ಗೋವಾ-ಯಶವಂತಪುರ ರೈಲಿಗೆ ಕಾಣಿಯೂರಲ್ಲಿ ನಿಲುಗಡೆ | ಶೋಭಾ ಕರಂದ್ಲಾಜೆ ಮನವಿಗೆ ಸುರೇಶ್ ಅಂಗಡಿ ಸ್ಪಂದನೆ

ಕರಾವಳಿ ಕರ್ನಾಟಕದ ಜನತೆಯ ದಶಕಗಳ ಬೇಡಿಕೆಯಾದ ಮಂಗಳೂರು ಪಡೀಲ್ ರೈಲ್ವೇ ಜಂಕ್ಷನ್ ಮೂಲಕ ಹಾದು ಹೋಗುವ ಯಶವಂತಪುರ- ವಾಸ್ಕೋ ಗೋವಾ ವಿಶೇಷ ಎಕ್ಸ್ ಪ್ರೆಸ್ ರೈಲು ಇದೇ ಮಾರ್ಚ್ 7 ರಂದು ಆರಂಭಗೊಳ್ಳುವ ನಿರೀಕ್ಷೆಯಿದ್ದು,ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರ ಮನವಿ ಮೇರೆಗೆ ರೈಲ್ವೇ ರಾಜ್ಯಸಚಿವರಾದ ಸುರೇಶ್ ಅಂಗಡಿಯವರು ಈ ರೈಲು ಸೇವೆಗೆ ಸಮ್ಮತಿ ಸೂಚಿಸಿರುತ್ತಾರೆ.

ಗೋವಾ-ಯಶವಂತಪುರ ರೈಲಿಗೆ ಕಾಣಿಯೂರಲ್ಲಿ ನಿಲುಗಡೆ


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇತ್ತೀಚೆಗೆ ಶೋಭಾ ಕರಂದ್ಲಾಜೆಯವರು ಕಾಣಿಯೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿಸದಸ್ಯ,ಕಾಣಿಯೂರು ಗ್ರಾ.ಪಂ.ಸದಸ್ಯ ಗಣೇಶ್ ಉದುನಡ್ಕ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಂಸದರಿಗೆ ಮನವಿ ಮಾಡಿ ಕಾಣಿಯೂರಿನಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗೊಳಿಸುವಂತೆ ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ರೈಲ್ವೇ ರಾಜ್ಯ ಸಚಿವ ಸುರೇಶ್ ಅಂಗಡಿಯವರನ್ನು ಭೇಟಿ ಮಾಡಿ ಹೊಸ ಎಕ್ಸ್‌ಪ್ರೆಸ್‌ ರೈಲು ಬಿಡುಗಡೆಗೊಳಿಸಿರುವ ಬಗ್ಗೆ ಅಭಿನಂದನೆ ಸಲ್ಲಿಸುವುದರೊಂದಿಗೆ, ಹಲವು ಊರುಗಳಿಗೆ ಕೇಂದ್ರಸ್ಥಾನವಾಗಿರುವ ಕಾಣಿಯೂರಿನಲ್ಲಿ ಹೊಸ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ರೈಲ್ವೇ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದು ಸಂಸದರು ತಿಳಿಸಿದ್ದಾರೆ.ನೂತನ ರೈಲಿನ ವೇಳಾಪಟ್ಟಿ ಮತ್ತು ನಿಲ್ದಾಣಗಳ ಬಗ್ಗೆ ಶೀಘ್ರದಲ್ಲೇ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

error: Content is protected !!
Scroll to Top
%d bloggers like this: