ಪುತ್ತೂರು | ಬ್ಯಾರಿಕೇಡ್‌ಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಕೈಕಾರದ ಸಂಜೀವ ರೈ ಐಂಬಾಗಿಲು ಮೃತ್ಯು

ಪುತ್ತೂರು: ಅಪಘಾತಗಳು ತಪ್ಪಿಸಲೆಂದು ರಸ್ತೆಯಲ್ಲಿ ಅಲ್ಲಲ್ಲಿ ಬ್ಯಾರಿಕೇಡನ್ನು ಇಡುತಿದ್ದು ,ಇದೇ ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ. ಇದೇ ರೀತಿ ಪುತ್ತೂರು ಮುಕ್ರಂಪಾಡಿಯಲ್ಲಿ ಬ್ಯಾರಿಕೇಡ್‌ಗೆ ಬೈಕ್ ಡಿಕ್ಕಿ ಯಾಗಿ ವ್ಯಕ್ತಿಯೊಬ್ಬರು ಜೀವ ಕಳೆದುಕೊಂಡಿದ್ದಾರೆ.

ಮಾಣಿ ಮೈಸೂರು ಹೆದ್ದಾರಿಯ ಪುತ್ತೂರಿನ ಮುಕ್ರುಂಪಾಡಿ ಎಂಬಲ್ಲಿ ಮಾ.12ರಂದು ಬ್ಯಾರಿಕೇಡಿಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಪುತ್ತೂರು ತಾಲೂಕಿನ ಕೈಕಾರ ದ ಸಂಜೀವ ರೈ ಐಂಬಾಗಿಲು ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ನಿಧನರಾದರು.

ಪುತ್ತೂರಿನ ಆದರ್ಶ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ ಇವರು, ಕೈಕಾರ ದಲ್ಲಿ ಮಾ.14ರಂದು ನಡೆಯಲಿದ್ದ ಶ್ರೀನಿವಾಸ ಕಲ್ಯಾಣೋತ್ಸವದ ಸಿದ್ದತೆಯಲ್ಲಿದ್ದರು.

ಮಾ.12ರಂದು ಸಂಜೀವ ರೈ ಅವರು ಕಾರ್ಯ ನಿಮಿತ್ತ ಕೈಕಾರದಿಂದ ಪುತ್ತೂರಿಗೆ ಬೈಕ್ ನಲ್ಲಿ ಹೊರಟಿದ್ದರು. ಮುಕ್ರಂಪಾಡಿಯಲ್ಲಿ ಬ್ಯಾರಿಕೇಡಿಗೆ ಇವರ ಬೈಕ್ ಡಿಕ್ಕಿಯಾಗಿದೆ.ಡಿಕ್ಕಿ ಪರಿಣಾಮ ರಸ್ತೆಗೆ ಇವರ ಮುಖ ಬಡಿದ ಪರಿಣಾಮ ಗಂಭೀರ ಗಾಯಗೊಂಡರು.

ಕೂಡಲೇ ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೊಗಲಾಗಿದ್ದು, ಅಲ್ಲಿಂದ ಮಂಗಳೂರು ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾ.13ರಂದು ನಿಧನರಾದರು.

ಅವರು ಕೈಕಾರದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಮತ್ತಿತರ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಗಿಸಿಕೊಂಡಿದ್ದರು. ನಾಳೆ ಮಾ.14ರಂದು ಕೈಕಾರದಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಕೋಶಾಧಿಕಾರಿಯಾಗಿ ಅವರು ಕಾರ್ಯ ನಿರತರಾಗಿದ್ದರು.

ಎಂದೂ ನಿಧಾನವಾಗಿ ವಾಹನ ಚಲಾಯಿಸುವ ಇವರ ಸಾವು ಅವರ ಅಪಾರ ಗೆಳೆಯರ ಮತ್ತು ಸಂಬಂಧಿಕರಲ್ಲಿ ತಲ್ಲಣ ಮೂಡಿಸಿದೆ.ಸಂಜೀವ ರೈ ಅವರು ಒಳಮೊಗ್ರು ಗ್ರಾಮದಲ್ಲಿ ಬಿಜೆಪಿಯ ಹಾಗೂ ಸಂಘಟನೆಯ ಆರಂಭದ ಪ್ರಮುಖರಲ್ಲಿ ಒಬ್ಬರಾಗಿದ್ದರು.

Leave A Reply

Your email address will not be published.