ಪುತ್ತೂರು-ಕುದ್ಮಾರು-ಕಡಬ ರಸ್ತೆಯಲ್ಲಿ ಸರಕಾರಿ ಬಸ್ ಸಂಚಾರ ವ್ಯತ್ಯಯ

ಕಡಬ:ಸವಣೂರು-ಕುದ್ಮಾರು-ಶಾಂತಿಮೊಗರು ರಸ್ತೆಯ ಕುದ್ಮಾರು ಬಳಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ ಸಂಚಾರದಲ್ಲಿ ಸೋಮವಾರದಂದು ತಡೆ ಉಂಟಾಗಿದೆ.


Ad Widget

ಈ ರಸ್ತೆಯಲ್ಲಿರುವ ಕೂರ ಜುಮಾ ಮಸೀದಿಯ ಬಳಿ ರಸ್ತೆಯ ಉಬ್ಬುಗಳನ್ನು ತೆರವುಗೊಳಿಸುವ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರಿನಿಂದ ಶಾಂತಿಮೊಗರು ಮಾರ್ಗವಾಗಿ ಕಡಬ ತೆರಳುವ ಹಾಗೂ ಕಡಬದಿಂದ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳುವ ಎಲ್ಲಾ ಬಸ್ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ. ಬೆಳ್ಳಾರೆ-ಸವಣೂರು-ಕಡಬ ಮೂಲಕ ಹೋಗುವ ಬಸ್‌ನಲ್ಲೂ ವ್ಯತ್ಯಯ ಉಂಟಾಗಿದೆ.

error: Content is protected !!
Scroll to Top
%d bloggers like this: