ಮಾ.7 ; ಪಾದೆಬಂಬಿಲದಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ,ವಾರ್ಷಿಕ ಭಜನ ಕಾರ್ಯಕ್ರಮ,ಆಶ್ಲೇಷ ಬಲಿ
ಸವಣೂರು : ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀದುರ್ಗಾ ಭಜನಾ ಮಂದಿರದ 20ನೇ ವಾರ್ಷಿಕ ಭಜನಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ,ಸರ್ಪ ಸಂಸ್ಕಾರ,ಆಶ್ಲೇಷ ಬಲಿ ಕೇಶವ ಕಲ್ಲೂರಾಯ ಬಂಬಿಲ ಅವರ ನೇತೃತ್ವದಲ್ಲಿ ಮಾ.7ರಂದು ನಡೆಯಲಿದೆ.

ಮಾ.7ರಂದು ಬೆಳಿಗ್ಗೆ ಗಣಹೋಮ,ಸರ್ಪ ಸಂಸ್ಕಾರ ಆಶ್ಲೇಷ ಬಲಿ,ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ನಡೆಯುವ ಭಜನಾ ಕಾರ್ಯಕ್ರಮದಲ್ಲಿ ದೇವಸ್ಯ ಹರಿನಗರ ಶ್ರೀಹರಿಭಜನಾ ಮಂಡಳಿ,ಚಾರ್ವಾಕ ಶ್ರೀಕಪಿಲೇಶ್ವರ ಭಜನಾ ಮಂಡಳಿ,ಪೆರಿಯಡ್ಕ ಆದಿಶಕ್ತಿ ಭಜನಾ ಮಂಡಳಿ,ಕುಮಾರಮಂಗಲ ಕೃಷ್ಣಾರ್ಪಿತ ಭಜನಾ ಮಂಡಳಿ,ನರಿಮೊಗರು ಪ್ರಖ್ಯಾತಿ ಭಜನ ಮಂಡಳಿ,ಕಾಣಿಯೂರು ಶ್ರೀಲಕ್ಷ್ಮೀ ನರಸಿಂಹ ಭಜನಾ ಮಂಡಳಿ ಪಾಲ್ಗೊಳ್ಳುವರು.

ಸಂಜೆ 4.30ರಿಂದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ,ಮಹಾಪೂಜೆಯ ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ಎಸ್.ಅಂಗಾರ,ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ್,ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು,ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ತಾ.ಪಂ.ಉಪಾಧ್ಯಕ್ಷೆ ಲಲಿತಾ ಈಶ್ವರ್,ತಾ.ಪಂ.ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುಪ್ರಿತ್ ರೈ ಖಂಡಿಗ,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್,ನಾಭಿರಾಜ ಆರಿಗ ಬಂಬಿಲಗುತ್ತು,ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ,ಪಾದೆಬಂಬಿಲ ಶ್ರೀದುರ್ಗಾ ಭಜನ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ,ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಬಿ.ಕೆ.ರವಿ ಕುಮಾರ್ ಪಾಲ್ಗೊಳ್ಳುವರು.

ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ ೯ರಿಂದ ಸ್ಥಳೀಯ ವಿದ್ಯಾರ್ಥಿಗಳಿಂದ ಹಾಗೂ ಕಣ್ವರ್ಷಿ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.ರಾvರಿ ಕಿಶೋರ್ ಶೆಟ್ಟಿ ನಿರ್ದೇಶನದ ಲಹರಿ ತಂಡದ ತುಳು ಹಾಸ್ಯಮಯ ನಾಟಕ ಪುದರ್ ಬೊಡ್ಚಿ-ಊರು ಬೊಡ್ಚಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಭಜನ ಮಂಡಳಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ,ಅಧ್ಯಕ್ಷ ಹೊನ್ನಪ್ಪ ಗವಡ ಜಾರಿಗೆತ್ತಡಿ,ಕಾರ್ಯದರ್ಶಿ ಪುಟ್ಟಣ್ಣ ಪರಣೆ ತಿಳಿಸಿದ್ದಾರೆ.