ಎಸ್ ಬಿಐ ನ ಎಲ್ಲಾ ಉಳಿತಾಯ ಖಾತೆಗಳು ಇನ್ನೂ ಮುಂದೆ ಝೀರೋ ಬ್ಯಾಲೆನ್ಸ್ ಖಾತೆಗಳು

ಕೋರೋನಾ ವ್ಯಾಧಿ ಮತ್ತು ಯೆಸ್ ಬ್ಯಾಂಕ್ ನ ಹಗರಣದಿಂದ ಭಾರತೀಯ ಶೇರುಪೇಟೆ ತಲ್ಲಣಗೊಂಡ ಈ ಸಂದರ್ಭದಲ್ಲಿ ಭಾರತದ ಬಹುದೊಡ್ಡ ಬ್ಯಾಂಕ್ ಆದ ಎಸ್ ಬಿಐ ತನ್ನ ಗ್ರಾಹಕರಿಗೆ ಶುಭ ಸುದ್ದಿಯೊಂದನ್ನು ನೀಡಿದೆ.

ಎಸ್ ಬಿಐ ಗ್ರಾಹಕರುಗಳು ಇನ್ನು ಮುಂದೆ ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳುವ ಅಗತ್ಯ ಇಲ್ಲ. ತಕ್ಷಣದಿಂದ ಜಾರಿಗೊಳಿಸಿದಂತೆ, ಎಸ್ ಬಿಐ ನ ಎಲ್ಲಾ ಉಳಿತಾಯ ಖಾತೆಗಳು ಝೀರೋ ಬ್ಯಾಲೆನ್ಸ್ ಖಾತೆಗಳಾಗಿ ಪರಿವರ್ತನೆಗೊಳ್ಳಲಿದೆ. ಇದಲ್ಲದೆ ಮಾಸಿಕ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯ ಇನ್ನು ಮುಂದೆ ಇರುವುದಿಲ್ಲ.

ಇಲ್ಲಿಯತನಕ ಮಹಾನಗರಗಳಲ್ಲಿ ಉಳಿತಾಯ ಖಾತೆಯಲ್ಲಿ  3000 ರೂ, ಪಟ್ಟಣಗಳಲ್ಲಿ  2000 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 1000 ರೂ. ರೂಪಾಯಿಗಳ ಕನಿಷ್ಠ ಮೊತ್ತವನ್ನು ಬಿಡಬೇಕಾಗಿತ್ತು. ಇಲ್ಲದೆ ಹೋದರೆ ಅಂತಹ ಖಾತೆಗಳಿಗೆ ಸಣ್ಣ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿತ್ತು.

ಆದರೆ ಇಲ್ಲಿಯತನಕ ಉಳಿತಾಯ ಖಾತೆಗಳಿಗೆ ಇದ್ದ 3.25 % ಬಡ್ಡಿದರವನ್ನು ಕಡಿತಗೊಳಿಸಿ ಉಳಿತಾಯ ಕತೆಗಳಿಗೆ 3 % ಬಡ್ಡಿದರವೆಂದು ನಿಗದಿ ಮಾಡಿದೆ ಎಸ್ ಬಿ ಐ. ಒಂದಿಷ್ಟು ಬಡ್ಡಿ ಕಡಿಮೆಯಾದರೂ ಸರಿ, ನಮಗೆ ಬೇಕಾದಾಗ, ಅಗತ್ಯಬಿದ್ದರೆ ಪೂರ್ತಿ ಹಣ ತೆಗೆಯುವ ಅವಕಾಶ ಕಲ್ಪಿಸಿದ್ದಕ್ಕೆ 44.5 ಕೋಟಿ ಎಸ್ ಬಿ ಐ ನ ಗ್ರಾಹಕರು ಖುಷಿ ಪಡುತ್ತಿದ್ದಾರೆ.

Leave A Reply

Your email address will not be published.