Day: March 10, 2020

ಕುಂಡಡ್ಕ | ಕೊರಗಜ್ಜ ಸಾನಿಧ್ಯದಲ್ಲಿ ಶ್ರಮದಾನ

ಸುಳ್ಯ : ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಮೊಗೇರ ದೈವ,ಕೊರಗಜ್ಜ ಸಾನಿಧ್ಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಮುಕ್ಕೂರು- ಪೆರುವಾಜೆ ಮೊಗೇರ ಗ್ರಾಮ ಸಮಿತಿ ಮತ್ತು ಸ್ಥಳೀಯರ ವತಿಯಿಂದ ಕರಸೇವೆ ನಡೆಯಿತು.

ಕೊಯಿಲ ಗ್ರಾ.ಪಂ. | ಅಲ್ಪಸಂಖ್ಯಾತ ಕಾಲೋನಿಗೆ ಮಂಜೂರಾದ ಅನುದಾನ ನಿಗದಿತ ಜಾಗದಿಂದ ಬೇರೆಡೆ ಬಳಕೆ ಆರೋಪ ನಿರಾಧಾರ, ದುರುದ್ದೇಶ ಪೂರಿತ- ಹೇಮಾ ಮೋಹನದಾಸ್ ಶೆಟ್ಟಿ

ಕಡಬ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕೊೈಲ ಗ್ರಾಮದ ಆತೂರು ಬೈಲು ಹಾಗೂ ಕೆಮ್ಮಾರ – ಬಡಿಲ ರಸ್ತೆ ಅಭಿವೃದ್ದಿಗೆ ಮಂಜೂರಾದ ಅನುದಾನವನ್ನು ನಿಗದಿತ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಿ ಅಭಿವೃದ್ಧಿ ಮಾಡಲಾಗಿದೆ ಎಂದು ಕೊೈಲ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎ.ಸುಲೈಮಾನ್ ಅವರ ಅರೋಪ ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಸ್ಥಳಿಯರ ಬೇಡಿಕೆಯಿದ್ದ ಸ್ಥಳದಲ್ಲಿ ರಸ್ತೆಗೆ ಕಾಂಕ್ರಿಟಕರಣ ಮಾಡಲಾಗಿದೆ. ಈ ಬಗ್ಗೆ ಯಾವೂದೆ ತನಿಖೆಗೂ ಸಿದ್ದ ಎಂದು ಕೊೈಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಮೋಹನದಾಸ್ ಶೆಟ್ಟಿ ಹೇಳಿದರು. ಕೊೈಲ …

ಕೊಯಿಲ ಗ್ರಾ.ಪಂ. | ಅಲ್ಪಸಂಖ್ಯಾತ ಕಾಲೋನಿಗೆ ಮಂಜೂರಾದ ಅನುದಾನ ನಿಗದಿತ ಜಾಗದಿಂದ ಬೇರೆಡೆ ಬಳಕೆ ಆರೋಪ ನಿರಾಧಾರ, ದುರುದ್ದೇಶ ಪೂರಿತ- ಹೇಮಾ ಮೋಹನದಾಸ್ ಶೆಟ್ಟಿ Read More »

ಬೆಂಗಳೂರಿನ ವೈಟ್ ಫೀಲ್ಡ್ | ಕೋರೋನಾ ವೈರಸ್ ಭಾದಿತ ವಾಸವಿದ್ದ 8 ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟೆಚ್ಚರ ಘೋಷಣೆ

ಬೆಂಗಳೂರು/ ಮಾ.10 : ಬೆಂಗಳೂರಿನ ಕೋರೋನಾ ವೈರಸ್ ಭಾದಿತ ವಾಸವಿದ್ದ ವೈಟ್ ಫೀಲ್ಡ್ ನ 8 ಕಿ. ಮೀ. ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮಹಾಮಾರಿಯಾಗಿ ಹಬ್ಬುತ್ತಿರುವ ಕೋರೋನಾ ವೈರಸ್ ನಿಂದ ಸೋಂಕಿಗೆ ಒಳಗಾದ ವ್ಯಕ್ತಿ ವೈಟ್ ಫೀಲ್ಡ್ ಪ್ರದೇಶದಲ್ಲಿ ವಾಸವಾಗಿದ್ದ ಕಾರಣ ವೈಟ್ ಫೀಲ್ಡ್ ನ ಎಂಟು ಕಿಲೋಮೀಟರ್ ವಿಸ್ತೀರ್ಣವನ್ನು ಹೈ ಅಲರ್ಟ್ ಪ್ರದೇಶ ಎಂದು ಘೋಷಿಸಲಾಗಿದೆ. ಅಲ್ಲದೆ ವ್ಯಕ್ತಿ ವಾಸವಿದ್ದ ಮೂರು ಕಿಲೋಮೀಟರ್ ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ. ಕೋರೋನಾ ವೈರಸ್ ಗಾಳಿಯ …

ಬೆಂಗಳೂರಿನ ವೈಟ್ ಫೀಲ್ಡ್ | ಕೋರೋನಾ ವೈರಸ್ ಭಾದಿತ ವಾಸವಿದ್ದ 8 ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟೆಚ್ಚರ ಘೋಷಣೆ Read More »

ಶಾಲೆಗೆ ತೆರಳದೆ ಮನೆಯಲ್ಲಿದ್ದ ಮಕ್ಕಳನ್ನು ಮನವೊಲಿಸಿ ಶಾಲೆಗೆ ಹೋಗುವಂತೆ ಮಾಡಿದ ಚಾರ್ವಾಕ ಬೀಟ್ ಪೊಲೀಸ್

ಶಾಲೆಗೆ ತೆರಳದೇ ಮನೆಯಲ್ಲಿ ಉಳಿದುಕೊಂಡಿದ್ದ ಮೂವರು ವಿದ್ಯಾರ್ಥಿಗಳ ಮನವೊಲಿಸಿ ಪುನಃ ಶಾಲೆಗೆಸೇರಿಸುವಲ್ಲಿ ಕಡಬ ಪೊಲಿಸ್ ಠಾಣಾ ವ್ಯಾಪ್ತಿಯ ಚಾರ್ವಾಕ ಬೀಟ್ ಪೊಲೀಸ್ ಭವಿತ್‌ರಾಜ್ ಯಶಸ್ವಿ ಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಚಾರ್ವಾಕ ಶಾಲೆ ಇಲ್ಲಿನ ಮುಖ್ಯಗುರುಗಳಾದ ಪಾರ್ವತಿ ಅವರು ನೀಡಿದ ಮಾಹಿತಿಯಂತೆ ಶಾಲೆಗೆ ಹೋಗದಂತಹ ಮಕ್ಕಳಾದ ಸುಶ್ಮಿತಾ,ಪ್ರಮೋದ್, ಸುಜಿತ್ ಅವರ ಮನೆಗೆ ತೆರಳಿ ಶಾಲೆಗೆ ಹೋಗುವಂತೆ ಪೋಷಕರು ಹಾಗೂ ಮಕ್ಕಳಿಗೆ ತಿಳಿ ಹೇಳಲಾಯಿತು. ಮಕ್ಕಳು ಶಾಲೆಗೆ ಹೋಗುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಮುಖ್ಯಗುರುಗಳಾದ …

ಶಾಲೆಗೆ ತೆರಳದೆ ಮನೆಯಲ್ಲಿದ್ದ ಮಕ್ಕಳನ್ನು ಮನವೊಲಿಸಿ ಶಾಲೆಗೆ ಹೋಗುವಂತೆ ಮಾಡಿದ ಚಾರ್ವಾಕ ಬೀಟ್ ಪೊಲೀಸ್ Read More »

ಜನವಸತಿ ಪ್ರದೇಶದಲ್ಲಿ ತೆರೆದ ಮರಣ ಬಾವಿ..! | ಮೂರು ವರ್ಷದಿಂದ ಭಯದಲ್ಲೇ ಕಾಲ ಕಳೆದ ಜನರು

ಪುತ್ತೂರು : ಕಳೆದ ಮೂರು ವರ್ಷಗಳ ಹಿಂದೆ ಕಾಲನಿ ಜನರಿಗೆ ಕುಡಿಯುವ ನೀರಿಗೆಂದು ತೆಗೆದ ಬಾವಿ ಇದು. ಬಾವಿಯಲ್ಲಿ ಸಾಕಷ್ಟು ನೀರಿದೆ, ಆದರೆ ಬಾವಿಯ ಸುತ್ತ ಕಟ್ಟೆ ಗೋಡೆ ನಿರ್ಮಿಸದ ಕಾರಣ ಬಾವಿಯ ನೀರೂ ಹಾಳಾಗಿದೆ. ಕಾಲನಿಯ ಜನರೂ ಬಾವಿಯ ಕಾರಣಕ್ಕೆ ಭಯದಿಂದಲೇ ಬದುಕುವಂತಾಗಿದೆ. ಈ ದೃಶ್ಯ ಕಂಡು ಬಂದಿದ್ದು ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆದ್ರಾಡಿ ಸಮೀಪದ ಕರ್ನೂರು ಮಠ ದಲಿತ ಕಾಲನಿಯಲ್ಲಿ. ತಾಪಂನಿಂದ ಬಾವಿ ನಿರ್ಮಾಣ ಕಾಲನಿ ಜನರಿಗೆ ಕುಡಿಯುವ ನೀರಿಗೆಂದು ತಾಪಂ ವತಿಯಿಂದ ಈ …

ಜನವಸತಿ ಪ್ರದೇಶದಲ್ಲಿ ತೆರೆದ ಮರಣ ಬಾವಿ..! | ಮೂರು ವರ್ಷದಿಂದ ಭಯದಲ್ಲೇ ಕಾಲ ಕಳೆದ ಜನರು Read More »

35 ವರ್ಷದ ಸೇಡು ಇಂದಿಗೆ ತೀರಿತು | ಕಾಂಗ್ರೆಸ್ಸಿನ ಜ್ಯೋತಿರಾದಿತ್ಯ ಸಿಂಧ್ಯಾ ಬಿಜೆಪಿಗೆ

ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಅವರೊಂದಿಗೆ ಸೇರಿಕೊಂಡು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬಂದ ಕಾಂಗ್ರೆಸ್ಸಿನ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಕಾಲಚಕ್ರ ಒಂದು ದೊಡ್ಡ ಸುತ್ತು ತಿರುಗಿದೆ. 35 ವರ್ಷಗಳ ಹಿಂದೆ ಒಂದು ರಾಜ ಕುಟುಂಬವನ್ನು ಒಡೆದು, ಬಿಜೆಪಿಯನ್ನು ಘಾಸಿಗೊಳಿಸಿದ್ದ ಕಾಂಗ್ರೆಸ್ಸಿಗೆ ಇಷ್ಟು ವರ್ಷಗಳ ನಂತರ ಕಾದು ಕಾದು ಹೊಡೆತ ನೀಡಿದೆ ಬಿಜೆಪಿ. ದ್ವೇಷದ ಇತಿಹಾಸ ಇದು ನಿಜಕ್ಕೂ ಬಿಜೆಪಿಗೆ ದೊಡ್ಡ ಗೆಲುವು. ಗೆಲುವು ಅನ್ನುವುದಕ್ಕಿಂತ ಒಂದು …

35 ವರ್ಷದ ಸೇಡು ಇಂದಿಗೆ ತೀರಿತು | ಕಾಂಗ್ರೆಸ್ಸಿನ ಜ್ಯೋತಿರಾದಿತ್ಯ ಸಿಂಧ್ಯಾ ಬಿಜೆಪಿಗೆ Read More »

ಕತ್ತಲೆ ದೂರ ಮಾಡಿದ ಗ್ರಾಪಂ ಸದಸ್ಯ..! ಕೊಯಿಲತ್ತಡ್ಕ- ಡಿಂಬ್ರಿ ರಸ್ತೆಗೆ ದಾರಿದೀಪ

ಪುತ್ತೂರು: ಆರ್ಯಾಪು ಗ್ರಾಮದ ಡಿಂಬ್ರಿ ಒಂದು ಕಾಲದಲ್ಲಿ ಕುಗ್ರಾಮವಾಗಿತ್ತು. ಮಣ್ಣಿನ ಸಂಪರ್ಕ ರಸ್ತೆ ಇದ್ದರೂ ಅದರಲ್ಲಿ ಸಂಚಾರ ಮಾಡುವಂತಿರಲಿಲ್ಲ, ಹೊಂಡಗುಂಡಿಗಳಿಂದ ತುಂಬಿದ ಈ ರಸ್ತೆಯಲ್ಲಿ ಮಳೆಗಾಲದಲ್ಲಿ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ. ಸುಮಾರು 50 ವರ್ಷಗಳ ಬಳಿಕ ಈ ರಸ್ತೆಗೆ ಕಾಂಕ್ರೀಟ್ ಭಾಗ್ಯ ಬಂತು. ಅರ್ಧ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ಅತೀ ಅಗತ್ಯ ವಿದ್ದ ರಸ್ತೆಯಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುರವರ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ಕೊಯಿಲತ್ತಡ್ಕದ ಮುಖ್ಯ ರಸ್ತೆಯಿಂದ ಸುಮಾರು 12 ವರ್ಷಗಳ ಹಿಂದೆ ಅಂದಿನ …

ಕತ್ತಲೆ ದೂರ ಮಾಡಿದ ಗ್ರಾಪಂ ಸದಸ್ಯ..! ಕೊಯಿಲತ್ತಡ್ಕ- ಡಿಂಬ್ರಿ ರಸ್ತೆಗೆ ದಾರಿದೀಪ Read More »

ಪುತ್ತೂರು ತಾಲೂಕಿನಲ್ಲಿ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ | ಇಂದು ಕೈಕಾರದಲ್ಲಿ ಆಯೋಜನೆ

ಪುತ್ತೂರು : ತಿಮ್ಮಪ್ಪನ ದರ್ಶನಕ್ಕೆ ತಿರುಪತಿಗೆ ತೆರಳುವ ಬದಲು ನಮ್ಮಲ್ಲೇ ದರ್ಶನ ಪಡೆಯುವಂತಾಗಲು ಪುತ್ತೂರು ತಾಲೂಕಿನ ಕೈಕಾರ ಶಾಲಾ‌ ಕ್ರೀಡಾಂಗಣ “ಶೇಷಾದ್ರಿ “ಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕೈಕಾರ ಇದರ ವತಿಯಿಂದ ಮಾ.14 ರಂದು ಲೋಕ ಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಇದಕ್ಕಾಗಿ ಸಿದ್ದತೆ ಪೂರ್ಣಗೊಂಡಿದೆ. ಮಾ.14 ರ ಶನಿವಾರ ಸಾಯಂಕಾಲ ಗಂಟೆ 6 ರಿಂದ ರಾತ್ರಿ10 ರ ತನಕ ಗೋಧೂಳಿ ಮುಹೂರ್ತದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಗವದ್ಭಕ್ತರನ್ನು ಸ್ವಾಗತಿಸಲು ಆಕರ್ಷಕವಾದ ಸಭಾಂಗಣ …

ಪುತ್ತೂರು ತಾಲೂಕಿನಲ್ಲಿ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ | ಇಂದು ಕೈಕಾರದಲ್ಲಿ ಆಯೋಜನೆ Read More »

ತಾತ್ಕಾಲಿಕವಾಗಿ ವಸತಿ ಶಾಲೆಯಾದ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ : ಎಸೆಸೆಲ್ಸಿ ಮಕ್ಕಳಿಗೆ ಓದಲು ಅನುಕೂಲ

ಪುತ್ತೂರು ಶಾಸಕ ಸಂಜೀವ ಮಠಂದೂರು ಸ್ವಂತ ಊರಾದ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಹಗಲು ರಾತ್ರಿ ನಡೆದಿದೆ ವಿದ್ಯಾಭ್ಯಾಸ. ಈ ಬಾರಿ ಎಸೆಸೆಲ್ಸಿ ಯಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ತರಬೇಕೆಂಬ ಉದ್ದೇಶದಿಂದ ಮಾನ್ಯ ಶಾಸಕರು 4 ಗಂಟೆಗೇ ಎದ್ದು ಮಕ್ಕಳ ಮನೆ ಭೇಟಿ ಮಾಡಿದ್ದರು. ಅವರ ಆ ಕಾರ್ಯ ವ್ಯಾಪಕ ಶ್ಲಾಘನೆಗೆ ಒಳಗಾಗಿತ್ತು. ಇದೀಗ ಈ ಪ್ರೌಢಶಾಲೆಯ ಮೇಲುಸ್ತುವಾರಿ ಸಮಿತಿಯ ಗೌರವಾಧ್ಯಕ್ಷ ಶ್ರೀ ಶ್ರೀಧರ್ ಮಠಂದೂರು ಅವರ ನೇತೃತ್ವದಲ್ಲಿ ಶಾಲಾ ಮಕ್ಕಳು ಪೋಷಕರು ಮತ್ತು ಶಿಕ್ಷಕರು ಇನ್ನೊಂದು ಹೆಜ್ಜೆ …

ತಾತ್ಕಾಲಿಕವಾಗಿ ವಸತಿ ಶಾಲೆಯಾದ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ : ಎಸೆಸೆಲ್ಸಿ ಮಕ್ಕಳಿಗೆ ಓದಲು ಅನುಕೂಲ Read More »

ಕಮಲದ ಹೊಡೆತಕ್ಕೆ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಕನಲಿ ಹೋಗಿದ್ದಾರೆ : ವರ್ಕೌಟ್ ಆಗುತ್ತಾ 20 ಮಂತ್ರಿಗಳ ರಾಜೀನಾಮೆ ತಂತ್ರ ?

ಮಧ್ಯಪ್ರದೇಶ ಸರಕಾರ ಹುಟ್ಟುವುದಕ್ಕೆ ಮೊದಲೇ ಎಲೆಕ್ಷನ್ ಸಮಯದಲ್ಲಿಯೆ ಈಗಿನ ಮುಖ್ಯಮಂತ್ರಿ ಕಮಲ್ನಾಥ್ ಮತ್ತು ಅವರ ಆತ್ಮೀಯ ದಿಗ್ವಿಜಯಸಿಂಗ್ ಇವರ ಬಗ್ಗೆ ಜ್ಯೋತಿರಾಧಿತ್ಯ ಸಿಂಧ್ಯ ಅಸಮಾಧಾನ ಹೊಂದಿದ್ದರು. ಕಮಲ್ನಾಥ್ ಮತ್ತು ದಿಗ್ವಿಜಯಸಿಂಗ್ ಹುನ್ನಾರ ದಿಂದಲೇ ಜ್ಯೋತಿರಾಧಿತ್ಯ ಸಿಂಧ್ಯ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದು ಎಂಬ ಭಾವನೆ ಅವರಲ್ಲಿ ಬಲವಾಗಿ ಬೇರೂರಿತ್ತು. ಅಲ್ಲದೆ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗ ಶಾಸಕರ ಯಾವುದೇ ಬೇಡಿಕೆಗಳನ್ನು ಈಡೇರಿಸುವಲ್ಲಿ ಕಮಲ್ನಾಥ್ ವಿಫಲರಾಗಿದ್ದರು. ಪದೇಪದೇ ಜ್ಯೋತಿರಾಧಿತ್ಯ ಬೆಂಬಲಿಗ ಶಾಸಕರುಗಳನ್ನು ನಿರ್ಲಕ್ಷಿಸಲಾಗಿತ್ತು. ಆದ್ದರಿಂದ ಸಣ್ಣಗೆ ಭುಗಿಲೆದ್ದಿದ್ದ ಭಿನ್ನಮತ …

ಕಮಲದ ಹೊಡೆತಕ್ಕೆ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಕನಲಿ ಹೋಗಿದ್ದಾರೆ : ವರ್ಕೌಟ್ ಆಗುತ್ತಾ 20 ಮಂತ್ರಿಗಳ ರಾಜೀನಾಮೆ ತಂತ್ರ ? Read More »

error: Content is protected !!
Scroll to Top