ನರಿಮೊಗರು ಸಾಂದೀಪನಿ | ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ

ನರಿಮೊಗರು| ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವವು ಅದ್ದೂರಿಯಾಗಿ ಆಚರಿಸಲಾಯಿತು ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹಾಗೂ ಸಂಸ್ಥೆಯ ಪೋಷಕರಾದ ಗೋಪಾಲ ಗೌಡ ಆಗಮಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರು , ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ ,ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಪುತ್ತೂರಾಯ ಹಾಗೂ ಶಾಲಾ ಮುಖ್ಯ ಗುರು ಜಯಮಾಲಾ.ವಿ.ಯನ್ . ವಸತಿ ನಿಲಯದ ನಿಲಯಪಾಲಕರಾದ ಶ್ರೀ ಹರೀಶ್. ಕೆ ,ಕುಮಾರಿ ಶ್ವೇತಾ,ವಸತಿ ನಿಲಯದ ನಾಯಕರಾದ ಅನಿಕೇತ್ ನಾಯಕ್ , ದ್ರುವಿಕಾ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಎಲ್ಲಾ ಗಣ್ಯರು ವಿದ್ಯಾರ್ಥಿಗಳನ್ನು ಹರಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಾದ‌ ಅನಿಕೇತ್ ನಾಯಕ್,ದ್ರುವಿಕ, ಪವನ್.ಪೈ. ತಮ್ಮ ಅನುಭವವಗಳನ್ನು ವ್ಯಕ್ತಪಡಿಸಿದರು. ನಿಲಯಪಾಲಕರಾದ ಶ್ರೀ ಹರೀಶ್.ಕುಮಾರಿ ಯಶಸ್ವಿನಿಯವರು ವಿದ್ಯಾರ್ಥಿ ಜೀವನದ ಬಗ್ಗೆ, ವಸತಿನಿಲಯದ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳು ತಮ್ಮಲ್ಲಿ ಪರಸ್ಪರ ಬೆಳೆಸತಕ್ಕಂತಹ ಧನಾತ್ಮಕ ವಿಚಾರಗಳ ಬಗ್ಗೆ ತಿಳಿಸಿದರು.


Ad Widget

Ad Widget

Ad Widget

Ad Widget

Ad Widget

Ad Widget

ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ಮುಖ್ಯ ಅಥಿತಿಗಳಾದ ಶ್ರೀ ಗೋಪಾಲ ಗೌಡರು ವಿತರಿಸಿದರು‌. ಬಳಿಕ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಧ್ಯಕ್ಷರು ಬಹುಮಾನ ನೀಡಿ ಶುಭ ಹಾರೈಸಿದರು.

ಬಹುಮಾನಗಳ ವಿವರವನ್ನು ನಿಲಯಪಾಲಕರಾದ ಶ್ರೀ ಮುರಳಿಕೃಷ್ಣ.ಪಿ.ರವರು ವಾಚಿಸಿದರು‌. ಸಂಸ್ಥೆಯ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಕೆದಿಲಾಯ ಹಾಗೂ ಸದಸ್ಯರಾದ ಹರೀಶ್ ಪುತ್ತೂರಾಯ ಮಕ್ಕಳಿಗೆ ಶುಭ ಹಾರೈಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿಯವರು ಮಾತಾಡಿ ವಸತಿನಿಲಯದ ಮಹತ್ವ ಹಾಗೂ ವಿದ್ಯಾರ್ಥಿ ಜೀವನದಲ್ಲಿ ವಸತಿನಿಲಯದಿಂದಾಗುವ ಪ್ರಯೋಜನಗಳನ್ನು ಹೇಳಿದರು. ಮುಖ್ಯ ಅಥಿತಿಗಳು ಮಾತನಾಡುತ್ತಾ ಭಾರತೀಯ ಸಂಸ್ಕ್ರತಿ ಆಧಾರಿತ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯ ಶ್ರಮವನ್ನು ಗುರುತಿಸಿದರು ಹಾಗೂ ಕೆಲವು ನಿದರ್ಶನದ ಮೂಲಕ ಜೀವನ ಶೈಲಿಯನ್ನು ರೂಪಿಸಿಕೊಳ್ಳುವ ವಿಧಾನವನ್ನು ತಿಳಿಸಿದರು.

ಅವನಿ.ವಸ್.ಪಿ.ಶ್ರೇಯಾ.ಅನ್ವಿತಾ ಪ್ರಾರ್ಥಿಸಿದರು.ನಿಲಯಪಾಲ ಕುಮಾರಿ ಶ್ವೇತಾ ವಂದಿಸಿದರು . ಪ್ರಸಾದ್ ಕುಮಾರ್.ಯಂ. ನಿರೂಪಿಸಿದರು

ಸಂಚಾಲಕರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು, ಮುಂದೆ ಅಧ್ಯಕ್ಷರು ಮುಖ್ಯ ಅಥಿತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು ಹಾಗೂ ಸಂದರ್ಭೋಚಿತವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಸಭಾಕಾರ್ಯಕ್ರಮದ ನಂತರ ವಸತಿನಿಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭೋಜನ ಕೂಟವನ್ನು ಸಂಸ್ಥೆಯಿಂದ ಆಯೋಜಿಸಲಾಯಿತು ಕಾರ್ಯಕ್ರಮದ ಸ್ವಾಗತವನುನು ನಿಲಯಪಾಲಕರಾದ ಕಿಶನ್ ರಾಜ್ .ರೈ ಸ್ವಾಗತಿಸಿದರು.

error: Content is protected !!
Scroll to Top
%d bloggers like this: