ಉಪ್ಪಿನಂಗಡಿ ನಡು ರಸ್ತೆಯಲ್ಲಿ ಬೈಕ್ ಧಗ ಧಗ !

ಉಪ್ಪಿನಂಗಡಿಯಿಂದ ಗುರುವಾಯಕೆರೆ ಗೆ ಹೋಗುವ ನಡು ರಸ್ತೆಯಲ್ಲಿ ಬೈಕೊಂದು ಧಗ ಧಗ ಹೊತ್ತಿ ಉರಿದಿದೆ.


Ad Widget

ಉಪ್ಪಿನಂಗಡಿಯ ನೇತ್ರಾವತಿ ಸೇತುವೆ ದಾಟಿದ ಕೂಡಲೇ ಸಿಗುವ ಹೆಚ್ ಎಂ ಹಾಲ್ ನ ಸ್ವಲ್ಪ ಮುಂದಕ್ಕೆ ಚಲಿಸುತ್ತಿದ್ದ ಡ್ಯೂಕ್ ಬೈಕ್ ಸವಾರನ ನಿಯಂತ್ರಣ ಕಳೆದುಕೊಂಡ ಪರಿಣಾಮ ಡಾಮರ್ ರೋಡಿಗೆ ಬಿದ್ದು, ಬಿದ್ದ ಸ್ಪೀಡಿಗೆ ಸ್ವಲ್ಪ ದೂರ ರಸ್ತೆಗೆ ಒರೆಸಿಕೊಂಡು ಹೋಗಿದೆ.


Ad Widget

ಆಗ ಚೆಲ್ಲಿದ ಪೆಟ್ರೋಲ್ ಮತ್ತು ಉಂಟಾದ ಘರ್ಷಣೆಯ ಕಿಡಿಯಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಪೂರ್ತಿ ಬೈಕಿಗೆ ಆವರಿಸಿಕೊಂಡು ಅಗ್ನಿಶಾಮಕ ದಳ ಬರುವಷ್ಟರಲ್ಲಿ ಬೈಕಿನ ಕಳೇಬರ ಮಾತ್ರ ಉಳಿದಿದೆ !


Ad Widget

ಪಕ್ಕದ ಮ್ಯಾರೇಜ್ ಹಾಲ್ ನಲ್ಲಿ ಫೈರ್ ಎಕ್ಸ್ಟಿಂಗ್ವಿಷರ್ ಅನ್ನು ತಂದು ಯಾರೂ ಬೆಂಕಿ ಆರಿಸಲು ಪ್ರಯತ್ನಿಸಲಿಲ್ಲ. ಗಾಡಿಯ ಸವಾರನಿಗೆ ಬಹುಶಃ ಅಪಘಾತದ ಸಮಯದಲ್ಲಿ ಅದು ಹೊಳೆಯಲಿಲ್ಲ.

Ad Widget

Ad Widget

Ad Widget
error: Content is protected !!
Scroll to Top
%d bloggers like this: