ವಿವೇಕ ಯುವ ಪ್ರಶಸ್ತಿಗೆ ಕಾವು ಮದ್ಲ ಭಾಸ್ಕರ ಬಲ್ಯಾಯ ಆಯ್ಕೆ

ಸವಣೂರು: ಪಾಲ್ತಾಡಿಯ ವಿವೇಕಾನಂದ ಯುವಕ ಮಂಡಲ (ರಿ.) ಮಂಜುನಾಥನಗರ ಮತ್ತು ಶ್ರೀ ಗೌರಿ ಯುವತಿ ಮಂಡಲ (ರಿ.) ಮಂಜುನಾಥನಗರ ಇವುಗಳ ಆಶ್ರಯದಲ್ಲಿ ಕೊಡಮಾಡುವ ಈ ಬಾರಿಯ ಪ್ರತಿಷ್ಠಿತ _”ವಿವೇಕ ಯುವ ಪ್ರಶಸ್ತಿ”_ ಗೆ ಕಾವು ನನ್ಯ ತುಡರ್ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ ಆಯ್ಕೆ ಯಾಗಿದ್ದಾರೆ.

ಭಾಸ್ಕರ ಬಲ್ಯಾಯರವರು ಕಾವಿನ ಮದ್ಲ ನಿವಾಸಿಯಾಗಿದ್ದು 2011 ರಿಂದ 2016 ರ ವರೆಗೆ ತುಡರ್ ಯುವಕ ಮಂಡಲ (ರಿ.) ನನ್ಯ ಕಾವು ಇದರ ಅಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕೆಲಸವನ್ನು ಮಾಡಿರುತ್ತಾರೆ. ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಯುವಕ ಮಂಡಲವನ್ನು ಸಂಘಟನಾತ್ಮಕವಾಗಿ ಬೆಳೆಸಿರುವುದು ಮಾತ್ರವಲ್ಲದೆ ಧಾರ್ಮಿಕವಾಗಿ ಯುವಕರು ಬೆಳೆಯಬೇಕೆಂಬ ಉದ್ದೇಶದಿಂದ ಊರಿನ ಹಿರಿಯರ ಮಾರ್ಗದರ್ಶನದಲ್ಲಿ “ತುಡರ್ ಭಜನಾ ಸಂಘ”ವನ್ನು ಸ್ಥಾಪಿಸಿದರು, ಕಲೆ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ “ಯಕ್ಷಗಾನ ಕಲಾ ಸಂಘದ” ಆರಂಭ ಹಾಗೂ ತಂಡದ ಸದಸ್ಯರಿಗೆ / ತನ್ನ ಊರಿನ ಜನರಿಗೆ ತುರ್ತು ಸಂದರ್ಭದಲ್ಲಿ ಆರ್ಥಿಕ ಅಡಚಣೆಗಳನ್ನು ಪರಿಹರಿಸಲು “ತುಡರ್ ತುರ್ತು ಪರಿಹಾರ ನಿಧಿ”ಯ ಸ್ಥಾಪನೆಯನ್ನು ಮಾಡುವ ಮೂಲಕ ಯುವಕ ಮಂಡಲವನ್ನು ಸಾಮಾಜಿಕವಾಗಿ ಬೆಳೆಸಿದ ಕೀರ್ತಿ ಶ್ರೀಯುತರದ್ದು.

ಕಾವು ಪರಿಸರದಲ್ಲಿ ಆಧುನಿಕ ಮಾದರಿಯ ಬಸ್ಸು ತಂಗುದಾಣ ನಿರ್ಮಾಣ ಮಾಡುವುದರ ಜೊತೆಗೆ ತನ್ನ ಅಧಿಕಾರ ಅವಧಿಯಲ್ಲಿ ಸುಮಾರು 300 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಯುವಕ ಮಂಡಲವನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಇವರ 3 ವರ್ಷದ ಅಧಿಕಾರಾವಧಿಯಲ್ಲಿ ಯುವಕ ಮಂಡಲವನ್ನು ಜಿಲ್ಲಾ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೀಯುತರಿಗೆ ನೆಹರೂ ಯುವ ಕೇಂದ್ರದಿಂದ ಜಿಲ್ಲಾ ಯುವ ಪ್ರಶಸ್ತಿ ಹಾಗೂ 2016 ರಲ್ಲಿ ಸವಣೂರು ಯುವಕ ಮಂಡಲದಿಂದ ಶ್ರವಣ ಕೀರ್ತಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಪುತ್ತೂರು ತಾಲ್ಲೂಕು ಯುವಜನ ಒಕ್ಕೂಟ ಕೊಡಮಾಡುವ ತಾಲೂಕು ಯುವ ಪ್ರಶಸ್ತಿಯನ್ನು ಪಡೆದಿರುತ್ತಾರೆ.

Leave A Reply

Your email address will not be published.