ಶಬರಿಮಲೆ ಅಯ್ಯಪ್ಪ ದೇಗುಲಕ್ಕೂ ತಟ್ಟಿದೆ ಕೊರೋನಾ ವೈರಸ್ ಭಯ

ವಿಶ್ವವನ್ನೇ ತಲ್ಲಣಗೊಳಿಸಿ ಜಗತ್ತಿನ ಸಕಲ ವಹಿವಾಟಿನ ಮೇಲೆ ಬಲವಾದ ಏಟನ್ನು ಕೊಡುತ್ತಿರು ಕೊರೋನಾ ವೈರಸ್ ಶಬರಿಗಿರಿ ವಾಸಿ ಅಯ್ಯಪ್ಪಸ್ವಾಮಿ ದೇಗುಲಕ್ಕೂ ತಟ್ಟಿದೆ. ಕೇರಳದಲ್ಲಿ ಕೊರೋನಾ ವೈರಸ್ ಹಬ್ಬುವ ಭೀತಿಯಿಂದ ಅಯ್ಯಪ್ಪಸ್ವಾಮಿ ದೇವಸ್ವ೦ ಭಕ್ತಾದಿಗಳಲ್ಲಿ ಈ ಮನವಿಯನ್ನು ಮಾಡಿದೆ.

ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 62 ಆಗಿದ್ದರೆ ಅವರಲ್ಲಿ 17 ಮಂದಿ ಕೇರಳದ ಪ್ರಕರಣವೇ ದಾಖಲಾಗಿದೆ. ಹಾಗಾಗಿ ಮುಂಜಾಗ್ರತೆಯಾಗಿ ಕೇರಳ ಸರಕಾರ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿದೆ. ಮತ್ತೊಂದೆಡೆ ಸಭೆ ಸಮಾರಂಭಗಳಿಗೆ ಅವಕಾಶವನ್ನು ನಿರಾಕರಿಸಲಾಗುತ್ತಿದೆ. ಸಿನಿಮಾ ಮತ್ತು ಪ್ರವಾಸಿ ತಾಣಗಳು ಬಂದ್ ಆಗುವ ಎಲ್ಲ ಲಕ್ಷಣ ಇದೆ. ದೇಶಾದ್ಯಂತ ಮಾಲ್ ಗಳಿಗೆ ಎಗರೆಗರಿ ಬೀಳುತಿದ್ದ ಜನ ತಣ್ಣಗೆ ಮುಖ ಮುಚ್ಚಿಕೊಂಡು ಮನೆಯಲ್ಲೇ ಕೂತಿದ್ದಾರೆ. ದೂರದೂರಿಗೆ ಹೋಗುವ ಬಸ್ಸು ರೈಲುಗಳು ಜನರಿಲ್ಲದೆ ಕೆಲವು ಟ್ರಿಪ್ ಗಾಲೆ ಖಾಲಿಯಾಗುತ್ತಿವೆ. ಇದು ಕೇರಳ ಮಾತ್ರವಲ್ಲ ದೇಶಾದ್ಯಂತ ಕಂಡುಬರುವ ಪರಿಸ್ಥಿತಿ.

ಮುಂಬರು ಮಾರ್ಚ್ 14 ರಿಂದ 19 ರವರೆಗೆ ಶಬರಿಮಲೆಯಲ್ಲಿ ತಿಂಗಳ ಪೂಜಾ ಕಾರ್ಯಕ್ರಮ ಇದೆ ಅಲ್ಲದೆಅಪ್ರಿಲ್ 10 ರಿಂದ 14 ರವರೆಗೆ ಅಲ್ಲಿ ವಿಷು ಮಹೋತ್ಸವ ನಡೆಯಲಿದೆ. ಆ ಸಮಯದಲ್ಲಿ ಲಕ್ಷಾಂತರ ಹರಿದು ಬರುವ ಜನರ ಮತ್ತು ಶಬರಿಗಿರಿಯ ಜನರ ಆರೋಗ್ಯದ ದೃಷ್ಟಿಯಿಂದ ದೇವಸ್ವo ಆಡಳಿತ ಮಂಡಳಿಯ ಅಧ್ಯಕ್ಷ ಎನ್ ವಾಸು ಅವರು ಅಯ್ಯಪ್ಪ ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಭಾರತದಲ್ಲಿ ಕೊರೋನಾ ಅಪ್ಡೇಟ್ :

ಒಟ್ಟು ಸೋಂಕಿತರು : 60 ಪ್ರಕರಣ
ಕೇರಳ : 17
ರಾಜಸ್ಥಾನ್ : 17
ಉತ್ತರಪ್ರದೇಶ : 8
ಮಹಾರಾಷ್ಟ್ರ : 5
ದೆಹಲಿ : 4
ಕರ್ನಾಟಕ : 4
ಲಡಾಕ್ : 2
ಜಮ್ಮು : 1
ತಮಿಳು ನಾಡು : 1
ತೆಲಂಗಾಣ : 1

Leave A Reply

Your email address will not be published.