ದಕ್ಷಿಣ ಕನ್ನಡದ ಎಕೈಕ ಮೃತ್ಯುಂಜಯೇಶ್ವರ ದೇವಸ್ಥಾನ : ನರಿಮೊಗರುವಿನಲ್ಲಿ ವರ್ಷಾವಧಿ ಜಾತ್ರೆ ಮಾ.15 – ಮಾ.16

ದಕ್ಷಿಣ ಕನ್ನಡ ಜಿಲ್ಲೆಯ ಎಕೈಕ ಮೃತ್ಯುಂಜಯೇಶ್ವರ ದೇವಸ್ಥಾನ ನರಿಮೊಗರುನಲ್ಲಿ ವರ್ಷಾವಧಿ ಜಾತ್ರೆಯು ದಿನಾಂಕ 15-03-2020 ರಿಂದ 16-03-2020 ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜರಗಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾದ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಳೆದ 9ನೇ ತಾರೀಕಿನಂದು ಗೊನೆ ಮೂಹೂರ್ತ ನಡೆದಿದ್ದು, ದಿನಾಂಕ 13-03-2020ರಂದು ಶ್ರೀ ದೇವರಿಗೆ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ, ದಿನಾಂಕ 15 ರಂದು ಅದಿತ್ಯವಾರ ಬೆಳಗ್ಗೆ 8-00ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ಥಿ ಪುಣ್ಯಹವಾಚನ, ಶ್ರೀ ಮಹಾಗಣಪತಿ ಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ, ಹಾಗೂ ಬೆಳಗ್ಗೆ 11-30 ಕ್ಕೆ ಶ್ರೀ ಮಹಾಮೃತ್ಯುಂಜಯ ಹೋಮದ ಪೂರ್ಣಾಹುತಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಜಾತ್ರೋತ್ಸವ ಸಮಿತಿ ಅದ್ಯಕ್ಷರಾದ ಕೆ.ಸುಂದರ ಗೌಡ ನಡುಬೈಲು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೀತಾರಾಮ ಗೌಡ, ಮತ್ತು ಜಯಾನಂದ ಆಳ್ವ ಉಪಸ್ಥಿತರಿದ್ದರು.

ಚೀನಾದಿಂದ ಕಡಬಕ್ಕೆ ಬಂದ ವ್ಯಕ್ತಿ । ಜನರ ಆತಂಕ ಯಾರಿಗೆ ಹೇಳಲಿ

Leave A Reply

Your email address will not be published.