ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟ ಸಮಾರೋಪ
ಪುತ್ತೂರು : ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ನೆಹರುನಗರ ಸುದಾನ ವಸತಿ ಶಾಲಾ ಕ್ರೀಡಾಂಗಣದಲ್ಲಿ ನಡೆದ ಕುಲಾಲ ಬಾಂಧವರ ತಾಲೂಕು ಮಟ್ಟದ ವೈಯಕ್ತಿಕ ಸ್ಪರ್ಧೆಗಳು ಹಾಗೂ ಅಂತರ್ ತಾಲೂಕು ಮಟ್ಟದ ಗುಂಪು ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ ಹಾಗೂ ಸಮಾರೋಪ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸೌತ್ ವೆಸ್ಟರ್ನ್ ರೈಲ್ವೇಯ ಸುಪರಿಡೆಂಟ್ ಎಂ.ಬಾಲಕೃಷ್ಣ ವಹಿಸಿದ್ದರು.
ಕಾರ್ಪೋರೇಶನ್ ಬ್ಯಾಂಕ್ ಬೊಳ್ವಾರು ಶಾಖೆಯ ಸಹಾಯಕ ಪ್ರಬಂಧಕ ಪ್ರಸಾದ್ ಕುಲಾಲ್ ಮಾರ್ನಬಲ್ ಬಹುಮಾನ ವಿತರಿಸಿದರು.

ವೀರಮಂಗಲ ಶಾಲಾ ಶಿಕ್ಷಕಿ ಹರಿಣಾಕ್ಷಿ ವಸಂತ್,ಪುಣಚ ಗ್ರಾ.ಪಂ.ಅಭಿವೃದ್ದಿ ಅಽಕಾರಿ ಲಾವಣ್ಯ ಸೀತಾರಾಮ,ಉದಯವಾಣಿಯ ಪ್ರಸರಣ ವಿಭಾಗದ ಪುತ್ತೂರು ವಿಭಾಗದ ಜಯಾನಂದ ಸಿ.ಎಚ್,ಸಿವಿಲ್ ಎಂಜಿನಿಯರ್ ಮತ್ತು ಸರ್ವೆಯರ್ ರಾಜಶೇಖರ್ ರಾಮನರ ಪಾಲ್ಗೊಂಡಿದ್ದರು.

ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಕಬಡ್ಡಿಯಲ್ಲಿ ಕೆ.ಜೆ ಬಂಟ್ವಾಳ ಪ್ರಥಮ ,ಕುಲಾಲ್ ಫ್ರೆಂಡ್ಸ್ ದ್ವಿತೀಯ ಹಾಗೂ ಟ್ರೋಫಿ ಪಡೆದುಕೊಂಡರು.
ವಾಲಿಬಾಲ್‌ನಲ್ಲಿ ಕುಲಾಲ ಸಮಾಜ ಸೇವಾ ಸಂಘ ಪ್ರಥಮ, ಕುಲಾಲ ಫ್ರೆಂಡ್ಸ್ ಕಾಡುಮಠ ದ್ವಿತೀಯ ಹಾಗೂ ಟ್ರೋಫಿ,ಹಗ್ಗಜಗ್ಗಾಟದಲ್ಲಿ ಸಿದ್ದಿವಿನಾಯಕ ಭಜನಾ ಮಂಡಳಿ ಕುತ್ತಿನ,ಬೆಳ್ತಂಗಡಿ ಪ್ರಥಮ, ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ದ್ವಿತೀಯ ಹಾಗೂ ಟ್ರೋಫಿ ಪಡೆದುಕೊಂಡರು.

ಮಹಿಳಾ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಯಶಸ್ವಿನಿ ಕಾವು ಮತ್ತು ತಂಡ ಪ್ರಥಮ , ಕುಲಾಲ್ ಮಹಿಳಾ ಸಂಘ ಮಾಣಿ ದ್ವಿತೀಯ ಹಾಗೂ ಟ್ರೋಫಿ, ಹಗ್ಗಜಗ್ಗಾಟಲ್ಲಿ ಕುಲಾಲ್ ಮಹಿಳಾ ಸಮಘ ಮಾಣಿ ಪ್ರಥಮ , ಪುತ್ತೂರು ಕುಲಾಲ ಮಹಿಳಾ ಸಂಘ ,ದ್ವಿತೀಯ ಹಾಗೂ ಟ್ರೋಫಿ ಬಹುಮಾನ ಪಡೆದುಕೊಂಡರು.
ಹಾಗೂ ಮಕ್ಕಳ ವಿಭಾಗ,ಪುರುಷರ ವಿಭಾಗ,ಮಹಿಳಾ ವಿಭಾಗದಲ್ಲಿ ವೈಯುಕ್ತಿಕ ಸ್ಪರ್ಧೆಗಳು ನಡೆಯಲಿದೆ.ವಯಯುಕ್ತಿಕ ಸ್ಪರ್ಧೆಗಳು ಪುತ್ತೂರು ತಾಲೂಕಿನ ಕುಲಾಲ ಸಮಾಜ ಬಾಂಧವರಿಗೆ ನಡೆಸಲಾಗಿತ್ತು. ಗುಂಪು ಸ್ಪರ್ಧೆಗಳು ಅಂತರ್ ತಾಲೂಕು ಮಟ್ಟದ ಸ್ಪರ್ಧೆಗಳಾಗಿತ್ತು.
ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಕೆ ಸ್ವಾಗತಿಸಿ,ಕಾರ್ಯದರ್ಶಿ ಮಹೇಶ್ ಕೆ.ಸವಣೂರು ವಂದಿಸ್ದಿರು.ಕ್ರೀಡಾ ಕಾರ್ಯದರ್ಶಿ ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.