ಕಾರ್ಣಿಕ ಕ್ಷೇತ್ರ ಮುಗೇರಡ್ಕದ ಸತ್ಯೊದ ಮಣ್ಣ್ ಡ್ ಜಿಲ್ಲಾ ಮಟ್ಟದ ಕಬಡ್ಡಿ : ಮಾ.7 ಕ್ಕೆ ಕದನ ಕಣ ರಂಗೇರಲಿದೆ

ದಕ್ಷಿಣಕನ್ನಡದಲ್ಲಿ ಜಗತ್ಪ್ರಸಿದ್ಧವಾದ (!!) ಮುಗೇರಡ್ಕದಲ್ಲಿ ಮತ್ತೊಂದು ತುರುಸಿನ ಸ್ಪರ್ಧೆಗೆ ಯುದ್ದಭೂಮಿ ಅಣಿಯಾಗುತ್ತಿದೆ.

ಮುಗೇರಡ್ಕ ಹೇಳಿ ಕೇಳಿ ಸತ್ಯ ಧರ್ಮೋದ ಕ್ಷೇತ್ರ. ಕಾರ್ಣಿಕ ಮೇರೆತ್ ನ ದೈವಗಳು ನಲಿಪುನ ಭೂಮಿ. ಅ೦ತಹ ನೆಲದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ.

ಚಿರತೆಯ ನೋಟದ, ಕಾಡು ಕೋಣದ ಕಾನ್ಫಿಡೆನ್ಸ್ ನ, ಬಿಲ್ಲಿನ ಫ್ಲೆಕ್ಸಿಬಿಲಿಟಿಯ, ಮಿಂಚಿನ ವೇಗದ, ಚಾಣಕ್ಯ ತಂತ್ರದ ನಿಗಿನಿಗಿ ಯೌವನದ ಹುಡುಗರು ಪರಸ್ಪರ ತೊಡೆ ತಟ್ಟಲಿದ್ದಾರೆ. ಅದರ ಸದ್ದಿಗೆ ಪಕ್ಕದ ನೇತ್ರಾವತಿಯ ನದಿಯಲ್ಲಿ ಸಣ್ಣಗೆ ಕಂಪನ ಖಚಿತ !

ಅಂತಹದೊಂದು ಮಹತ್ವದ ಕಬಡ್ಡಿ ಪಂದ್ಯಾಟಕ್ಕೆ ಅಲೆಕ್ಕಿ- ಮುಗೇರಡ್ಕ ಸಜ್ಜುಗೊಳ್ಳುತ್ತಿದೆ.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಮತ್ತು ನಮ್ಮ ಊರಿನವರೇ ಆದ ಶ್ರೀ ಪ್ರಶಾಂತ ರೈ ಅವರು ಮತ್ತು ತುಳು ಹಾಸ್ಯನಟ ಬಾಬಣ್ಣ ಬೂಬಣ್ಣ ಖ್ಯಾತಿಯ ಶ್ರೀ ಅರವಿಂದ್ ಬೋಳಾರ್ ಅವರು ವಿಶೇಷ ಆಹ್ವಾನಿತರಾಗಿದ್ದಾರೆ.

ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ-ಮುಗೆರಡ್ಕ ಇವರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮತ್ತು ವಲಯ ಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟವು ನಡೆಯಲಿದೆ.

ಮೊದಲ ಬಹುಮಾನ : 15015 ರೂ.

ದ್ವಿತೀಯ ಬಹುಮಾನ : 10010 ರೂ.

ತೃತೀಯ ಮತ್ತು ಚತುರ್ಥ ಬಹುಮಾನ : 4004 ರೂ. ತಲಾ.

ಉದ್ಘಾಟನಾ ಸಮಾರಂಭ :

ಸಮಯ ಮಧ್ಯಾಹ್ನ : 2.30 ಕ್ಕೆ

ಕಾರ್ಯಕ್ರಮದ ಉದ್ಘಾಟನೆಯನ್ನು ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ-ಮುಗೇರಡ್ಕ ಇದರ ಗೌರವಾಧ್ಯಕ್ಷರಾದ ಉದಯ ಭಟ್ ಕೊಳಬ್ಬೆ ಇವರು ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯ ಅಧ್ಯಕ್ಷತೆಯನ್ನು ಶ್ರೀ ಬಾಲಕೃಷ್ಣ ಗೌಡ ಅದಕ್ಕೆ ಅಧ್ಯಕ್ಷರು ಶ್ರೀ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್, ಆಲೆಕ್ಕಿ ಇವರು ವಹಿಸಿಕೊಂಡಿದ್ದಾರೆ.

ಮುಖ್ಯ ಅತಿಥಿಗಳಾಗಿ ಯಶವಂತ ಎಸ್. ತಾಲ್ಲೂಕು ಯೋಜನಾಧಿಕಾರಿಗಳು, SKDRDP, ಗುರುವಾಯನಕೆರೆ; ಶ್ರೀ ರಾಜೀವ ರೈ, ಮಾಜಿ ಅಧ್ಯಕ್ಷರು ಸಹಕಾರಿ ಪತ್ತಿನ ಬ್ಯಾಂಕ್ ಪದ್ಮುಂಜ; ಶ್ರೀ ರಾಮಣ್ಣಗೌಡ, ದೇವಸ್ಯ ಗುತ್ತು, ಗುತ್ತು, ಆಡಳಿತ ಮೊಕ್ತೇಸರರು ಮುಗೇರಡ್ಕ, ಶ್ರೀ ಶೈಲೇಶ್ ಕುಮಾರ್, ಉದ್ಯಮಿಗಳು, ಉಪ್ಪಿನಂಗಡಿ; ಆನಂದಗೌಡ, ಬರಮೇಲು, ಸದಸ್ಯರು ಗ್ರಾಮ ಪಂಚಾಯತಿ, ಮೊಗ್ರು, ಗ್ರಾಮ ಪಂಚಾಯತ್ ಸದಸ್ಯರು; ಶ್ರೀಮತಿ ಚಂದ್ರಕಲಾ ಗೌಡ ನಟರಾಜ ಗ್ರಾಮ ಪಂಚಾಯತ್ ಸದಸ್ಯರು; ಶ್ರೀ ಅಶೋಕ್ ಗೌಡ ಅಧ್ಯಕ್ಷರು ಗೆಳೆಯರ ಬಳಗ; ಶ್ರೀ ಪದ್ಮಯ್ಯ ಗೌಡ ಅತವು, ಅಧ್ಯಕ್ಷರು, ನಾಗಶ್ರೀ ಗೆಳೆಯರ ಬಳಗ; ಶ್ರೀಮತಿ ಮಮತಾ ಏಳಂಜಿ ಮಾರು ಅಧ್ಯಕ್ಷರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಬಂದಾರು ಇವರುಗಳು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ವಿವರ :

ಅದೇ ದಿನ ಸಂಜೆ 7.30 ಕ್ಕೆ ಸಭಾ ಕಾರ್ಯಕ್ರವಿದ್ದು ಅದಕ್ಕೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ, ಶ್ರೀ ಸಂಜೀವ ಮಠಂದೂರು ಮತ್ತು ಎಸ್ ಡಿಎಂ ಶಿಕ್ಷಣ ಸಂಸ್ಥೆಯ ಕನ್ನಡ ಉಪನ್ಯಾಸಕರಾದ ಡಾ. ದಿವಾ ಕೊಕ್ಕಡ ಇವರು ಭಾಗವಹಿಸಲಿದ್ದಾರೆ.

ಸಂಜೆಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಶ್ರೀ ಪುಂಡಲೀಕ ಆಚಾರ್ಯ, ಶ್ರೀ ಉದಯಕುಮಾರ್ ಬಿಕೆ , ಶ್ರೀ ಮೋಹನ್ ಪೂಜಾರಿ, ಶ್ರೀ ಮನೋಹರ ಗೌಡ- ಅಂತರ ಮನೆ,  ಶ್ರೀ ಸುಬ್ರಹ್ಮಣ್ಯ ಕೈಕುರೆ, ಬಾರ್ಯ ಇವರುಗಳು ಆಗಮಿಸಲಿದ್ದಾರೆ.

ಸಮಾರೋಪ ಸಮಾರಂಭ :

ದಿನಾಂಕ 8/3/2020, ಭಾನುವಾರ
ಅಧ್ಯಕ್ಷತೆ : ಶ್ರೀ ಅಶೋಕ್ ಗೌಡ ಬರುಂಗ್ ಡೇಲ್, ಮಾಜಿ ಅಧ್ಯಕ್ಷರು, ಜೈಶ್ರೀರಾಮ್ ಫ್ರೆಂಡ್ಸ್ ಕ್ಲಬ್
ಮುಖ್ಯ ಅತಿಥಿಗಳು : ಶ್ರೀ ಉಮೇಶ್ ಗೌಡ ಪರಕ್ಕಜೆ, ಅಧ್ಯಕ್ಷರು ಗೌಡ ಯಾನೆ ಒಕ್ಕಲಿಗ ಸೇವಾ ಸಂಘ, ಮುಗೆರಡ್ಕ ; ಶ್ರೀ ಚಂದ್ರಹಾಸ ಗೌಡ ದೇವಸ್ಯ ಗುತ್ತು, ಪ್ರಗತಿಪರ ಕೃಷಿಕರು ; ಶ್ರೀ ಕೊರಗಪ್ಪ ಗೌಡ, ಪುನಿಕೆತ್ತಡಿ,  ಪ್ರಗತಿಪರ ಕೃಷಿಕರು.
ಸಮಯ : ಬೆಳಿಗ್ಗೆ 4 ಕ್ಕೆ

” ಸರ್ವರಿಗೂ ಸ್ವಾಗತ “

Leave A Reply

Your email address will not be published.