೃಷ್ಟಿಯಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಇತ್ಯಾದಿ ಸೇವೆಗಳಿಗೆ ತಲಾ ಇಬ್ಬರಂತೆ ಮಾತ್ರ ಭಾಗವಹಿಸಲು ಅವಕಾಶವಿದೆ. ಸಾಮಾನ್ಯವಾಗಿ ಇಂತಹ ಪೂಜೆಗಳಿಗೆ ಇಡೀ ಕುಟುಂಬವೇ ಅಲ್ಲಿ ಬಂದು ಕೂರುತ್ತಿತ್ತು. ದೇವಳದ ಕಾರ್ಯನಿರ್ವಾಹಣಾಧಿಕಾರಿ ಅವರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಬೈಲು ಬೈಲುಗಳಲ್ಲಿ, ಮನೆ ಮನೆ ಗಳಲ್ಲಿ ಅನುರಣಿಸುತಿದೆ ಭಜನಾ ಸಂಕೀರ್ತನೆ, ತಾಳದ ಝೇಂಕಾರ |ಸವಣೂರು ಮುಗೇರು ಭಜನ ಮಂಡಳಿಯಿಂದ ನಗರ ಭಜನೆ ಆರಂಭ

ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿ , ಮುಗೇರು, ಸವಣೂರು ವತಿಯಿಂದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯಾಪ್ತಿಯಲ್ಲಿ ನಗರಭಜನೆ ಈ ವರ್ಷದಿಂದ ಆರಂಭವಾಗಿದೆ. 2020 ಮಾರ್ಚ್ 14,ಶನಿವಾರ ಸಂಕ್ರಮಣ ದಂದು ಪ್ರಾರಂಭಗೊಂಡು ದೇವಸ್ಥಾನಕ್ಕೆ ಸಂಬಂದಿಸಿದ ಪ್ರತೀ ಮನೆಗಳಿಗೆ ಭಜನಾ ತಂಡದ 20 ರಿಂದ 25 ಪುರುಷರು , ಮಹಿಳೆಯರು, ಕಿಶೋರ ಕಿಶೋರಿಯರು ತೆರಳಿ ಮನೆಯವರ ಉಪಸ್ಥಿತಿಯಲ್ಲಿ ಭಜನಾ ಸೇವೆಯನ್ನು ನೆರವೇರಿಸಿ ಮುಂದಿನ ಮನೆಗಳಿಗೆ ತೆರಳುತ್ತಾರೆ. ದಿನದಲ್ಲಿ 15 ರಿಂದ 20 ಮನೆಗಳಲ್ಲಿ ಭಜನಾ ಸೇವೆಯನ್ನು ಪೂರೈಸುತ್ತಾರೆ. …

ಬೈಲು ಬೈಲುಗಳಲ್ಲಿ, ಮನೆ ಮನೆ ಗಳಲ್ಲಿ ಅನುರಣಿಸುತಿದೆ ಭಜನಾ ಸಂಕೀರ್ತನೆ, ತಾಳದ ಝೇಂಕಾರ |ಸವಣೂರು ಮುಗೇರು ಭಜನ ಮಂಡಳಿಯಿಂದ ನಗರ ಭಜನೆ ಆರಂಭ Read More »

ಕುಕ್ಕೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿಗೆ ಶೌಚಾಲಯದ ನೀರು | ಸ್ನಾನ ಮಾಡಿದ ಭಕ್ತ ಪರಿಶುದ್ಧ !

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ  ಆ ಬದಿಗೆ ಇರುವುದೇ ಆದಿ ಸುಬ್ರಹ್ಮಣ್ಯ ದೇವಸ್ಥಾನ. ಆದಿ ಸುಬ್ರಹ್ಮಣ್ಯ ದೇವಸ್ಥಾನ ಮೂಲತ: ಆದಿಶೇಷನ ಆವಾಸಸ್ಥಾನ. ಅಲ್ಲಿ ಇರುವ ಹುತ್ತಗಳಿಗೆ ನಾಗ ಪೂಜೆ ನಡೆಯುತ್ತದೆ. ಆದಿ ಸುಬ್ರಹ್ಮಣ್ಯದ ದೇವಸ್ಥಾನದ ಹಿಂದೆ ಇರುವ ಸಣ್ಣ ತೊರೆಯಂತಹ ನೀರಿನ ಹರಿವೇ ದರ್ಪಣತೀರ್ಥ. ದರ್ಪಣತೀರ್ಥವು ಸುತ್ತಮುತ್ತ ನಡೆಯುತ್ತಿರುವ ಕಲುಷಿತಗಳ ನಡುವೆಯೂ ಸಾಕಷ್ಟು ಶುದ್ಧತೆಯನ್ನು ಇವತ್ತಿಗೂ ಮೈಗೂಡಿಸಿಕೊಂಡು ಹರಿಯುತ್ತಿದೆ. ಈಗ ಬೇಸಗೆ ಆದ್ದರಿಂದ ಹರಿವು ಕ್ಷೀಣಿಸಿದೆ. ಈಗ ಪಕ್ಕದಲ್ಲೇ ಇರುವ ಶೌಚಾಲಯದ ನೀರು ಓವರ್ ಫ್ಲೋ ಆಗಿ …

ಕುಕ್ಕೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿಗೆ ಶೌಚಾಲಯದ ನೀರು | ಸ್ನಾನ ಮಾಡಿದ ಭಕ್ತ ಪರಿಶುದ್ಧ ! Read More »

ಮಂಗಳೂರು : ‘ ರಾಮ್ ಸೇನಾ’ ಕರ್ನಾಟಕ ರಾಜ್ಯ ಮಟ್ಟದ ಪದಾಧಿಕಾರಿಗಳ ಬೈಠಕ್

ಸಮಾಜದಲ್ಲಿ ಪ್ರೀತಿ ವಿಶ್ವಾಸ ಗಳಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟಗಳಿಗೆ ಸ್ಪಂದಿಸುವ ಕೆಲಸಗಳು ಸಂಘಟನೆಗಳಿಂದಾಗಬೇಕಿದೆ. -ಪ್ರಸಾದ್ ಅತ್ತಾವರ್. ಮಂಗಳೂರು : ರಾಮ್ ಸೇನಾ ಕರ್ನಾಟಕ (ರಿ) ಇದರ ರಾಜ್ಯಮಟ್ಟದ ಪದಾಧಿಕಾರಿಗಳ ಬೈಠಕ್ ಮಂಗಳೂರು ಉರ್ವ ಸ್ಟೋರ್ ನ ತುಳು ಭವನದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿದ ಸಂಘಟನೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಅತ್ತಾವರ ಸಂಘಟನೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತರಾದ ಮೋಹನ್ ಬೆಳ್ಳೂರುರವರು ದೇಶಾದ್ಯಂತ ಇಂದು ಹತ್ತಾರು ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ನೋವಿಗೆ ಸ್ಪಂದಿಸುವ …

ಮಂಗಳೂರು : ‘ ರಾಮ್ ಸೇನಾ’ ಕರ್ನಾಟಕ ರಾಜ್ಯ ಮಟ್ಟದ ಪದಾಧಿಕಾರಿಗಳ ಬೈಠಕ್ Read More »

error: Content is protected !!
Scroll to Top