ಕಡಬ | ನೂತನ ತಾಲೂಕು ಪಂಚಾಯತ್ ಕಛೇರಿಗೆ ಜಾಗ ಗುರುತು | ಎಪ್ರಿಲ್ ತಿಂಗಳಿನಿಂದ ತಾ. ಪಂ. ಕಛೇರಿ ಕಾರ್ಯಾರಂಭ
ಕಡಬ: ಕಡಬ ಪೇಟೆಯ ಸಮೀಪದ ಹಳೆಸ್ಟೇಷನ್ ಎಂಬಲ್ಲಿ ತಾಲೂಕು ಪಂಚಾಯತ್‌ಗೆ 1.15 ಎಕ್ರೆ ಜಾಗ ಗುರುತು ಮಾಡಲಾಗಿದ್ದು ಎಪ್ರಿಲ್ ತಿಂಗಳಿನಿಂದ ಹೊಸ ತಾಲೂಕು ಪಂಚಾಯತ್ ಕಛೇರಿ ಕಾರ್ಯಾರಂಭ ಮಾಡಲಿದೆ ಎಂದು ಪುತ್ತೂರು ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ. ಅವರು ಮಾ.6ರಂದು ಕಡಬ ಹಳೆಸ್ಟೇಷನ್ಗೆ ಭೇಟಿ ನೀಡಿ ಅಲ್ಲಿರುವ 2.30ಎಕ್ರೆ ಜಾಗದಲ್ಲಿ 1.15ಎಕ್ರೆ ತಾಲೂಕು ಪಂಚಾಯತ್ ರಚನೆಗೆ ಹಾಗೂ 1.15 ಎಕ್ರೆ ಪ್ರವಾಸಿ ಬಂಗಲೆ ನಿರ್ಮಣಕ್ಕೆ ಖಾದಿರಿಸುವ ಬಗ್ಗೆ ಕಂದಾಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. …