Day: March 9, 2020

ಪತ್ರಕರ್ತ ದಯಾನಂದ ಕುಡುಪು ನಿಧನ

ಮಂಗಳೂರು, ಮಾ. 9: ಪತ್ರಕರ್ತ ಮತ್ತು ಸ್ಯಾಕ್ಸೋಫೋನ್ ವಾದಕ ದಯಾನಂದ ಕುಡುಪು (55) ಸೋಮವಾರ ಸಂಜೆ ತನ್ನ ಸ್ವಗೃಹದಲ್ಲಿ ನಿಧನರಾದರು. ‘ವಾರ್ತಾಭಾರತಿ’ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಈ ಹಿಂದೆ ಹೊಸದಿಗಂತ, ವಿಜಯಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು. ಅವರು ವಾರದ ಹಿಂದೆ ಅಸ್ವಸ್ಥರಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ರಿಕೋದ್ಯಮದ ಜತೆಗೆ ಉತ್ತಮ ಸ್ಯಾಕ್ಸೋಫೋನ್ ವಾದಕರಾಗಿದ್ದ ಅವರು ದ.ಕ.ಜಿಲ್ಲಾ ಪತ್ರಕರ್ತರ ಸಮ್ಮೇಳನ, ಜಿಲ್ಲೆ ಹಾಗೂ ರಾಜ್ಯಮಟ್ಟದ ಹಲವು ಕಾರ್ಯಕ್ರಮಗಳಲ್ಲಿ ತನ್ನ ಸ್ಯಾಕ್ಸೋಫೋನ್ ನ …

ಪತ್ರಕರ್ತ ದಯಾನಂದ ಕುಡುಪು ನಿಧನ Read More »

ರಾಜ್ಯದಲ್ಲಿ ಮೊದಲ ಕೋರೋನ ವೈರಸ್ ಸೋಂಕಿತನ ಪತ್ತೆ : 9 ನೇ ತರಗತಿವರೆಗಿನ ಪರೀಕ್ಷಾ ವೇಳಾಪಟ್ಟಿ ಬದಲು

ಇಂದು ಬೆಂಗಳೂರಿನಲ್ಲಿ, ಈ ಹಿಂದೆ ಅಮೇರಿಕಾಕ್ಕೆ ಹೋಗಿ ಬಂದಿದ್ದ ವ್ಯಕ್ತಿಯಲ್ಲಿ ಕೊರೋನ ವೈರಸ್ ಸೋಂಕು ತಗುಲಿದ ವಿಷಯ ಬಹಿರಂಗವಾಗಿದೆ. ಕರ್ನಾಟಕದ ಆರೋಗ್ಯ ಮಂತ್ರಿಗಳು ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಸರಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯಾದ್ಯಂತ ನೇಡ್ಡಾಯವಾಗಿ ಮುಗಿಸಬೇಕು. ಆ ಬಳಿಕ ಮಕ್ಕಳಿಗೆ ರಜೆ ಕೊಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ. ಕೊರೋನ ವೈರಸ್ ಹಬ್ಬುವ ಭೀತಿಯ ಹಿನ್ನೆಲೆಯಲ್ಲಿ ಸೋಮವಾರ …

ರಾಜ್ಯದಲ್ಲಿ ಮೊದಲ ಕೋರೋನ ವೈರಸ್ ಸೋಂಕಿತನ ಪತ್ತೆ : 9 ನೇ ತರಗತಿವರೆಗಿನ ಪರೀಕ್ಷಾ ವೇಳಾಪಟ್ಟಿ ಬದಲು Read More »

ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನಲ್ಲಿ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನಲ್ಲಿ ಮಹಿಳೆಯರಿಗಾಗಿ ಬೆಳಿಗ್ಗೆ ಬೆಂಕಿ ರಹಿತ ಅಡುಗೆ ಚರುಂಬುರಿ ಸ್ಪರ್ಧೆ ಮತ್ತು ಪ್ರಸ್ತುತಿಯನ್ನು ಏರ್ಪಡಿಸಲಾಯಿತು.ಇದರ ತೀರ್ಪುಗಾರರಾಗಿ ಶ್ರೀ ಕೇಶವ ಪ್ರಸನ್ನ,ಪ್ರಮೋದ್ ಕುಮಾರ್,ಶ್ರೀಮತಿ ಉಷಾ ಕಿರಣ್ ಸಹಕರಿಸಿದರು. ಸಂಜೆ 5.00 ಗಂಟೆಗೆ 1 ಮಿನಿಟ್ ಗೇಮ್ ಏರ್ಪಡಿಸಲಾಯಿತು. ನಂತರ ಸಭಾ ಕಾರ್ಯಕ್ರಮ ನಡೆಯಿತು.ರಿಕ್ರಿಯೇಷನ್ ಸೆಂಟರಿನ ಉಪಾಧ್ಯಕ್ಷರಾದ ಶ್ರೀಮತಿ ಸುಲತಾ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಶ್ರೀಮತಿ ವಂದನಾ ಶಂಕರ್ ಮತ್ತು ಶ್ರೀಮತಿ ಸಹನಾ ಭವಿನ್ ಮುಖ್ಯ ಅತಿಥಿಗಳಾಗಿದ್ದರು. ಶ್ರೀಮತಿ ಪೂರ್ಣಿಮಾ,ಶಶಿಕಲಾ,ವಾಣಿ ಪ್ರಾರ್ಥಿಸಿದರು,ನಂತರ …

ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನಲ್ಲಿ ಮಹಿಳಾ ದಿನಾಚರಣೆ Read More »

ಕಡಬದ ಐತ್ತೂರು ಗ್ರಾಮ : ಚಿಕ್ಕ ಮಗುವನ್ನು ಮನೆಯಲ್ಲೇ ಬಿಟ್ಟು ಸುಮಿತ್ರಾ ಕಣ್ಮರೆ !

ಕಡಬ, ಮಾ.09 : ವಿವಾಹಿತ ಮಹಿಳೆಯೊಬ್ಬಳು ತನ್ನ ಚಿಕ್ಕ ಮಗುವನ್ನು ಮನೆಯಲ್ಲೇ ಬಿಟ್ಟು ಕಾಣೆಯಾಗಿದ್ದಾಳೆ.ಕಡಬದ ಐತ್ತೂರು ಗ್ರಾಮದ ಸಿ.ಆರ್.ಸಿ ಕಾಲನಿ ಯ ಮೂವತ್ತು ವರ್ಷದ ಸುಮಿತ್ರಾ ಕಾಣೆಯಾದ ಮಹಿಳೆ. ಇಲ್ಲಿನ ಸಿ.ಆರ್.ಸಿ ಕಾಲನಿ ನಿವಾಸಿ ಕನಕರಾಜ ಎಂಬವರ ಪತ್ನಿಯಾಗಿದ್ದು ಇವರಿಗೆ ಎಂಟು ವರ್ಷದ ಹಿಂದೆ ಮದುವೆಯಾಗಿತ್ತು. ಸುಮಿತ್ರಾ ಕೆಲ ಕಾಲ ಗಂಡನ ಜತೆ ಸಂಸಾರ ಮಾಡಿಕೊಂಡಿದ್ದಳು. ಗಂಡ ತಮಿಳುನಾಡಿನವನಾಗಿದ್ದು ಅವರಿಗೆ ಒಂದು ಮಗು ಕೂಡಾ ಆಗಿತ್ತು. ಬಳಿಕ ಅದೇನಾಯಿತೋ, ಆಕೆ ಗಂಡನ ಮನೆಯಿಂದ ತನ್ನ ತವರು ಮನೆಗೆ ಬಂದಿದ್ದಳು. ಫೆಬ್ರವರಿ …

ಕಡಬದ ಐತ್ತೂರು ಗ್ರಾಮ : ಚಿಕ್ಕ ಮಗುವನ್ನು ಮನೆಯಲ್ಲೇ ಬಿಟ್ಟು ಸುಮಿತ್ರಾ ಕಣ್ಮರೆ ! Read More »

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಪಾದಯಾತ್ರೆ ಮೂಲಕ ಬಂದ ಭಕ್ತರು

ಪುತ್ತೂರು: ಪುನರುತ್ಥಾನಗೊಂಡ ದೇಯಿಬೈದ್ಯೇತಿ ಮೂಲ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲುಗೆ ಬಂಟ್ವಾಳದಿಂದ ಭಕ್ತರು ಪಾದಯಾತ್ರೆಯ ಮೂಲಕ ಭೇಟಿ ನೀಡಿದರು. ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಅಮ್ಮುಂಜೆಯಿಂದ ಭಕ್ತಾದಿಗಳು ಪಾದಯಾತ್ರೆಯ ಇವತ್ತು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲುಗೆ ಆಗಮಿಸಿದರು. ನಿನ್ನೆ ಮುಂಜಾನೆ ಪೊಳಲಿ ಗ್ರಾಮದಿಂದ ಬಿಟ್ಟ ಗ್ರಾಮಸ್ಥರು ಒಟ್ಟು 65 ಕಿಲೋಮೀಟರ್ ಗಳನ್ನು ಕ್ರಮಿಸಿ ಇವತ್ತು ಕೋಟಿ ಚೆನ್ನಯ್ಯ ರ ಕ್ಷೇತ್ರಕ್ಕೆ ಆಗಮಿಸಿದರು. ಕ್ಷೇತ್ರದ ತಂತ್ರಿಗಳು, ಅರ್ಚಕರುಗಳು ಪಾದಯಾತ್ರಿಗಳನ್ನು ಸ್ವಾಗತಿಸಿದರು. ಬಳಿಕ ಪ್ರಸಾದ ನೀಡಿ ಗೌರವಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗಿಲ್ಲ, ಭಯ ಪಡುವ ಅಗತ್ಯ ಇಲ್ಲ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ. ಜನರು ಯಾವುದೇ ರೀತಿಯಲ್ಲಿ ಭಯ ಪಡುವ ಅಗತ್ಯ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದರ ಅವರು ಹೊರ ದೇಶದಿಂದ ಆಗಮಿಸಿದ ಪ್ರಯಾಣಿಕನೊಬ್ಬನಲ್ಲಿ ಜ್ವರದ ಲಕ್ಷಣ ಕಂಡುಬಂತು. ಹಾಗಾಗಿ ಸಾರ್ವಜನಿಕ ಆರೋಗ್ಯದ ಹಿತ ದೃಷ್ಠಿಯಿಂದ ಆತನಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದೆವು. ಆದರೆ ಆತ ಚಿಕಿತ್ಸೆಗೆ ಯಾವುದೇ ಸಹಕರಿಸಲಿಲ್ಲ. ಇದರ ಬಗ್ಗೆ ಯಾರು ಗೊಂದಲಕ್ಕೀಡಾಗಬಾರದು. ಈಗ ಅವರನ್ನು …

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗಿಲ್ಲ, ಭಯ ಪಡುವ ಅಗತ್ಯ ಇಲ್ಲ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ Read More »

ಪುತ್ತೂರು | ಆಲಡ್ಕ ಶ್ರೀ ಸದಾಶಿವ ದೇವಸ್ಥಾನ : ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾ.25- ಮಾ.30

ಶ್ರೀ ಸದಾಶಿವ ದೇವಸ್ಥಾನ ಆಲಡ್ಕ ಮಂಡೂರಿನಲ್ಲಿ ದಿನಾಂಕ 25-03-2020 ನೇ ಬುಧವಾರದಿಂದ ದಿನಾಂಕ 30-03-2020 ನೇ ಸೋಮವಾರದ ತನಕ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಮತ್ತು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜಶ್ರೀ ಪದ್ಮಭೂಷಣ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ವಿವಿಧ ವೈದಿಕ, ತಾಂತ್ರಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಇಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ …

ಪುತ್ತೂರು | ಆಲಡ್ಕ ಶ್ರೀ ಸದಾಶಿವ ದೇವಸ್ಥಾನ : ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾ.25- ಮಾ.30 Read More »

‘ ನೇಮ್ ಆಂಡ್ ಶೇಮ್ ‘ ಪೋಸ್ಟರ್ ಅನ್ನು ತಕ್ಷಣ ತೆಗೆಯುವಂತೆ ಅಲಹಾಬಾದ್ ಹೈಕೋರ್ಟ್ ಸೂಚನೆ : ಯೋಗಿ ಆಡಿತ್ಯನಾಥ್ ಸರ್ಕಾರಕ್ಕೆ ಮುಜುಗರ

ಕಳೆದ ಡಿಸೆಂಬರ್ 19 ರಂದು ನಡೆದ ಸಿಎಎ-ಎನ್ ಆರ್ ಸಿ ವಿರುದ್ಧದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದ 57 ಜನರ ಹೆಸರು ಭಾವಚಿತ್ರ ಮತ್ತು ವಿಳಾಸವನ್ನುಗೊಂಡ ‘ ನೇಮ್ ಆಂಡ್ ಶೇಮ್ ‘ ಪೋಸ್ಟರ್ ತೆರವುಗೊಳಿಸುವಂತೆ ಅಲಹಬಾದ್ ಹೈಕೋರ್ಟ್ ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಈ ಮೂಲಕ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಮುಖಭಂಗವಾಗಿದೆ. ” ವಿಶ್ವಸಂಸ್ಥೆಯ ಮೂಲ ಆಶಯವಾದ ಗೌಪ್ಯತೆಯು ವ್ಯಕ್ತಿಯ ಮೂಲಭೂತ ಸ್ವಾತಂತ್ರ್ಯ. ಈ ರೀತಿ ಪೋಸ್ಟರ್ ಹಾಕುವುದರಿಂದ ವ್ಯಕ್ತಿಯ ಗೌಪ್ಯತೆಗೆ ಧಕ್ಕೆ ಉಂಟಾಗುತ್ತದೆ” …

‘ ನೇಮ್ ಆಂಡ್ ಶೇಮ್ ‘ ಪೋಸ್ಟರ್ ಅನ್ನು ತಕ್ಷಣ ತೆಗೆಯುವಂತೆ ಅಲಹಾಬಾದ್ ಹೈಕೋರ್ಟ್ ಸೂಚನೆ : ಯೋಗಿ ಆಡಿತ್ಯನಾಥ್ ಸರ್ಕಾರಕ್ಕೆ ಮುಜುಗರ Read More »

ಬಹುಜನ ಒಕ್ಕೂಟದಿಂದ ದರ್ಬೆ ವೃತ್ತಕ್ಕೆ ಸಂವಿದಾನ ಶಿಲ್ಪಿ ಡಾ.ಬಿ.ಅರ್.ಅಂಬೆಡ್ಕರ್ ಹೆಸರಿಡುವಂತೆ ಒತ್ತಾಯಿಸಿ ಪ್ರತಿಭಟನೆ

ಪುತ್ತೂರು: ಬಹುಜನ ಒಕ್ಕೂಟ ಹೋರಾಟ ಸಮಿತಿ ಪುತ್ತೂರು ವತಿಯಿಂದ ಪುತ್ತೂರಿನ ದರ್ಬೆ ವೃತ್ತಕ್ಕೆ ಸಂವಿದಾನ ಶಿಲ್ಪಿ ಡಾ| ಬಿ.ಅರ್.ಅಂಬೆಡ್ಕರ್ ನಾಮಕರಣ ಮಾಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ಇಂದು ಪುತ್ತೂರಿನ ದರ್ಬೆ ಸರ್ಕಲ್ ಬಳಿ ನಡೆಯಿತು. ಪ್ರತಿಭಟನೆಯಲ್ಲಿ ಒಕ್ಕೂಟದ ಅದ್ಯಕ್ಷರಾದ ಸೇಸಪ್ಪ ಬೆದ್ರಕಾಡು, ದಲಿತ್ ಸೇವಾ ಸಮಿತಿಯ ಅನಂದ ಬೆಳ್ಳಾರೆ, ಬೆಳ್ತಂಗಡಿಯ ನೇಮಿರಾಜ್ ಕಿಲ್ಲೂರು, ಸಿದ್ದಿಕ್ ಪುತ್ತೂರು, ಬಹುಜನ ಒಕ್ಕೂಟ ಪುತ್ತೂರು ಇದರ ಕಾರ್ಯದರ್ಶಿ ಉದಯ್‍ಕುಮಾರ್ ಎರಕ್ಕಳ ಮತ್ತಿತರರು ಉಪಸ್ಥಿತರಿದ್ದರು.

ಅಜಪಿಲ | ವಿಷ್ಣುಮೂರ್ತಿ ದೈವಸ್ಥಾನ ಸಂಪರ್ಕ ರಸ್ತೆ ಅಭಿವೃದ್ಧಿಗೆ ಚಾಲನೆ

ಸುಳ್ಯ: ಬೆಳ್ಳಾರೆ ಅಜಪಿಲ ಮಹಾವಿಷ್ಣುಮೂರ್ತಿ ದೈವಸ್ಥಾನದ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಸುಳ್ಯ ಶಾಸಕ ಎಸ್.ಅಂಗಾರ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ವೀಕ್ಷಣೆ ಮಾಡಿದರು. ಸಾರ್ವಜನಿಕರು ಭಕ್ತಾಭಿಮಾನಿಗಳು ಊರಿನ ಗಣ್ಯರು ಉಪಸ್ಥಿತರಿದ್ದರು.

error: Content is protected !!
Scroll to Top