ತಲಪಾಡಿ :ನಿದ್ದೆ ಮಂಪರಲಿ ಸೇತುವೆಗೆ ಢಿಕ್ಕಿ ಹೊಡೆದು ನಿಂತ ಪಿಕಪ್ ,ಚಾಲಕ ಪಾರು

ಮಂಗಳೂರು: ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನವೊಂದು ಸೇತುವೆಗೆ ಢಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಿಗ್ಗೆ ತಲಪಾಡಿ ಬಳಿಯ ಕೆ.ಸಿ.ರೋಡು- ಉಚ್ಚಿಲ ಸೇತುವೆಯಲ್ಲಿ ನಡೆದಿದೆ.


Ad Widget

ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿಯ ಕೆ.ಸಿ.ರೋಡ್ – ಉಚ್ಚಿಲ ನಡುವೆ ಈ ಘಟನೆ ನಡೆದಿದೆ.

ಢಿಕ್ಕಿ ಹೊಡೆದ ವಾಹನ ಸೇತುವೆಯಿಂದ ಮೇಲೆ ನಿಂತ ಕಾರಣದಿಂದ ಬಹುದೊಡ್ಡ ದುರಂತ ತಪ್ಪಿದೆ.


Ad Widget

ಸೇತುವೆ ಕೆಳಗೆ ಹಲವು ಅಡಿಗಳಷ್ಟು ಆಳವಿರುವ ಕಾರಣ ಒಂದು ವೇಳೆ ವಾಹನ ಕೆಳಗೆ ಬಿದ್ದಿದ್ದರೆ ದುರಂತ ನಡೆಯುವ ಸಂಭವ ಅಧಿಕವಾಗಿತ್ತು.


Ad Widget

ಘಟನೆಯಲ್ಲಿ ವಾಹನ ಚಾಲಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮಂಗಳೂರು ನಾಗುರಿ ಸಂಚಾರಿ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: