ಹಿರಿಯ ನಾಗರಿಕರ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ -ಆರ್.ಅಶೋಕ್

ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನವನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು. ಹಿರಿಯ ನಾಗರಿಕರು ಕಚೇರಿಗೆ ಅಲೆದಾಡಿ ಅರ್ಜಿ ಹಾಕುವ ಅವಶ್ಯಕತೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಹಿಡಿದು ಕಚೇರಿಗೆ ಅಲೆಯಬೇಕಿಲ್ಲ. ಆಧಾರ್ ಕಾರ್ಡ್ ನಲ್ಲಿನ ಮಾಹಿತಿ ಆಧರಿಸಿ 60 ವರ್ಷವಾಗುತ್ತಿದ್ದಂತೆ ವೃದ್ಧಾಪ್ಯ ವೇತನ ಅರ್ಜಿಯೊಂದಿಗೆ ಸಿಬ್ಬಂದಿ ಮನೆ ಬಾಗಿಲಿಗೆ ಬರಲಿದ್ದಾರೆ.

ಅರ್ಜಿ ಸ್ವೀಕರಿಸಿ ಮಾಸಾಶನ ಮಂಜೂರಾತಿ ಬಳಿಕ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಬ್ಯಾಂಕ್ ಖಾತೆ ನೀಡಿದವರಿಗೆ ಅವರ ಖಾತೆಗೆ ವೃದ್ಧಾಪ್ಯ ವೇತನ ಜಮಾ ಮಾಡಲಾಗುವುದು.

ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದ್ದು, ನೇರವಾಗಿ ವೃದ್ಧಾಪ್ಯ ವೇತನ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

Leave A Reply

Your email address will not be published.