Breaking news: ಕೋರೋನಾ ವೈರಸ್ ಗೆ ಭಾರತದ ಮೊದಲ ಬಲಿ : ಆತ ಕರ್ನಾಟಕದವರು !!

ಕೋರೋನಾ ವೈರಸ್ ಕರ್ನಾಟಕದಲ್ಲಿ ಅಷ್ಟೇ ಏಕೆ, ಭಾರತದಲ್ಲಿಯೇ ಮೊದಲ ಬಲಿಯನ್ನು ಪಡಕೊಂಡು ಒಂದು ಕ್ರೂರ ನಗೆ ಬೀರಿದೆ.

ನಿನ್ನೆ ತೀರಿಕೊಂಡ ಕಲಬುರಗಿ ನಿವಾಸಿ 75 ವರ್ಷದ ಮಹಮ್ಮದ್ ಸಿದ್ದೀಕಿ ಅವರು ಕೋರೋನಾ ವೈರಸ್ ನಿಂದಲೇ ಸತ್ತದ್ದು ಎಂದು ಈಗ ಖಚಿತವಾಗಿದೆ. ಆತನ ಕಫ ಮತ್ತು ರಕ್ತದ ಮಾದರಿಯ ಲ್ಯಾಬ್ ರಿಪೋರ್ಟ್ ಈಗ ವೈದ್ಯರ ಕೈಸೇರಿದ್ದು ಅವರು ಕೋರೋನಾ ವೈರಸ್ ನಿಂದಲೇ ತೀರಿಕೊಂಡದ್ದು ಎಂದು ಖಚಿತವಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಚಿವ ಶ್ರೀರಾಮುಲು, ವೃದ್ಧ ಸಿದ್ದಿಕ್ ಸಾವನ್ನಪ್ಪಿದ್ದು ಕಾರಣದಿಂದಲೇ ಎಂದು ಹೇಳಿದ್ದಾರೆ.

ಸಚಿವ ಶ್ರೀರಾಮುಲು ಮಾಡಿದ ಟ್ವೀಟ್

The 76 year old man from Kalburgi who passed away & was a suspected #COVID19 patient has been Confirmed for #COVID19. The necessary contact tracing, isolation & other measures as per protocol are being carried it

ಅವರು ಕೆಲ ದಿನಗಳ ಹಿಂದೆ ಸೌದಿ ಅರೇಬಿಯಾದಿಂದ ಆಗಮಿಸಿದ್ದರು. ಇವರಲ್ಲಿ ಶಂಕಿತ ಕೊರೋನಾ ವೈರಸ್ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ವಿಮಾನ ನಿಲ್ದಾಣದಿಂದಲೇ ನೇರವಾಗಿ  ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲಕಾಲ ಕಲಬುರ್ಗಿಯ ಆಸ್ಪತ್ರೆಯಲ್ಲಿಯೂ ಅವರು ಚಿಕಿತ್ಸೆ ಪಡೆದಿದ್ದರು.

ನಿನ್ನೆ, ಬುಧವಾರದಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅವರು 75 ವರ್ಷದ ವ್ಯಕ್ತಿಯಾಗಿದ್ದು ವಯೋ ಸಹಜ ಕಾರಣದಿಂದ ಮರಣ ಹೊಂದಿರುವ ಸಾಧ್ಯತೆಯೂ ಇದೆ ಎಂದು ನಂಬಲಾಗಿತ್ತು. ಆದರೂ ಜಿಲ್ಲಾಡಳಿತ ಆತನ ಶವ ಸಂಸ್ಕಾರದ ವೇಳೆ ಎಲ್ಲಾ ಮುನ್ನೆಚ್ಚರಿಕೆ ವಹಿಸಿತ್ತು.

ಈಗ ಕೋರೋನಾ ವೈರಸ್ ( ಕೋವಿದ್ 19) ವ್ಯಾಧಿಗೆ ಮೊದಲ ಬಲಿ ನೀಡುವ ಮೂಲಕ, ಜಿಲ್ಲಾಡಳಿತವು ತೀರಿಕೊಂಡ ವ್ಯಕ್ತಿ ಸಂಪರ್ಕಕ್ಕೆ ಬಂದ ಎಲ್ಲಾ ಸಂಭವನೀಯ ಜನರ ಪಟ್ಟಿ ಸಿದ್ದಗೊಳಿಸಿಕೊಂಡು ಕೂಂಬಿಂಗ್ ಆಪರೇಶನ್ ಶುರುವಿಟ್ಟಿದೆ. ಅವರ ಕುಟುಂಬಸ್ಥರು ಸೇರಿ, ವೃದ್ಧ ನಿರಂತರ ಸಂಪರ್ಕದಲ್ಲಿದ್ದ ಒಟ್ಟು 43 ಜನರನ್ನು ಆರೋಗ್ಯ ತಪಾಸಣೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಿದೆ.

Leave A Reply

Your email address will not be published.