Day: March 4, 2020

ಇಂದು ಮರೀಲು ಪಂಚಮುಖಿ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

ಪುತ್ತೂರು : ಮರೀಲು ಶ್ರೀ ಪಂಚಮುಖಿ‌ ಗಾಯತ್ರೀ, ಗಣಪತಿ, ಆಂಜನೇಯ ಕ್ಷೇತ್ರದಲ್ಲಿ ಮಾ.5 ರಂದು ಪ್ರತಿಷ್ಠಾ ವರ್ಧಂತ್ಯುತ್ಸವ ನಡೆಯಲಿದೆ. ಬೆಳಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಕಲಶಾಭಿಷೇಕ, ಪಂಚಮುಖಿ ಗಣಪತಿ ಯಜ್ಞ, ಪಂಚಮುಖಿ ಆಂಜನೇಯ ‌ಯಜ್ಞ, ಸಗ್ರಹಮಖಪೂರ್ವಕ‌ ಶನೈಶ್ವರ ಯಜ್ಞ ನಡೆಯಲಿದೆ. ಮಧ್ಯಾಹ್ನ ಪಂಚಮುಖಿ ‌ಗಾಯತ್ರೀ‌ ಮಹಾಯಜ್ಞ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ‌ ನಡೆಯಲಿದೆ. ರಾತ್ರಿ ಶ್ರೀ ದೇವರಿಗೆ‌ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಾಂಸ್ಕೃತಿಕ ವೇದಿಕೆಯಲ್ಲಿ ‌ಸಂಜೆ ಪುತ್ತೂರು ವಜ್ರಮಾತಾ ಮಹಿಳಾ ಭಜನ‌ ತಂಡ …

ಇಂದು ಮರೀಲು ಪಂಚಮುಖಿ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ Read More »

ಸರ್ವೆ | ಹಿಂದು ಸಂಘಟನೆಯ ಕಾರ್ಯಕರ್ತನ ಮೇಲೆ ಮುಸುಕುಧಾರಿ ಗಳಿಂದ ಹಲ್ಲೆ

ಪುತ್ತೂರು: ನಗರದ ಹೊರವಲಯದ ಸರ್ವೆ ಎಂಬಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತನ ಮೇಲೆ ಮುಸುಕುದಾರಿಗಳು ಹಲ್ಲೆ ನಡೆಸಿದ ಕುರಿತು ವರದಿಯಾಗಿದೆ. ಸರ್ವೆ ಗ್ರಾಮದಲ್ಲಿ ಶಾಂತಿಗೋಡು ನಿವಾಸಿ ರಂಜಿತ್ ಎಂಬವರ ಮೇಲೆ ಮುಸುಕುದಾರಿಗಳ ತಂಡ ಹಲ್ಲೆ ನಡೆಸಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸವಣೂರಿನಲ್ಲಿರುವ ತನ್ನ ಅಜ್ಜಿ ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಹಿಂಬಾಲಿಸಿಕೊಂಡು 2 ಬೈಕ್ ನಲ್ಲಿ ಬಂದ ಮುಸುಕುದಾರಿಗಳು ಸರ್ವೆ ದೇವಸ್ಥಾನಕ್ಕೆ ಹೋಗುವ ತಿರುವಿನಲ್ಲಿ ರಂಜಿತ್ ಅವರ ಬೈಕ್ ತಡೆದು ಹಲ್ಲೆ …

ಸರ್ವೆ | ಹಿಂದು ಸಂಘಟನೆಯ ಕಾರ್ಯಕರ್ತನ ಮೇಲೆ ಮುಸುಕುಧಾರಿ ಗಳಿಂದ ಹಲ್ಲೆ Read More »

ಪರ್ಷಿಯನ್ ಪದ ‘ಮುಜರಾಯಿ’ ಇನ್ನಿಲ್ಲ | ‘ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ‘- ಹೊಸ ಹೆಸರು

ಯಡಿಯೂರಪ್ಪ ನೇತೃತ್ವದ ಕರ್ನಾಟಕದ ಬಿಜೆಪಿ ಸರಕಾರ ಮುಜರಾಯಿ ಇಲಾಖೆ ಎಂದು ಇವರಿಗೆ ಕರೆಯಲ್ಪಡುತ್ತಿದ್ದ ಹಿಂದೂ ಧಾರ್ಮಿಕ ಇಲಾಖೆಯ ಹೆಸರನ್ನು ಬದಲಿಸಿದೆ. ಇನ್ನು ಮುಂದೆ ಮುಜರಾಯಿ ಇಲಾಖೆಗಳ ಬೋರ್ಡುಗಳು ಬದಲಾಗಿ ಅದು ‘ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ‘ ಎಂದು ಬೋರ್ಡು ನೇತಾಡಿಸಿಕೊಳ್ಳಲಿವೆ. ಮುಜರಾಯಿ ಇಲಾಖೆಯು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಸಂಸ್ಥೆ, 2011 ರ ಕಾಯ್ದೆಯ ಕೆಳಗಡೆ ಬರುತ್ತದೆ. ಮುಜರಾಯಿ ಇಲಾಖೆ ಹೆಸರನ್ನು ಬದಲಿಸುವಂತೆ ಮಂಗಳೂರಿನವರೇ ಆದ ದಿನೇಶ್ …

ಪರ್ಷಿಯನ್ ಪದ ‘ಮುಜರಾಯಿ’ ಇನ್ನಿಲ್ಲ | ‘ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ‘- ಹೊಸ ಹೆಸರು Read More »

ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ, ಕೊಡಿ ನೀರು ಬಳಿ ಸರಣಿ ಅಪಘಾತ : ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯ

ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ ಸರಣಿ ಅಪಘಾತ ನಡೆದಿದ್ದು ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು, ಮಾ.4 ರಂದು ಸಂಜೆ ನಡೆದಿದೆ. ಘಟನೆಯು ಕೊಡಿನೀರು ಬಸ್ ನಿಲ್ದಾಣದ ಬಳಿ ನಡೆದಿದ್ದು ಪುತ್ತೂರಿಗೆ ಹೋಗುತಿದ್ದ ಮಾರುತಿ 800 ಕಾರಿಗೆ ಪುತ್ತೂರು ಕಡೆಯಿಂದ ಬರುತಿದ್ದ ಬೈಕ್ ಗುದ್ದಿದೆ. ಆಗ ಬೈಕಿನಲ್ಲಿದ್ದ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಆಗ ಗುದ್ದಿದ ಕಾರು ಸಡನ್ ಆಗಿ ಬ್ರೇಕ್ ಹಾಕಿರುವುದರಿಂದ ಕಾರಿನ ಹಿಂದಿನಿಂದ ಬರುತಿದ್ದ ಮತ್ತೊಂದು ಬೈಕ್ ಕಾರಿಗೆ ಗುದ್ದಿದೆ. ಬೈಕ್ ನಿಂದ ಬಿದ್ದ ಗಾಯಳುಗಳನ್ನು ಪುತ್ತೂರು ಆಸ್ಪತ್ರೆಗೆ …

ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ, ಕೊಡಿ ನೀರು ಬಳಿ ಸರಣಿ ಅಪಘಾತ : ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯ Read More »

ಬಿ.ಜೆ.ಪಿ.ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ರೈ ಕೆಡೆಂಜಿ

ಸವಣೂರು :ಬಿ.ಜೆಪಿ.ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಸವಣೂರಿನ ರಾಕೇಶ್ ರೈ ಕೆಡೆಂಜಿ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ರಾಕೇಶ್ ರೈ ಕೆಡೆಂಜಿ ಅವರು ದ.ಕ.ಜಿಲ್ಲಾ ಬಿಜೆಪಿ ಸದಸ್ಯರಾಗಿ,ಸುಳ್ಯ ಮಂಡಲ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ,ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ರಾಕೇಶ್ ರೈ ಕೆಡೆಂಜಿ ಅವರು ಸವಣೂರು ಯುವಕ ಮಂಡಲದ ಅಧ್ಯಕ್ಷರಾಗಿ ತಾಲೂಕು,ಜಿಲ್ಲೆ,ರಾಜ್ಯಮಟ್ಟದ ಯುವಜನ ಮೇಳಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು,ತಾಲೂಕು ,ಜಿಲ್ಲಾ ಯುವ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ಕೊಡಮಾಡುವ ವಿವೇಕ ಯುವಪ್ರಶಸ್ತಿಗೆ ಭಾಜನರಾಗಿದ್ದರು. ನರಿಮೊಗರು ಜೆಸಿಐ …

ಬಿ.ಜೆ.ಪಿ.ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ರೈ ಕೆಡೆಂಜಿ Read More »

ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ದಿನಾಚರಣೆ : ಉಡುಪಿಯ ವಿಶ್ರಾಂತ ಪ್ರಾಚಾರ್ಯ ಡಾ.ಪಾದೆಕಲ್ಲು ವಿಷ್ಣು ಭಟ್ಟ ಭಾಗಿ

ಪುತ್ತೂರು : ಶಿಕ್ಷಣ ಎನ್ನುವಂತಹದ್ದು ಕೇವಲ ಕಾಲೇಜಿನಲ್ಲಿ ಪಡೆಯುವಂತಹದ್ದಲ್ಲ. ಎಲ್ಲೆಲ್ಲಿ ಅನುಭವ ದೊರೆಯುತ್ತದೆಯೇ ಅಲ್ಲಿ ಪಡೆದುಕೊಳ್ಳಬೇಕು. ಪ್ರತಿಯೊಬ್ಬರು ಒಳ್ಳೆಯ ವಿಷಯಗಳನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅನುಭವ ಯಾರಲ್ಲಿದೆಯೋ ಅಲ್ಲಿಗೆ ತೆರಳಿ ಪಡೆಯುವ ಗುಣ ಬೆಳೆಸಿಕೊಂಡಾಗ ವ್ಯಕ್ತಿತ್ವ ಅರಳುವುದಕ್ಕೆ ಸಾಧ್ಯ- ಉಡುಪಿಯ ವಿಶ್ರಾಂತ ಪ್ರಾಚಾರ್ಯ ಡಾ. ಪಾದೆಕಲ್ಲು ವಿಷ್ಣು ಭಟ್ಟ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳವಾರ ಮಾತನಾಡಿದರು. ವಿವೇಕಾನಂದ ಕಾಲೇಜನ್ನು ಹಿರಿಯರು ವಿವೇಕಾನಂದರ ಜೀವನ, ತತ್ವ, ರಾಷ್ಟ್ರೀಯ …

ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ದಿನಾಚರಣೆ : ಉಡುಪಿಯ ವಿಶ್ರಾಂತ ಪ್ರಾಚಾರ್ಯ ಡಾ.ಪಾದೆಕಲ್ಲು ವಿಷ್ಣು ಭಟ್ಟ ಭಾಗಿ Read More »

ಪುತ್ತೂರು ನಗರಸಭೆಯ ರೂ.46.11 ಕೋಟಿಯ ಮುಂಗಡಪತ್ರ ಮಂಡನೆ : ರೂ.67.55 ಲಕ್ಷ ಮಿಗತೆ ನಿರೀಕ್ಷೆ

ಪುತ್ತೂರು; ನಗರಸಭೆಯ ಆಡಳಿತಾಧಿಕಾರಿ ಅವರ ಅನುಮೋದನೆಯೊಂದಿಗೆ ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ.ಶೆಟ್ಟಿ 2020-21 ಸಾಲಿನ ನಗರಸಭೆಯ ರೂ.46.11 ಕೋಟಿಯ ಮುಂಗಡಪತ್ರವನ್ನು ಬುಧವಾರ ನಗರಸಭಾ ಸಭಾಂಗಣದಲ್ಲಿ ಮಂಡಿಸಿದರು. ಮುಂಗಡ ಪತ್ರದಲ್ಲಿ ರೂ.67.55 ಲಕ್ಷ ಮಿಗತೆಯನ್ನು ನಿರೀಕ್ಷಿಸಲಾಗಿದೆ. 2020-21 ಸಾಲಿನಲ್ಲಿ ನಿರೀಕ್ಷಿತ ಸಂಪನ್ಮೂಲಗಳು ಈ ರೀತಿ ಇವೆ. ಆರಂಭಿಕ ಶಿಲ್ಕು ರೂ.7.47 ಕೋಟಿ, ಸ್ವಂತ ಆದಾಯ ರೂ.12.46 ಕೋಟಿ, ವೇತನ ಅನುದಾನ ಮತ್ತು ವಿದ್ಯುತ್ ಅನುದಾನ ರಾಜ್ಯ ಹಣಕಾಸು ಮುಕ್ತ ನಿಧಿ ಅನುದಾನ ಹಾಗೂ ಇತರ ಅನುದಾನಗಳು ರೂ. …

ಪುತ್ತೂರು ನಗರಸಭೆಯ ರೂ.46.11 ಕೋಟಿಯ ಮುಂಗಡಪತ್ರ ಮಂಡನೆ : ರೂ.67.55 ಲಕ್ಷ ಮಿಗತೆ ನಿರೀಕ್ಷೆ Read More »

ಶ್ರೀ ಹನುಮಾನ್ ಸಾಂತ್ವನ ಮಂದಿರ ಯೋಜನೆ ಮತ್ತು ಹನುಮಾನ್ ಫೌಂಡೇಶನ್ ನಿಂದ ಸಾಮೂಹಿಕ ಹನುಮಯಜ್ಞ, ಕಲ್ಪೋಕ್ತಪೂಜೆ, ಸಾಮೂಹಿಕ ಹನುಮಾನ್ ಚಾಲಿಸಾ ಪಾರಾಯಣ

ಪುತ್ತೂರು : ಧ್ಯಾನಸ್ಥ ಶ್ರೀ ಹನುಮಾನ್ ಸಾಂತ್ವನ ಮಂದಿರ ಯೋಜನೆ ಭರತಪುರ ಮತ್ತು ಹನುಮಾನ್ ಫೌಂಡೆಶನ್ ಮುಂದಾಳತ್ವದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕರು, ಹನುಮದೋಪಾಸಕರು ಡಾ| ಶ್ರೀಶ್ರೀಶ್ರೀ ರಾಮಚಂದ್ರ ಗುರೂಜಿ ಮತ್ತು ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಕುಕ್ಕಾಜೆಯ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿಯ ಶುಭಾಶಿರ್ವಾದಗಳೋಂದಿಗೆ ಹನುಮ ಜಯಂತಿಯ ಪ್ರಯುಕ್ತ ಲೋಕ ಕಲ್ಯಾಣರ್ಥ, ಸಕಲ ಕಷ್ಟ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ ಶ್ರೀ ಕೃಷ್ಣ ಉಪದ್ಯಾಯರ ಪೌರೋಹಿತ್ಯದಲ್ಲಿ ಸಾಮೂಹಿಕ ಹನುಮಯಜ್ಞ ಮತ್ತು ಹನುಮಾನ್ ಕಲ್ಪೋಕ್ತ ಪೂಜೆ ಹಾಗೂ …

ಶ್ರೀ ಹನುಮಾನ್ ಸಾಂತ್ವನ ಮಂದಿರ ಯೋಜನೆ ಮತ್ತು ಹನುಮಾನ್ ಫೌಂಡೇಶನ್ ನಿಂದ ಸಾಮೂಹಿಕ ಹನುಮಯಜ್ಞ, ಕಲ್ಪೋಕ್ತಪೂಜೆ, ಸಾಮೂಹಿಕ ಹನುಮಾನ್ ಚಾಲಿಸಾ ಪಾರಾಯಣ Read More »

ನೆಲ್ಯಾಡಿಯಲ್ಲಿ ಸಮಾನ ಮನಸ್ಕರ ವೇದಿಕೆವತಿಯಿಂದ ಅಂತರ್ ವಿಶ್ವವಿದ್ಯಾನಿಲಯ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ : ಮಾ.6 ಕ್ಕೆ

ಪುತ್ತೂರು : ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ ವತಿಯಿಂದ ದಿನಾಂಕ 6-03-2020 ರಂದು ಶುಕ್ರವಾರ ಸಂಜೆ 5.30 ಕ್ಕೆ ಜ್ಞಾನೋದಯ ಬೆಥನಿ ವಿದ್ಯಾಲಯದ ಮೈದಾನದಲ್ಲಿ ಅಂತರ್ ವಿಶ್ವವಿದ್ಯಾನಿಲಯಗಳ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟವನ್ನು ಎರ್ಪಡಿಸಲಾಗಿದೆ ಎಂದು ಸಮಿತಿಯ ಅದ್ಯಕ್ಷರಾದ ರೆ|ಡಾ|ವರ್ಗಿಸ್ ಕೈಪನಡುಕ ಇಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಮಾನ ಮನಸ್ಕರ ವೇದಿಕೆಯನ್ನು ದೃಡಪಡಿಸಲು ಜಾತಿ,ಮತ,ಧರ್ಮ ರಾಜಕೀಯ ಬೇದಭಾವವಿಲ್ಲದೇ ಎಲ್ಲರನ್ನೂ ಒಟ್ಟು ಸೇರಿಸುವ ದೃಷ್ಠಿಯಿಂದ, ಎಲ್ಲರಿಗೂ ಸಮಬಾಳು, ಎಲ್ಲರಿಗೂ ಸಮಪಾಲು ಎನ್ನುವ ಆಶಯದೊಂದಿಗೆ ನಾವೆಲ್ಲರೂ ಒಂದೇ ಎನ್ನುವ ಬಾವನೆಯೊಂದಿಗೆ …

ನೆಲ್ಯಾಡಿಯಲ್ಲಿ ಸಮಾನ ಮನಸ್ಕರ ವೇದಿಕೆವತಿಯಿಂದ ಅಂತರ್ ವಿಶ್ವವಿದ್ಯಾನಿಲಯ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ : ಮಾ.6 ಕ್ಕೆ Read More »

ಬಸ್‌ನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯ ಅಸಭ್ಯ ವರ್ತನೆ : ಪೊಲೀಸರ ವಶಕ್ಕೆ

ಮನೆಯಲ್ಲಿ ನೈತಿಕ ಶಿಕ್ಷಣ ನೀಡದ ಪರಿಣಾಮ !! ಪುತ್ತೂರು: ಬೆಳ್ಳಾರೆ ಯಿಂದ ಮಾಡಾವು ಮೂಲಕ ಪುತ್ತೂರಿಗೆ ಹೋಗುವ ಬಸ್‌ನಲ್ಲಿ ಅನ್ಯಕೋಮಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯೊಬ್ಬರು ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ವಿದ್ಯಾರ್ಥಿಗಳಿಬ್ಬರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಾ.4ರಂದು ಬೆಳಿಗ್ಗೆ ನಡೆದ ಬಗ್ಗೆ ವರದಿಯಾಗಿದೆ. ಇವರು ಬಸ್‌ನಲ್ಲಿ ಕೆಳದಿನಗಳಿಂದ ಅತಿರೇಕದ ವರ್ತನೆಗಳು ನಡೆಯುತ್ತಿದ್ದು,ಈ ವಿಚಾರವನ್ನು ಇತರ ವಿದ್ಯಾರ್ಥಿಗಳು ಹಿಂದು ಸಂಘಟನೆಗಳ ಮುಖಂಡರ ಗಮನಕ್ಕೆ ತಂದಿದ್ದರು. ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಖಾಸಗಿ ಕಾಲೇಜೊಂದರ …

ಬಸ್‌ನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯ ಅಸಭ್ಯ ವರ್ತನೆ : ಪೊಲೀಸರ ವಶಕ್ಕೆ Read More »

error: Content is protected !!
Scroll to Top